ಛಾಯ ಚಿತ್ರದ ಹಾಡು ಬಂತು

ಹಾರರ್‌ನಲ್ಲೊಂದು ಸಂದೇಶ

Team Udayavani, Nov 17, 2019, 6:00 AM IST

ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫ‌ರ್‌ ಆಗಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಜಗ್ಗು ಈಗ ನಿರ್ದೇಶಕರಾಗುತ್ತಿದ್ದಾರೆ. ಜಗ್ಗು ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಛಾಯ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.. “ಛಾಯ’ ಹಾರರ್‌ ಚಿತ್ರವಾಗಿದ್ದು, “ನಾ ನಿನ್ನ ಬಿಡಲಾರೆ’ ಎಂಬ ಅಡಿಬರಹವಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜಗ್ಗು, “ನಾಲ್ಕು ಹುಡುಗರ ಮಧ್ಯೆ ನಡೆಯುವ ಕಥೆ ಈ ಚಿತ್ರದಲ್ಲಿದೆ. ಹೀರೋ ಮದುವೆಯಾಗಿ ಗೆಳಯರ ಮನೆಗೆ ಬಂದಾಗ ವಿಚಿತ್ರ ಘಟನೆ ಸಂಭವಿಸುತ್ತದೆ. ಆ ಮನೆಯಲ್ಲಿ ಏನು ನಡೆಯುತ್ತದೆ? ಅದರ ಹಿಂದಿನ ಕಾರಣಗಳೇನು? ಅನ್ನೋದೆ ಚಿತ್ರದ ಸಸ್ಪೆನ್ಸ್‌ ಅಂಶ. ಇಡೀ ಚಿತ್ರ ಹಾರರ್‌ ಎಳೆಯಲ್ಲಿ ಸಾಗುತ್ತದೆ. ಗೆಳತನ ಹಾಗೂ ಸಂಬಂಧ ಹೇಗಿರುತ್ತದೆ.

ಅತ್ಯಾಚಾರಿಗಳು ಎಂತಹ ಶಿಕ್ಷೆ ಅನುಭವಿಸಬೇಕು ಎಂಬ ಸಂದೇಶ ಕೂಡ ಚಿತ್ರದಲ್ಲಿದೆ’ ಎನ್ನುತ್ತಾರೆ. ರಿಯಲ್‌ ಎಸ್ಟೆಟ್‌ ಉದ್ಯಮಿ ಮಧುಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕರು, “ನಾಲ್ಕು ಜನ ಹುಡುಗರು ಒಂದು ಮನೆಗೆ ಬಂದಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಈ ಚಿತ್ರದ ಕಥಾವಸ್ತು. ಸಮಾಜಕ್ಕೆ ಉತ್ತಮ ಕಥೆ ಹೊಂದಿರುವ ಚಿತ್ರ, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಬೇಕೆಂಬ ಧ್ಯೇಯದಿಂದ ಈ ಚಿತ್ರ ನಿರ್ಮಿಸಲಾಗಿದೆ.

ಚಿತ್ರ ಚೆನ್ನಾಗಿ ಮೂಡಿಬಂದಿದ್ದು ಆದಷ್ಟು ಬೇಗ ಪ್ರೇಕ್ಷಕರ ಮುಂದೆ ತರುತ್ತೇವೆ’ ಎಂದಿದ್ದಾರೆ. “ಛಾಯ’ ಚಿತ್ರದಲ್ಲಿ ನವನಟ ಆನಂದ್‌ ನಾಯಕನಾಗಿ, ತೇಜು ರಾಜ್‌ ನಾಯಕಿಯಾಗಿ, ಡಾನ್‌ ಪಾತ್ರದಲ್ಲಿ ರಾಜ್‌ ಉದಯ್‌, ಟೆಕ್ಕಿಯಾಗಿ ಅನನ್ಯಾ, ಹೇಮಂತ್‌, ನಂದನ್‌,ರಾಜಶೇಖರ್‌, ದರ್ಶನ್‌, ಲಕ್ಷ್ಮೀ, ಗೋವಿಂದಪ್ಪ, ರಾಜ್‌ ಪ್ರಭು, ನಯನ ಕೃಷ್ಣ, ಕಿಲ್ಲರ್‌ ವೆಂಕಟೇಶ್‌, ರೋಹಿಣಿ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಮಂಜು ಕವಿ ಸಾಹಿತ್ಯ ಮತ್ತು ಸಂಗೀತವಿದ್ದು, ಅನುರಾಧ ಭಟ್‌, ಸಂತೋಷ್‌ ವೆಂಕಿ, ನವೀನ್‌ ಸಜ್ಜು, ಶ್ವೇತಾ ಪ್ರಭು ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಅರುಣ್‌ ಬೀರೂರು ಛಾಯಾಗ್ರಹಣ, ದುರ್ಗಾ ಪಿ.ಎಸ್‌ ಸಂಕಲನ ಕಾರ್ಯವಿದೆ. ಬೆಂಗಳೂರು, ಪಾಂಡವಪುರ, ಮೈಸೂರು, ಸಕಲೇಶಪುರ ಮೊದಲಾದ ಕಡೆಗಳಲ್ಲಿ “ಛಾಯ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರತಂಡದ ಯೋಜನೆಯಂತೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ