ಕೆಟ್ಟವರ ಲೋಕ ನಂಬಿದವರ ಕಥೆ

ಹಫ್ತಾ ಟ್ರೇಲರ್‌ ಬಂತು

Team Udayavani, Jun 13, 2019, 3:00 AM IST

“ಸೆಂಟಿಮೆಂಟ್‌ ನಾಟ್‌ ಅಲೋಡ್‌… ‘ ಇದು “ಹಫ್ತಾ’ ಚಿತ್ರದ ಅಡಿಬರಹ. ಅಲ್ಲಿಗೆ ಇದೊಂದು ಪಕ್ಕಾ ಮಾಸ್‌ ಸಿನಿಮಾ ಅನ್ನೋದು ಖಾತರಿ. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಶೀರ್ಷಿಕೆ ಗಮನಿಸಿದರೆ, ಇದೊಂದು ರೌಡಿಸಂ ಸಬ್ಜೆಕ್ಟ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಲ್ಲಿ ಭೂಗತ ಪಾತಕಿಗಳ ಕಥೆ ಇದೆ. ಸುಪಾರಿ ಕಿಲ್ಲರ್‌ಗಳ ಆರ್ಭಟವಿದೆ.

ಅದರ ಜೊತೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳೂ ಇವೆ. ದುಷ್ಟರನ್ನು ಸದೆಬಡಿಯಲು ದುಷ್ಟನೇ ಬರುತ್ತಾನೆ ಎಂಬುದು ಈ ಚಿತ್ರದ ಕಥಾಹಂದರ. ಈ ಚಿತ್ರವನ್ನು ಪ್ರಕಾಶ್‌ ಹೆಬ್ಬಾಳ ನಿರ್ದೇಶನ ಮಾಡಿದ್ದಾರೆ. ಕಳೆದ ಒಂದು ದಶಕದಿಂದಲೂ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಬಹುತೇಕ ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ವಿಜಯ್‌ ಸಂಗೀತವಿದೆ. ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಟೆಕ್‌ ಸೂರಿ ಅವರ ಛಾಯಾಗ್ರಹಣವಿದೆ. ರಘುನಾಥ್‌ ಸಂಕಲ ಮಾಡಿದ್ದಾರೆ. ಈವರೆಗೆ ಸುಮಾರು 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವರ್ಧನ್‌ ತೀರ್ಥಹಳ್ಳಿ, ಈ ಚಿತ್ರದ ಮೂಲಕ ಹೀರೋ ಆಗಿ ನಟಿಸಿದ್ದಾರೆ.

ಇಲ್ಲಿ ಮೊದಲ ಸಲ ಎರಡು ಶೇಡ್‌ ಇರುವ ಪಾತ್ರ ಮಾಡಿದ್ದಾರೆ. ಇಲ್ಲೊಂದು ವಿಶೇಷ ಪಾತ್ರವೂ ಇದೆ. ಅದು ಮಂಗಳ ಮುಖೀ ಪಾತ್ರ. ಇನ್ನೊಂದು ಸೈಲೆಂಟ್‌ ಕಿಲ್ಲರ್‌ ಪಾತ್ರ. ಅದು ಹೇಗಿದೆ ಎಂಬುದಕ್ಕೆ ಸಿನಿಮಾ ನೋಡಬೇಕು ಎಂಬುದು ವರ್ಧನ್‌ ತೀರ್ಥಹಳ್ಳಿ ಅವರ ಮಾತು. ಮತ್ತೂಬ್ಬ ಹೀರೋ ರಾಘವನಾಗ್‌ ಅವರಿಗೂ ಇಲ್ಲೊಂದು ವಿಶೇಷ ಪಾತ್ರವಿದೆ.

ಹಲವು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿರುವ ರಾಘವನಾಗ್‌ ಇಲ್ಲಿ, ಗನ್‌ ಹಿಡಿದು ಮಾತನಾಡುವ ರಗಡ್‌ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀ ನೀನಾಸಂ ನಟಿಸಿದರೆ, ಕೂರ್ಗ್‌ ಮೂಲದ ಸೌಮ್ಯ ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. ಬಲರಾಜ್‌ವಾಡಿ, ದಶಾವರ ಚಂದ್ರು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಹೊರಬಂದಿದೆ.

ಕೆ‌ಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್‌.ಎಂ.ಕೃಷ್ಣಮೂರ್ತಿ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭಹಾರೈಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ.ಹರೀಶ್‌, ಖಜಾಂಚಿ ವೀರೇಶ್‌,ಆಂಜನಪ್ಪ, ಅನಿತಾ ಬಂಗಾರಪ್ಪ, ಮಲ್ಲೇಶ್‌ರೆಡ್ಡಿ ಇತರರು ಇªರು. ಮೈತ್ರಿ ಮಂಜುನಾಥ್‌ ನಿರ್ಮಾಪಕರಾಗಿದ್ದು, ಇವರಿಗೆ ಬಾಲರಾಜ್‌.ಟಿ.ಸಿ.ಪಾಳ್ಯ ಸಾಥ್‌ ನೀಡಿದ್ದಾರೆ. ಜೂನ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.



ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಅಭಿನಯದ "ಕುರುಕ್ಷೇತ್ರ' ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ...

  • ಸಾಹಸಸಿಂಹ ವಿಷ್ಣುವರ್ಧನ್‌, ಅನಂತನಾಗ್‌, ಬಿ.ಸಿಪಾಟೀಲ್‌, ಪ್ರಕಾಶ್‌ ರೈ, ರಮೇಶ್‌ ಭಟ್‌, ಸುಮನ್‌ ನಗರ್‌ಕರ್‌, ಅವಿನಾಶ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ...

  • ಶುಭಾಪೂಂಜಾ ಸದ್ದಿಲ್ಲದೆಯೇ ಈಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದಾ ಒಂದಿಲ್ಲೊಂದು ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದ ಅವರು, ಹೊಸ ಚಿತ್ರದ ಮೂಲಕವೂ ಒಂದಷ್ಟು...

  • ಈ ಹಿಂದೆ "ರಾಜಲಕ್ಷ್ಮೀ' ಚಿತ್ರವೊಂದು ತಯಾರಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಕುರಿತು ಹೇಳಲಾಗಿತ್ತು. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ....

  • ನಟ ಗಣೇಶ್‌ ಕಿರುತೆರೆಯಿಂದ ಬಂದವರು. ಈಗ ಮತ್ತೆ ಕಿರುತೆರೆಗೆ ವಾಪಾಸ್‌ ಆಗಿದ್ದಾರೆ. ಹಾಗಂತ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ ಜೀ ಕನ್ನಡ...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್‌ ನಲ್ಲಿ ಒತ್ತಾಯಿಸಿದೆ. ಇದೊಂದು...

  • ಉಡುಪಿ: ಶ್ರೀ ಕೃಷ್ಣಾಷ್ಣಮಿ ಪ್ರಯುಕ್ತ "ಉದಯವಾಣಿ'ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ...

  • ಹೊಸದಿಲ್ಲಿ: ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ...

  • ಕೋಲ್ಕತಾ: ಪಶ್ಚಿಮ ಬಂಗಾಲದ ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ....

  • ಹ್ಯೂಸ್ಟನ್‌: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್‌ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ...