ಲಂಬೋದರನ ಹಾಡು ಬಂತು
Team Udayavani, Nov 17, 2018, 12:07 PM IST
ಯೋಗೇಶ್ ಅಭಿನಯದ “ಲಂಬೋದರ’ ಚಿತ್ರ ಏನಾಯಿತು ಎಂದು ಕೇಳುವವರಿಗೆ ಈಗ ಉತ್ತರ ಸಿಕ್ಕಿದೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವತ್ತ ಚಿತ್ರತಂಡ ಮುಂದಾಗಿದೆ. ಈಗಾಗಲೇ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ನಟ ಪುನೀತ್ ರಾಜಕುಮಾರ್ ಚಿತ್ರದ “ಲಂಬೋದರ ಲೂಸಾದ …’ ಎಂಬ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಈ ಹಾಡನ್ನು ನಾಗಾರ್ಜುನ ಶರ್ಮಾ ಹಾಗೂ ಅನಿರುದ್ಧ್ ಶಾಸ್ತ್ರಿ ಬರೆದಿದ್ದು, ಸಂಚಿತ್ ಹೆಗಡೆ ಹಾಡಿದ್ದಾರೆ. ಈ ಚಿತ್ರವನ್ನು ವೃಷಾಂಕ್ ಮೂವಿ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿದ್ದಾರೆ. ಮುಂದಿನ ವಾರ ಚಿತ್ರದ ಮತ್ತೂಂದು ಹಾಡನ್ನು ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಅನೇಕ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದಿರುವ ಕೃಷ್ಣರಾಜ್ ನಿರ್ದೇಶನದ ಚೊಚ್ಚಲ ಚಿತ್ರ “ಲಂಬೋದರ’ವಾಗಿದ್ದು, ಚಿತ್ರದ ಕಥೆ ಬಸವನಗುಡಿ ಸುತ್ತ ಮುತ್ತ ಸಾಗಲಿದೆ.
ಆ ಕಾರಣದಿಂದಲೇ ಚಿತ್ರಕ್ಕೆ “ಬಸವನಗುಡಿ ಬೆಂಗಳೂರು’ ಎಂಬ ಟ್ಯಾಗ್ಲೈನ್ ಇದೆ. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಹರೀಶ್ ಗಿರಿಗೌಡ ಸಂಕಲನವಿದೆ. ಚಿತ್ರದಲ್ಲಿ ಯೋಗೇಶ್, ಆಕಾಂಕ್ಷ, ಧರ್ಮಣ್ಣ, ಅಚ್ಯುತ್ ಕುಮಾರ್, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ