ಶಿವಣ್ಣ ಅಭಿಮಾನಿಗಳಿಂದ ಕ್ಯಾಲೆಂಡರ್ ಬಿಡುಗಡೆ
Team Udayavani, Jan 20, 2019, 6:02 AM IST
ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಸೇನಾ ಸಮಿತಿ, 2019ನೇ ಸಾಲಿನ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಿದೆ.
ಒಟ್ಟು 12 ಪುಟಗಳನ್ನು ಹೊಂದಿರುವ ಈ ಕ್ಯಾಲೆಂಡರ್ನಲ್ಲಿ ಡಾ. ರಾಜಕುಮಾರ್ ಅವರ ಅಪರೂಪದ ಫೋಟೋಗಳು, ಅಭಿನಯಿಸಿರುವ ವಿವಿಧ ಚಿತ್ರಗಳ ಪಾತ್ರಗಳು, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ವಿವಿಧ ಫೋಟೋಗಳನ್ನು ಬಳಸಿಕೊಂಡು ಆಕರ್ಷಣೀಯವಾಗಿ ವಿನ್ಯಾಸ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಸೇನಾ ಸಮಿತಿಯ ಗಾಂಧಿನಗರ ಕೇಂದ್ರ ಸಮಿತಿ ಶಿವರಾಜ್ಕುಮಾರ್ ಅಭಿಮಾನಿಗಳಿಗಾಗಿ ಈ ಕ್ಯಾಲೆಂಡರ್ನ್ನು ಮುದ್ರಿಸಿ ಹೊರತರುತ್ತಿದೆ.