“ರಾಜಲಕ್ಷ್ಮೀ’ಯ ಹಾಡು ಬಂತು

ತಂದೆ-ತಾಯಿಯ ಹೆಸರೇ ಟೈಟಲ್‌

Team Udayavani, Sep 21, 2019, 3:01 AM IST

Rajlakshmi

ಈ ಹಿಂದೆ “ರಾಜಲಕ್ಷ್ಮೀ’ ಚಿತ್ರವೊಂದು ತಯಾರಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಕುರಿತು ಹೇಳಲಾಗಿತ್ತು. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಹೊಸ ತಂಡವೊಂದು ಸೇರಿಕೊಂಡು “ರಾಜಲಕ್ಷ್ಮೀ’ ಚಿತ್ರ ಮಾಡಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಕೂಡ ಹೊರತಂದಿದೆ. ನಿರ್ಮಾಪಕ ಎಸ್‌.ಕೆ.ಮೋಹನ್‌ಕುಮಾರ್‌ ಅವರು ತಮ್ಮ ತಂದೆ ಹಾಗೂ ತಾಯಿ ಹೆಸರನ್ನೇ ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿಸಿದ್ದಾರೆ.

ಅಷ್ಟಕ್ಕೂ “ರಾಜಲಕ್ಷ್ಮೀ’ ಚಿತ್ರದ ಕಥೆ ಕೂಡ ಹಾಗೆಯೇ ಇರುವುದರಿಂದ, ನಾಯಕ, ನಾಯಕಿ ಕೂಡ ಇಲ್ಲಿ ರಾಜ, ಲಕ್ಷ್ಮಿ ಆಗಿರುವುದರಿಂದ ಚಿತ್ರಕ್ಕೂ ಅದೇ ನಾಮಕರಣ ಮಾಡಿದ್ದಾರೆ. ಅಂದಹಾಗೆ, ಇದೊಂದು ನೈಜ ಘಟನೆಯ ಚಿತ್ರ. ಈ ಹಿಂದೆ ಕೆರಗೂಡು ಗ್ರಾಮದ ಸಮೀಪದದಲ್ಲಿ ನಡೆದ ನೈಜ ಘಟನೆಗಳು ಚಿತ್ರದ ಜೀವಾಳವಂತೆ. ಈ ಚಿತ್ರಕ್ಕೆ ಕಾಂತರಾಜ್‌ ಗೌಡ ನಿರ್ದೇಶಕರು. ವಕೀಲರಾಗಿರುವ ಅವರು, ಸಿನಿಮಾ ಮೇಲಿನ ಆಸಕ್ತಿ ಇಟ್ಟುಕೊಂಡಿದ್ದರು.

ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ, “ರಾಜಲಕ್ಷ್ಮೀ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ನಿರ್ದೇಶನಕ್ಕೂ ಮುನ್ನ, ಸುಮಾರು ಹದಿನೈದಕ್ಕೂ ಹೆಚ್ಚು ಕಥೆಗಳನ್ನು ನಿರ್ಮಾಪಕರಿಗೆ ಹೇಳಿದ್ದರೂ, ಅವರು ಎಲ್ಲವನ್ನೂ ತಿರಸ್ಕರಿಸಿದ್ದರಂತೆ. ಕೊನೆಗೆ ನೈಜ ಘಟನೆಯ ಕಥೆ ಬಗ್ಗೆ ಹೇಳಿದಾಗ, ಇದು ವರ್ಕೌಟ್‌ ಆಗುತ್ತೆ ಅಂತ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಕ್ಕೆ, “ರಾಜಲಕ್ಷ್ಮೀ’ ಚಿತ್ರ ಆಗಿದೆ ಎಂಬುದು ನಿರ್ದೇಶಕರ ಮಾತು.

ಇದು ನಿರ್ದೇಶಕ ಕಾಂತರಾಜ್‌ಗೌಡ ಅವರ ಮೊದಲ ಚಿತ್ರ. ಎರಡು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಇದೊಂದು ಪಕ್ಕಾ ಲವ್‌ಸ್ಟೋರಿ ಇರುವ ಕಥೆ. ಅದರಲ್ಲೂ ಗ್ರಾಮೀಣ ಸೊಗಡಿನ ಕಥೆ ಹೊಂದಿದೆ. ಸಂಪೂರ್ಣ ಗ್ರಾಮೀಣ ಭಾಗದಲ್ಲೇ ನಡೆಯುವ ರಾಜಕೀಯ ಚಟುವಟಿಕೆಗಳನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಬಹುತೇಕ ಮಂಡ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ನವೀನ್‌ ತೀರ್ಥಹಳ್ಳಿ ಹೀರೋ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

“ರಾಜಲಕ್ಷ್ಮೀ’ ಚಿತ್ರದಲ್ಲಿ ಅವರು ಕಾಲೇಜು ಹುಡುಗನಾಗಿಯೂ, ರೈತನಾಗಿಯೂ ನಟಿಸಿದ್ದಾರಂತೆ. ಇಲ್ಲಿ ಆ್ಯಕ್ಷನ್‌ಗೂ ಹೆಚ್ಚು ಒತ್ತು ಕೊಡಲಾಗಿದೆ ಎಂಬುದು ನವೀನ್‌ ಮಾತು. ನಾಯಕಿಯಾಗಿ ರಶ್ಮಿಗೌಡ ನಟಿಸಿದ್ದು, ಆವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ರಾಜಕಾರಣಿಯ ಮಗಳ ಪಾತ್ರ ನಿರ್ವಹಿಸಿದ್ದಾರಂತೆ. ಸೈಲೆಂಟ್‌ ಆಗಿ ಕಂಡರೂ, ರಗಡ್‌ ಹುಡುಗಿಯ ಪಾತ್ರವಂತೆ ಅದು. ಮೂರ್ತಿ ಅವರು ಇಲ್ಲಿ ನಾಯಕಿ ತಂದೆ ಪಾತ್ರ ಮಾಡಿದರೆ, ಕಿರಣ್‌ಗೌಡ ಖಳನಟನಾಗಿ ನಟಿಸುತ್ತಿದ್ದಾರೆ.

ಉಳಿದಂತೆ “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್‌, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್‌ ಕೃಷ್ಣ ಇದ್ದಾರೆ. ಎ.ಟಿ.ರವೀಶ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮಾಗಡಿ ಯತೀಶ್‌ ಸಂಭಾಷಣೆ ಇದೆ. ಡಿ.ಕೆ.ದಿನೇಶ್‌ ಅವರ ಛಾಯಾಗ್ರಹಣವಿದೆ. ನಾಗರಾಜ್‌.ಎಸ್‌.ಮೂರ್ತಿ, ನೃತ್ಯವಿದೆ. ಹಾಡುಗಳ ಬಿಡುಗಡೆ ವೇಳೆ, ನಾಗೇಂದ್ರಪ್ರಸಾದ್‌, ಧರ್ಮ, ತಾಂಡವ್‌, ವಾಣಿಜ್ಯ ಮಂಡಳಿ ಕಾರ್ಯದರ್ಶಿ ನರಸಿಂಹಲು ಇತರರು ಇದ್ದರು. ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.