“ಪುರುಷ ಲಕ್ಷಣಂ” ಹಾಡು ಬಂತು

Team Udayavani, Jan 14, 2020, 7:00 AM IST

“ಉದ್ಯೋಗಂ ಪುರುಷ ಲಕ್ಷಣಂ..’ ಸಾಮಾನ್ಯವಾಗಿ ಈ ಪದ ಎಲ್ಲರಿಗೂ ಗೊತ್ತಿರುತ್ತೆ. ಪ್ರತಿ ಪುರುಷ ಏನಾದರೊಂದು ಉದ್ಯೋಗ ಮಾಡಬೇಕು. ಅದು ಅವನ ಲಕ್ಷಣ ಎಂಬುದು ಇದರರ್ಥ. ಈಗ ಈ ಪದದ ಬಗ್ಗೆ ಇಲ್ಲೇಕೆ ಮಾತು ಎಂಬ ಪ್ರಶ್ನೆಗೆ ಉತ್ತರ, “ಉದ್ಯೋಗಂ ಪುರುಷ ಲಕ್ಷಣಂ’ ಚಿತ್ರ. ಹೌದು, ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಹಾಡುಗಳು ಹೊರಬಂದಿವೆ.

“ರತ್ನಮಂಜರಿ’ ಚಿತ್ರದ ನಾಯಕ ರಾಜ್‌ ಚರಣ್‌ ಅವರು ಈ ಚಿತ್ರದ ಹೀರೋ. ಅವರಿಗೆ ಇದು ಎರಡನೇ ಚಿತ್ರ. ಅಂದಹಾಗೆ, ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಚಿತ್ರದ ಶೀರ್ಷಿಕೆ ಗೀತೆಯನ್ನು ನಾಗೇಂದ್ರ ಪ್ರಸಾದ್‌ ಬಿಡುಗಡೆ ಮಾಡಿದ್ದಾರೆ. ಉದ್ಯೋಗ ಪುರುಷರಿಗೆ ಎಷ್ಟು ಮಹತ್ವ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಸತ್ಯ ರಾಧಾಕೃಷ್ಣ ಹಾಡಿರುವ ಹಾಡಿಗೆ ಸುಜಿತ್‌ ಕುಮಾರ್‌ ಗೀತೆ ರಚಿಸಿದ್ದಾರೆ. ಸತ್ಯ ರಾಧಾಕೃಷ್ಣ ಹಾಗು ಜತಿನ್‌ ದರ್ಶನ್‌ ಸಂಗೀತ ನೀಡಿದ್ದಾರೆ.

ಸುಜಿತ್‌ ಕುಮಾರ್‌ ನಿರ್ದೇಶನದ ಚಿತ್ರದಲ್ಲಿ ಸಾವನ್‌ ಸಿಂಗ್‌, ರಿದಿ ರಾವ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕೇಶ್‌ ಚೆಲುವರಾಜು ಚಿತ್ರದ ನಿರ್ಮಾಪಕರು. ವೇ ಟು ವರ್ಲ್ಡ್ ಎಂಟಟೈನ್ಮೆಂಟ್ಸ್‌ ಬ್ಯಾನರ್‌ನಡಿ ರಾಜೇಶ್‌ ಜೊತೆ ಸಚಿನ್‌ ಸಹ ನಿರ್ಮಾಪಕರಾಗಿದ್ದಾರೆ. ಮಧುಸೂಧನ್‌, ಸಂಕೇತ್‌ ಮೈಸೂರು ಛಾಯಾಗ್ರಹಣವಿದೆ. ರಾಮಿ ಶೆಟ್ಟಿ ಪವನ್‌ ಸಂಕಲನವಿದೆ. ಅದಿಲ್‌ ನಡಾಫ್ ಹಿನ್ನಲೆ ಸಂಗೀತವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ