ಸದ್ಯದಲ್ಲೇ ಪುಟ ತೆರೆಯಲಿದೆ … 

Team Udayavani, Sep 26, 2018, 11:37 AM IST

ನಿರ್ದೇಶಕ ದಯಾಳ್‌ ಅವರ “ಆ ಕರಾಳ ರಾತ್ರಿ’ ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಂದು ಹೊಸ ಬಗೆಯ ಚಿತ್ರ ಎಂಬ ಹೆಗ್ಗಳಿಕೆಗೂ ಆ ಚಿತ್ರ ಪಾತ್ರವಾಗಿತ್ತು. ಈಗ ದಯಾಳ್‌ ಮತ್ತೂಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಅದು “ಪುಟ 109′. ದಯಾಳ್‌ “ಆ ಕರಾಳ ರಾತ್ರಿ’ ಹಾಗೂ “ಪುಟ 109′ ಚಿತ್ರವನ್ನು ಒಟ್ಟಿಗೆ ಆರಂಭಿಸಿದ್ದರು.

ಈಗ “ಪುಟ 109′ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್‌ 5 ರಂದು ತೆರೆ ಕಾಣುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾದ ನಂತರ ಚಿತ್ರತಂಡದವರು ಖುಷಿಯಾಗಿರುತ್ತಾರೆ. ಆದರೆ, ದಯಾಳ್‌ ಚಿತ್ರ ಬಿಡುಗಡೆ ಮುನ್ನವೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ನಟ ಸುದೀಪ್‌. ಈಗಾಗಲೇ ಚಿತ್ರ ವೀಕ್ಷಿಸಿರುವ ಸುದೀಪ್‌, ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ಮಾಡಲು ಆಸಕ್ತಿ ತೋರಿಸಿದ್ದಾರಂತೆ. ಇದು ದಯಾಳ್‌ಗೆ ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಿಸಿದೆ.

ಅಂದಹಾಗೆ, ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾವಾಗಿದ್ದು ಒಂದು ಕೊಲೆಯ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಜೆ.ಕೆ ಹಾಗೂ ನವೀನ್‌ ಕೃಷ್ಣ ಅವರ ಪಾತ್ರ ಹೈಲೈಟ್‌ ಎಂಬ ಮಾಹಿತಿ ನೀಡುತ್ತಾರೆ ದಯಾಳ್‌. 90 ನಿಮಿಷದಲ್ಲಿ ದಯಾಳ್‌ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಒಟ್ಟು 25 ಸನ್ನಿವೇಶಗಳಿದ್ದು, 28 ನಿಮಿಷದಲ್ಲಿ 24 ಸನ್ನಿವೇಶಗಳು ಬಂದು ಹೋದರೆ ಚಿತ್ರದ ಒಂದು ಸನ್ನಿವೇಶ ಬರೋಬ್ಬರಿ 62 ನಿಮಿಷ ನಡೆಯುತ್ತದೆಯಂತೆ. 

ಈ ಚಿತ್ರ ಆರಂಭವಾದ ಬಗ್ಗೆ ಮಾತನಾಡುವ ದಯಾಳ್‌, “ಕರಾಳ ರಾತ್ರಿ’ ಚಿತ್ರಕ್ಕೆ ಲೊಕೇಶನ್‌ ನೋಡಲು ಮೂಡಿಗೆರೆಗೆ ಹೋಗಿದ್ದೆವು. ಅಲ್ಲಿನ ಬಂಗಲೆ ನೋಡಿ, ಇದು ಅರವಿಂದ್‌ ಅವರು ಬರೆದ ಕಥೆಗೆ ಸೂಕ್ತವಾಗುತ್ತದೆ ಎಂದು ಮಾತನಾಡಿಕೊಂಡೆವು. ಮುಂದೆ ನಾನು, ನವೀನ್‌ ಕೃಷ್ಣ ಬೆಂಗಳೂರಿಗೆ ಬರುವಷ್ಟರಲ್ಲಿ ಚಿತ್ರಕತೆ ಸಿದ್ಧಪಡಿಸಿದೆವು. ಇಡೀ ಸಿನಿಮಾವನ್ನು 10 ದಿವಸ ಚಿತ್ರೀಕರಿಸಲಾಗಿದೆ.

ಕಥೆ ಕೊಲೆಯೊಂದರ ಸುತ್ತ ಸಾಗಲಿದ್ದು, ಪುಸ್ತಕದ ಪುಟ 109 ಕಾಣೆಯಾಗಿರುವ ಮೂಲಕ ಕಥೆಗೆ ಹೊಸ ತಿರುವು ಸಿಗಲಿದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು. ಚಿತ್ರದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್‌ ಕೃಷ್ಣ ಸಂಭಾಷಣೆ ಇದ್ದು, ಶ್ರೀ ಸಂಕಲನ, ಗಣೇಶ್‌ ನಾರಾಯಣ್‌ ಸಂಗೀತವಿದೆ. ಅವಿನಾಶ್‌ ಈ ಚಿತ್ರದ ಸಹ ನಿರ್ಮಾಪಕರು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಇಲ್ಲಿರುವ ಫೋಟೋ ನೋಡಿದರೆ, ಎಲ್ಲರಿಗೂ ಥಟ್ಟನೆ ಒಂದು ಉತ್ತರ ಸಿಕ್ಕೇ ಸಿಗುತ್ತದೆ. ಅದು "ಮುನಿರತ್ನ ಕುರುಕ್ಷೇತ್ರ'ದ ಭೀಷ್ಮನ ಪಾತ್ರಧಾರಿ ಅಂಬರೀಶ್‌ ಎಂಬುದೇ ಆ...

 • ಯುವ ನಟ ಮನೋಜ್‌ ಕುಮಾರ್‌ ಮತ್ತು ರಂಜನಿ ರಾಘವನ್‌ ಅಭಿನಯಿಸಿರುವ "ಟಕ್ಕರ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಕನ್ನಡದ ಜೊತೆಗೆ...

 • ದರ್ಶನ್‌ ಅವರ ಪ್ರಾಣಿ ಪ್ರೀತಿ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಅದೇ ಕಾರಣದಿಂದ ಅವರ ಫಾರ್ಮ್ಹೌಸ್‌ನಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಅದೇ ಕಾರಣದಿಂದ...

 • ಕನ್ನಡದಲ್ಲಿ ಆ್ಯಕ್ಷನ್‌-ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ಆದರೆ, ತಾಯಿ ಮತ್ತು ಮಗಳ ನಡುವಿನ ಆ್ಯಕ್ಷನ್‌-ಥ್ರಿಲ್ಲರ್‌ ಸಿನಿಮಾ ಹೊಸತು. ಹೌದು, ಅಂಥದ್ದೊಂದು...

 • ಕನ್ನಡ ಚಿತ್ರರಂಗದ ಛಾಯಾಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ, "ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ'ಕ್ಕೀಗ 35ರ ಸಂಭ್ರಮ. ಹೌದು, ಕನ್ನಡ ಚಿತ್ರರಂಗದ...

ಹೊಸ ಸೇರ್ಪಡೆ

 • ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದ ಅಗ್ನಿಪರೀಕ್ಷೆಯಾದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯ ನಿಗದಿಪಡಿಸಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ತಾರ್ಕಿಕ...

 • ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ...

 • ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ. 2015ನೇ...

 • ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ...

 • ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು...

 • ಸಿದ್ದಾಪುರ: ಹಾಲಾಡಿ ಪೇಟೆಯಲ್ಲಿ ಸರ್ಕಲ್‌ ನಿರ್ಮಾಣ ಮಾಡುವ ಬಗ್ಗೆ ಗ್ರಾಮ ಪಂಚಾಯತ್‌ ಸಂಪೂರ್ಣ ಬದ್ಧವಾಗಿದೆ ಎಂದು ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ...