“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

Team Udayavani, Sep 28, 2022, 3:19 PM IST

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

ದಿ ಚೆಕ್‌ ಮೇಟ್‌ ಇದು ಮೊದಲನೇ ಸುತ್ತಿ ನ ಆಟ “ದಿ ಚೆಕ್‌ ಮೇಟ್‌ ‘ – ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.

ಭಾರತೀಶ ವಸಿಷ್ಠ ಹಾಗೂ ಸಂತೋಷ ಚಿಪ್ಪಾಡಿ ಈ ಚಿತ್ರದ ನಿರ್ದೇಶಕರು. “ರೌಂಡ್‌ ಓನ್‌ ಪ್ಲೇ ದ ಗೇಮ್‌’ ಎಂಬ ಟ್ಯಾಗ್‌ಲೈನ್‌ ಚಿತ್ರಕ್ಕಿದೆ. “ಜಗದ್‌ ಜ್ಯೋತಿ ಮೂವಿ ಮೇಕರ್ ‘ ಬ್ಯಾನರ್‌ ಅಡಿಯಲ್ಲಿ ರಂಜನ್‌ ಹಾಸನ್‌ ಬಂಡವಾಳ ಹೂಡಿರುವ ಚಿತ್ರ, ತನ್ನ ಶೂಟಿಂಗ್‌, ಸೆನ್ಸಾರ್‌ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ ಮೊದಲ ಹಂತವಾಗಿ, ಚಿತ್ರದ ಹಾಡು ಹಾಗೂ ಟ್ರೇಲರ್‌ ಬಿಡುಗಡೆಗೊಳಿಸಿದೆ. ಚಿತ್ರ ನಿರ್ಮಾಪಕ ಕಂ ನಾಯಕ ರಂಜನ್‌ ಹಾಸನ್‌ ಮಾತನಾಡಿ, “ಚದುರಂಗ ಅಂದರೆ ಬುದ್ಧಿವಂತರ ಆಟ ಎಂದೇ ಪ್ರಖ್ಯಾತಿ. ಚೆಸ್‌ ಆಧಾರವಾಗಿಟ್ಟುಕೊಂಡು ತಯಾರಿಸಿದ ಕಥೆ “ದಿ ಚೆಕ್‌ ಮೇಟ್‌’. ಹೊಸ ಬಗೆಯ ಚಿತ್ರ ನಮ್ಮದು. ನಿರ್ದೇಶಕರು ಮೊದಲು ಕಥೆ ಹೇಳಿದಾಗಲೇ ಭಿನ್ನ ಅನಿಸಿತ್ತು. ನಂತರ ಅವರ ಕೆಲಸ ನೋಡಿ ಕನ್‌ಫ‌ರ್ಮ್ ಆಯಿತು. ಪ್ರೀತಿ, ಸ್ನೇಹ, ಬದುಕು ಈ ಮೂರು ಅಂಶಗಳನ್ನು ಇಟ್ಟು ಚಿತ್ರ ಮಾಡಿದ್ದೇವೆ. ಕೊರೊನಾ ಮೊದಲ ಲಾಕ್‌ಡೌನ್‌ನಲ್ಲಿ ಅರ್ಧಗೊಳಿಸಿದ್ದ ಚಿತ್ರವನ್ನು, ಎರಡನೇ ಲಾಕ್‌ಡೌನ್‌ ನಂತರ ಪೂರ್ಣಗೊಳಿಸಿ, ಈಗ ಸೆನ್ಸಾರ್‌ ಆಗಿ,ಅಕ್ಟೋಬರ್‌ 7 ರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಇದು ಕೇವಲ ಚಿತ್ರದ ಮೊದಲನೇ ಭಾಗ. ಎರಡನೇ ಭಾಗ ಬಾಕಿ ಇದೆ’ ಎಂದರು. ‌

ಚಿತ್ರ ನಿರ್ದೇಶಕರಲ್ಲೊಬ್ಬರಾದ ಭಾರತೀಶ ವಸಿಷ್ಠ ಮಾತನಾಡಿ, “ಸ್ನೇಹ, ಪ್ರೀತಿ ಬದುಕು ಇವುಗಳಲ್ಲಿ ಯಾವುದು ಪ್ರಮುಖ ಎಂದು ನಿರ್ಧರಿಸುವುದು ಕಷ್ಟ. ಬದುಕಿನ ಸಂದರ್ಭಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಇದನ್ನ ಹೇಳಹೊರಟಿರುವ ಕಥೆಯೇ ದಿ ಚೆಕ್‌ ಮೇಟ್‌. ಇನ್ನು ಚಿತ್ರ ಕಥೆ ಬಗ್ಗೆ ಹೇಳುವುದಾದರೆ, ನಾಲ್ಕು ಜನ ಸ್ನೇಹಿತರು ತಮ್ಮ ತಮ್ಮ ಬ್ರೇಕಪ್‌ ಪಾರ್ಟಿ ಮಾಡಲು ಒಂದೆಡೆ ಸೇರಿದಾಗ, ಅಲ್ಲಿ ನಡೆಯುವ ವಿಚಿತ್ರ ಅನುಭವಗಳು, ಚದುರಂಗದ ಆಟ, ಅದರ ಫ‌ಲಿತಾಂಶ ಏನು ಎಂಬುದೇ ಈ ಕಥೆ. ಚದುರಂಗದ ಜೊತೆಯಲ್ಲಿ ಕುತೂಹಲಕಾರಿಯಾಗಿ ಕಥೆ ಸಾಗಲಿದೆ’ ಎಂದರು.

ರಂಜನ್‌ ಹಾಸನ್‌ ನಾಯಕನಾಗಿ ಅಭಿನಯಿಸಿದ್ದು, ಪ್ರೀತು ಪೂಜಾ ನಾಯಕಿಯಾಗಿದ್ದಾರೆ. ನೀನಾಸಂ ಅಶ್ವತ್ಥ್, ವಿಶ್ವ ವಿಜೇತ್‌, ಸುಧೀರ್‌ ಕಾಕ್ರೋಚ್‌, ಪ್ರದೀಪ್‌ ಪೂಜಾರಿ, ಸರ್ದಾರ್‌ ಸತ್ಯ, ವಿಜಯ್‌ ಚೆಂಡೂರು, ಚಿಲ್ಲರ್‌ ಮಂಜು, ಕಾರ್ತಿಕ್‌ ಹುಲಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸತೀಶ್‌ ರಾಜೇಂದ್ರನ್‌ ಛಾಯಾಗ್ರಹಣ, ಈ .ಎಸ್‌. ಈಶ್ವರ್‌, ಸುನೀಲ್‌ ಕಶ್ಯಪ್‌ ಸಂಕಲನ, ಶಶಾಂಕ್‌ ಶೇಶಗಿರಿ ಸಂಗಿತ, ವೈಲೆಂಟ್‌ ವೇಲು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಟಾಪ್ ನ್ಯೂಸ್

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

4

ಹುಮನಾಬಾದ: ಘಾಟಬೋರಳ ಗ್ರಾಮದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ

3

ಸ್ತನ ಕ್ಯಾನ್ಸರ್‌ ಬೇಗನೆ ಪತ್ತೆ ಹಚ್ಚಿದರೆ ಜೀವ ಉಳಿಸಬಹುದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

not-out

ಅಜಯ್ ಪೃಥ್ವಿ ನಟನೆಯ ‘ನಾಟ್ಔಟ್’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್

1-wassadsd

ಕಾಂತಾರದ ‘ವರಾಹ ರೂಪಂ’ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್

trailer of Vidhi 370 released

ಟ್ರೇಲರ್‌ನಲ್ಲಿ ‘ವಿಧಿ 370’:  ಡಿಸೆಂಬರ್‌ನಲ್ಲಿ ತೆರೆಗೆ

aditi prabhudeva

ವರ್ಷಪೂರ್ತಿ ‘ಅದಿತಿ’ ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.