UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು


Team Udayavani, Sep 19, 2024, 10:42 AM IST

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

ಉಪೇಂದ್ರ (Upendra) ಮಾತುಗಳೇ ಹಾಗೆ.. ನೀವು ಒಂದು ಪ್ರಶ್ನೆ ಕೇಳಿ ಅವರಿಂದ ದೀರ್ಘ‌ ಉತ್ತರ ಬಯಸುವಂತಿಲ್ಲ. ಒಂದೊಂದು ವಾಕ್ಯದಲ್ಲಿ ಉತ್ತರಿಸಿಬಿಡುತ್ತಾರೆ. ಇನ್ನೊಂದಿಷ್ಟು ಪ್ರಶ್ನೆಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ. ಅರ್ಥಮಾಡಿಕೊಂಡವರೇ ಪುಣ್ಯಾತ್ಮರು. ಅವರ ಬರ್ತ್‌ಡೇ ದಿನ ಉಪೇಂದ್ರ ಪತ್ರಿಕಾಗೋಷ್ಠಿ ಕರೆದು “ಯು-ಐ’ (UI) ಬಗ್ಗೆ ಮಾತನಾಡಿದರು.

ಹಲವು ಪ್ರಶ್ನೆಗಳು ಉಪ್ಪಿಗೆ ಎದುರಾಯಿತು. ಆದರೆ, ಉಪೇಂದ್ರ ಮಾತ್ರ ಉಪ್ಪಿಟ್ಟು ತಿಂದಷ್ಟೇ ಸಲೀಸಾಗಿ ಒಂದೊಂದೇ ವಾಕ್ಯದಲ್ಲಿ ಉತ್ತರಿಸಿದರು. ಉಪ್ಪಿ “ಯು-ಐ’ ಬಗ್ಗೆ ಹೆಚ್ಚಿನ ಅಂಶಗಳನ್ನು ಬಿಟ್ಟುಕೊಡದೇ ನಗು ನಗುತ್ತಲೇ ಕೆಲವೇ ಕೆಲವು ಮಾತುಗಳನ್ನಾಡಿದರು. ಅವರ ಮಾತಿನ ಹೈಲೈಟ್ಸ್‌ ಹೀಗಿವೆ…

ಎರಡೂವರೆ ವರ್ಷಗಳ ಶ್ರಮ ಯು-ಐ ಸಿನಿಮಾ. ಈಗ ತೆರೆಗೆ ಸಿದ್ಧವಾಗಿದೆ.

ಆರಂಭದಲ್ಲಿ ಇದು ಕನ್ನಡ ಸಿನಿಮಾ ಅಂದುಕೊಂಡೆ ಶುರು ಮಾಡಿದ್ವಿ, ಆದರೆ ಮುಂದೆ ಪ್ಯಾನ್‌ ಇಂಡಿಯಾ ಮಾಡುವ ಯೋಚನೆ ಬಂತು. ಆ ನಂತರ ಸಾಕಷ್ಟು ಅಂಶಗಳು ಸೇರಿಕೊಂಡವು. ಅದಕ್ಕೆ ನಿರ್ಮಾಣ ಸಂಸ್ಥೆ ಕೂಡಾ ಸಾಥ್‌ ನೀಡಿತು.

ಅಕ್ಟೋಬರ್‌ನಲ್ಲಿ ರಿಲೀಸ್‌ ಎಂದಿದ್ದೇವೆ. ಆದರೆ, ಏನು ರಿಲೀಸ್‌ ಎಂದು ಹೇಳಿಲ್ಲ. ರಿಲೀಸ್‌ ಡೇಟ್‌ ಸದ್ಯದಲ್ಲೇ ತೀರ್ಮಾನ ಆಗಲಿದೆ. ಪ್ಯಾನ್‌ ಇಂಡಿಯಾ ಹಾಗೂ ತಂತ್ರಜ್ಞಾನ ಕೆಲಸ ಹೆಚ್ಚಿರುವುದರಿಂದ ಬಿಡುಗಡೆಯಲ್ಲಿ ವಿಳಂಬ ಆಗುತ್ತಿದೆ. ಅಕ್ಟೋಬರ್‌ನಲ್ಲೆ ಚಿತ್ರ ಬರಲಿದೆ. ಸಿನಿಮಾ ತಯಾರಾಗಿದೆ. ಒಮ್ಮೆ ನಾನು ಥಿಯೇಟರ್‌ನಲ್ಲಿ ನೋಡಬೇಕು. ಅದಾದ ನಂತರ ಬಿಡುಗಡೆ ದಿನಾಂಕ ಘೋಷಿಸುತ್ತೇವೆ.

ಚಿತ್ರದಲ್ಲಿ ಲಾಜಿಕಲ್‌, ಸೈಕಾಲಾಜಿಕಲ್‌ ಅಂಶಗಳಿವೆ. ಸಿನಿಮಾ ನೋಡಿದ ನಂತರ ನೀವೇ ಮಾತನಾಡುತ್ತೀರಿ.

ಈ ಸಿನಿಮಾ ಮುಗಿದ ಮೇಲೆ ವರ್ಷಕ್ಕೆರಡು ಸಿನಿಮಾ ಮಾಡುವ ಯೋಚನೆ ಇದೆ.

ನನ್ನ ಸಿನಿಮಾ ಎಂದರೆ ಹುಳ ಬಿಡೋದು ಎನ್ನುತ್ತಾರೆ ಆದರೆ, ಇದು ತಲೆಯಲ್ಲಿರೋ ಹುಳ ತೆಗೆಯುವ ಸಿನಿಮಾ.

ಬೇಕಾದರೆ ಐದೈದು ಮದುವೆಯಾಗಬಹುದು. ಆದರೆ, ನಿರ್ದೇಶನ ಮಾಡೋದು ಬಹಳ ಕಷ್ಟ.

ಲೋಕೇಶ ಕನಕರಾಜ್‌ ನಿರ್ದೇಶನದ ಕೂಲಿ ಸಿನಿಮಾದಲ್ಲಿ ರಜನಿಕಾಂತ್‌ ಜೊತೆ ಮಾಡ್ತಾ ಇದಿನಿ. ಅಲ್ಲಿ ವಿಲನ್‌ ಪಾತ್ರ ಅಲ್ಲ. ಬೇರೆಯೇ ಶೇಡ್‌ನ‌ಲ್ಲಿ ನನ್ನ ಪಾತ್ರವಿದೆ.

ಪ್ರೇಕ್ಷಕರು ಅತಿ ಬುದ್ಧಿವಂತರು, ಅವರ ಮೇಲಿನ ವಿಶ್ವಾಸದಿಂದಲೇ ಈ ಸಿನಿಮಾ ಮಾಡಿರುವೆ. ಅಭಿಮಾನಿಗಳು ಯೆಸ್‌ ಎಂದರೆ ಸಿನಿಮಾ ಗೆದ್ದಂತೆ. ಎಲ್ಲರೂ ಸಿನಿಮಾ ಮೇಕರ್‌ಳಾಗಿದ್ದಾರೆ. ಹೀಗಾಗಿ, ಒಳ್ಳೆಯದನ್ನು ನೀಡಲು ನಾವು ಪ್ರಯತ್ನಿಸಬೇಕು.

ಸಿನಿಮಾ ನಿರ್ದೇಶನ ಅನ್ನೋದು ದೊಡ್ಡ ಫೈಟ್‌. ಪ್ರತಿ ಒಂದು ಹಂತದಲ್ಲೂ ಫೈಟ್‌ ಮಾಡಿ ಸಿನಿಮಾ ತಲುಪಿಸಬೇಕು. ಹಲವು ಕಾರಣದಿಂದ ಸಿನಿಮಾ ವಿಳಂಬ ಆಗಿದೆ. ಯೂಟ್ಯೂಬ್‌ನಲ್ಲಿ ಲೈವ್‌ ಹೋಗುವ ಸ್ಪೀಡ್‌ನ‌ಲ್ಲಿ ಸಿನಿಮಾ ಮಾಡೋಕೆ ಆಗಲ್ಲ.

ಟಾಪ್ ನ್ಯೂಸ್

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್‌ ಜಾಮೀನು ತೀರ್ಪು

Sangeetha Santhosha Kannada Movie

Sangeetha Santhosha: ನವತಂಡದ ಸಂತೋಷದ ಪಯಣ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

Kuladalli Keelyavudo Movie: ಮುಹೂರ್ತದಲ್ಲಿ ಕುಲದಲ್ಲಿ ಕೀಳ್ಯಾವುದೋ

Kuladalli Keelyavudo Movie: ಮುಹೂರ್ತದಲ್ಲಿ ಕುಲದಲ್ಲಿ ಕೀಳ್ಯಾವುದೋ

045

Bhairathi Ranagal: ಕಾವಲಿಗನಾದ ಭೈರತಿ ರಣಗಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

12

Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ

11

Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.