ಕೆಜಿಎಫ್ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ದೂರುದಾರ
Team Udayavani, Dec 22, 2018, 11:25 AM IST
“ಕೆಜಿಎಫ್’ ಚಿತ್ರ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ವೆಂಕಟೇಶ್ ಶುಕ್ರವಾರ ಹಿಂಪಡೆದಿದ್ದಾರೆ. ಕೃತಿಚೌರ್ಯ ಆರೋಪದಡಿ “ಕೆಜಿಎಫ್’ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದ ವೆಂಕಟೇಶ್, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆ ಆದೇಶ ತಂದಿದ್ದರು.
ಆದರೆ ಈ ಆದೇಶ ನಿಗಧಿತ ಸಮಯದಲ್ಲಿ “ಕೆಜಿಎಫ್’ ನಿರ್ಮಾಪಕರ ಕೈ ಸೇರದಿದ್ದರಿಂದ ಚಿತ್ರ ಪೂರ್ವ ನಿಗಧಿಯಂತೆ ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯ ಬಳಿಕ ವಿಚಾರಣೆ ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಾಗ ಹಾಜರಾದ ದೂರುದಾರ ವೆಂಕಟೇಶ್, ಕೆಲವು ಮಾಹಿತಿ ಕೊರತೆಯಿಂದ ದೂರು ದಾಖಲಾಗಿತ್ತು.
ಚಿತ್ರವನ್ನು ನೋಡಿದ ಬಳಿಕ ನಾವು ದೂರಿನಲ್ಲಿ ಉಲ್ಲೇಖೀಸಿದ್ದ ತಂಗಂ ಕಥೆಗೂ “ಕೆಜಿಎಫ್’ಗೂ ಯಾವುದೇ ಸಂಬಂಧ ಇಲ್ಲ ಎಂಬುದು ಮನವರಿಕೆಯಾಗಿದೆ. ಹಾಗಾಗಿ ದೂರನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.