ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?


Team Udayavani, May 16, 2022, 11:48 AM IST

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ಮೇ ಮೊದಲ ವಾರದಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆಯ ಅಬ್ಬರ ಜೋರಾಗಿದೆ. ಮೇ ತಿಂಗಳಿನಲ್ಲಿ ಕನ್ನಡದಲ್ಲಿ ಯಾವುದೇ ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ, ಕಳೆದ ಎರಡು-ಮೂರು ವರ್ಷಗಳಿಂದ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಬಹುತೇಕ ಹೊಸಬರ ಸಿನಿಮಾಗಳು ಮೇ ತಿಂಗಳಿನಲ್ಲಿ ತೆರೆಗೆ ಬರಲು ಮುಂದಾಗಿವೆ. ಹೀಗಾಗಿ ಚಿತ್ರರಂಗ ಮತ್ತು ಪ್ರೇಕ್ಷಕರ ನಿರೀಕ್ಷೆಯಂತೆ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ಹೊಸಬರ ಸಿನಿಮಾಗಳು ಸ್ಯಾಂಡಲ್‌ ವುಡ್‌ನ‌ಲ್ಲಿ ರಂಗು ಹೆಚ್ಚಿಸಲಿವೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಮೇ ಮೊದಲ ಶುಕ್ರವಾರ (ಮೇ. 6ಕ್ಕೆ) “ಅವತಾರ ಪುರುಷ’, “ಟಕ್ಕರ್‌’, “ಪುರುಷೋತ್ತಮ’, “ದ್ವಿಮುಖ’, “ನೆನಪಾಗುತ್ತಿಲ್ಲ’, ಮತ್ತು “ಮ್ಯಾನ್‌ ಆಫ್ ದಿ ಮ್ಯಾಚ್‌’ (ಓಟಿಟಿ) ಆರು ಸಿನಿಮಾಗಳು ಬಿಡುಗಡೆಯಾಗಿದ್ದವು. ಮೇ ಎರಡನೇ ಶುಕ್ರವಾರ (ಮೇ. 13) “ಕಸ್ತೂರಿ ಮಹಲ್‌’, “ಕ್ರಿಟಿಕಲ್‌ ಕೀರ್ತನೆಗಳು’, “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಮತ್ತು “ಅತ್ಯುತ್ತಮ’ ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು.

ಇದನ್ನೂ ಓದಿ:‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…

ಇನ್ನು ಮೇ ಮೂರನೇ ಶುಕ್ರವಾರ (ಮೇ. 20) ಸಿನಿಮಾಗಳ ಬಿಡುಗಡೆಯ ಸಂಖ್ಯೆಯಲ್ಲಿ ಇನ್ನೂ ಏರಿಕೆ ಕಂಡಿದೆ. “ಟ್ವೆಂಟಿ ಒನ್‌ ಅವರ್’, “ಗರುಡ’, “ಸಾರಾವಜ್ರ’, “ದಾರಿ ಯಾವುದಯ್ಯ ವೈಕುಂಠಕೆ…’, “ಆ್ಯಂಗರ್‌’, “ಕಂಡ್ಹಿಡಿ ನೋಡನ’, “ಸಕುಟುಂಬ ಸಮೇತ’, “ಕಟ್ಟಿಂಗ್‌ ಶಾಪ್‌’, “ಪ್ರಾರಂಭ’ ಸೇರಿದಂತೆ ಒಂಭತ್ತು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಬಿಡುಗಡೆಗೆ ಇನ್ನೂ ಮೂರು ದಿನಗಳಿರುವುದರಿಂದ ಈ ಪಟ್ಟಿಗೆ ಕೊನೆಕ್ಷಣದಲ್ಲಿ ಇನ್ನಷ್ಟು ಸಿನಿಮಾಗಳು ಸೇರ್ಪಡೆಯಾಗಿ ಬಿಡುಗಡೆಯ ಸಿನಿಮಾಗಳ ಸಂಖ್ಯೆ ಎರಡಂಕಿ ದಾಟಿದರೂ ಅಚ್ಚರಿಯಿಲ್ಲ.

ಟಾಪ್ ನ್ಯೂಸ್

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ 

ರೈತರಿಂದ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಡಿ : ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ 

1-sad

ಧಾರಾಕಾರ ಮಳೆ: ಭಾರೀ ನೆರೆಗೆ ನಲುಗಿದ ನಾವುಂದ; ನೂರಾರು ಮನೆಗಳು ಜಲಾವೃತ

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

ಗುತ್ತಿಗೆ – ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಪ್ರಯತ್ನ : ಸಚಿವ ಡಾ.ಕೆ.ಸುಧಾಕರ್‌

shashi-taroor

ನಾನು ಟ್ವೀಟ್ ಮಾಡುವುದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ : ಶಶಿ ತರೂರ್

17ashok

ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ, ಹಾನಿಗೆ 50 ಸಾವಿರ ಪರಿಹಾರ; ಆರ್‌ ಅಶೊಕ್‌

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

Boris

Updated: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

ಜುಲೈ 08 ರಿಂದ ಗಿರ್ಕಿಯಾಟ

ಜುಲೈ 08 ರಿಂದ ಗಿರ್ಕಿಯಾಟ

ಹೊಯ್ಸಳದಲ್ಲಿ ಧನಂಜಯ್‌ ಖಡಕ್‌ ಲುಕ್‌

ಹೊಯ್ಸಳದಲ್ಲಿ ಧನಂಜಯ್‌ ಖಡಕ್‌ ಲುಕ್‌

ವೆಡ್ಡಿಂಗ್ ಗಿಫ್ಟ್: ಲಾಯರ್ ಪಾತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ನಟಿ ಪ್ರೇಮಾ

ವೆಡ್ಡಿಂಗ್ ಗಿಫ್ಟ್: ಲಾಯರ್ ಪಾತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ನಟಿ ಪ್ರೇಮಾ

ಜುಲೈ 15ರಂದು ಚಿತ್ರ ತೆರೆಗೆ: `ಚೇಸ್’ ಸಿನಿಮಾದ ವಿತರಣಾ ಹಕ್ಕು ಖರೀದಿಸಿದ ಯುಎಫ್ಒ

ಜುಲೈ 15ರಂದು ಚಿತ್ರ ತೆರೆಗೆ: `ಚೇಸ್’ ಸಿನಿಮಾದ ವಿತರಣಾ ಹಕ್ಕು ಖರೀದಿಸಿದ ಯುಎಫ್ಒ

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

money 1

ವಿದ್ಯುತ್‌ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ : ಬೆಸ್ಕಾಂ ಸ್ಪಷ್ಟನೆ

ದೇಶದ ಪ್ರಬುದ್ಧ ರಾಜಕಾರಣಿಯಾಗಿದ್ದ ಬಾಬೂಜಿ; ಜಿಲ್ಲಾಧಿಕಾರಿ

ದೇಶದ ಪ್ರಬುದ್ಧ ರಾಜಕಾರಣಿಯಾಗಿದ್ದ ಬಾಬೂಜಿ; ಜಿಲ್ಲಾಧಿಕಾರಿ

ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಬಂಧನ

ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ಬಂಧನ

1-sad-dad

ಚಿಂಚೋಳಿ ಪುರಸಭೆ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ನ ಸುಲೋಚನಾ ಜಗನ್ನಾಥ್ ಕಟ್ಟಿ

ರಾಜಕಾರಣಿಗಳು ಪತ್ರಿಕೆ ಮಾಲೀಕತ್ವ ಪಡೆದ್ರೆ ಕಷ್ಟ; ಮುಖ್ಯಮಂತ್ರಿ ಬೊಮ್ಮಾಯಿ

ರಾಜಕಾರಣಿಗಳು ಪತ್ರಿಕೆ ಮಾಲೀಕತ್ವ ಪಡೆದ್ರೆ ಕಷ್ಟ; ಮುಖ್ಯಮಂತ್ರಿ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.