ತೆರಗೆ ಬಂತು ದಿಗಂತ್- ಅನಂತ್ ನಾಗ್ ಅಭಿನಯದ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ”

Team Udayavani, Dec 2, 2022, 10:27 AM IST

thimmaiah and thimmaiah kannada movie

ಕೆಲವು ಸಿನಿಮಾಗಳ ಪೋಸ್ಟರ್‌ಗಳೇ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತವೆ. ಪೋಸ್ಟರ್‌ ನೋಡಿದಾಗಲೇ ಈ ಸಿನಿಮಾದೊಳಗೊಂದು ಕಥೆ ಇದೆ ಎಂಬ ಭಾವನೆ ಬರುತ್ತದೆ. ಸದ್ಯ ಆ ತರಹದ ಒಂದು ಭಾವನೆ ತಂದಿರುವ ಚಿತ್ರವೆಂದರೆ “ತಿಮ್ಮಯ್ಯ ಅಂಡ್‌ ತಿಮ್ಮಯ್ಯ’. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.

ಈ ಸಿನಿಮಾದಲ್ಲಿ ಅನಂತ್‌ ನಾಗ್‌ ಹಾಗೂ ದಿಗಂತ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಸಂಜಯ್‌ ಶರ್ಮಾ ಈ ಸಿನಿಮಾದ ನಿರ್ದೇಶಕರು. ರಾಜೇಶ್‌ ಶರ್ಮಾ ನಿರ್ಮಾಣದ ಮಾಡಿದ್ದಾರೆ. ಅನಂತ್‌ ನಾಗ್‌ ಅವರು ಇಷ್ಟು ವರ್ಷ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಈ ತರಹದ ಒಂದು ಪಾತ್ರ ಸಿಕ್ಕಿರಲಿಲ್ಲವಂತೆ. ಸಹಜವಾಗಿಯೇ ಅನಂತ್‌ ನಾಗ್‌ ಅವರು ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನಂತ್‌ ನಾಗ್‌ ಅವರು ಇದೊಂದು ಸವಾಲಿನ ಪಾತ್ರ ಎನ್ನುತ್ತಾರೆ. “ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ದಲ್ಲಿ ನನಗೆ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲು ಈ ಆಫ‌ರ್‌ ಬಂದಾಗ, ಸ್ಕ್ರಿಪ್ಟ್ ಕಳುಹಿಸಿ ಅಂದೆ. ಸ್ಕ್ರಿಪ್ಟ್ ಓದಿದಾಗ ತುಂಬಾ ಸಂತೋಷವಾಯಿತು. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನಿಸಿತು. “ತಿಮ್ಮಯ್ಯ ಅಂಡ್‌ ತಿಮ್ಮಯ್ಯ’ ಎಂಬ ಎರಡು ಪಾತ್ರಗಳ ಸುತ್ತ ಈ ಸಿನಿಮಾ ಮಾಡಿದ್ದಾರೆ. ಮೂವತ್ತು ವರ್ಷಗಳ ನಂತರ ಮೊಮ್ಮಗನನ್ನು ಭೇಟಿಯಾಗುವ ಪಾತ್ರ. ಸ್ಕ್ರಿಪ್ಟ್ ಓದುತ್ತಲೇ ತುಂಬಾ ವಿಶಿಷ್ಟವಾದ ಪಾತ್ರ ಅಂತೆನಿಸಿತು. ಜೊತೆಗೊಂದು ಅಳುಕು ಕೂಡಾ ಬಂತು. ಏಕೆಂದರೆ ಇದು ಬಹಳ ಸರಳವಾದ ಪಾತ್ರವಲ್ಲ. ಈ ಪಾತ್ರ ಶ್ರೀಮಂತ, ಆ ಶ್ರೀಮಂತಿಕೆಯ ಅಹಂ ಕೂಡಾ ಅವನಿಗಿದೆ. ಒಂದು ರೀತಿ ಅಲೆಮಾರಿ ಬದುಕು ಆತ ಬದುಕಿದ್ದಾನೆ. ಸ್ವಾರ್ಥದಿಂದಲೇ ಬದುಕಿದ್ದಾನೆ, ಬೇರೆಯವರನ್ನು ಹೀಯಾಳಿಸೋದು, ಹಂಗಿಸೋದು ಅವನ ಗುಣದಲ್ಲಿದ್ದರೂ ಅದು ಹಾಸ್ಯಧಾಟಿಯಲ್ಲಿದೆ. ಹೀಗಾಗಿ ನನ್ನ ಹಿನ್ನೆಲೆಯಲ್ಲಿ ನಾನು ಈ ಪಾತ್ರವನ್ನು ಮಾಡೋದೋ, ಬೇಡವೋ ಎಂಬ ಕನ್‌ಫ್ಯೂಶನ್‌ ಇತ್ತು. ಜೊತೆಗೆ ಮಾಡಿದರೆ ಇದೊಂದು ಸವಾಲು ಎಂಬ ಭಾವನೆಯೂ ಇತ್ತು. ಈ ಪಾತ್ರದಲ್ಲಿ ಎಲ್ಲವನ್ನು ಹೇಳಿದ್ದಾರೆ. ನೆಗೆಟಿವ್‌ ಅಂಶಗಳ ಜೊತೆ ಹ್ಯೂಮರ್‌ ಇದೆ. ಹಾಗಾಗಿ, ಒಂದು ಕೈ ನೋಡೇ ಬಿಡೋಣ ಎಂದು ಒಪ್ಪಿಕೊಂಡೆ. ಈ ಪಾತ್ರ ಸಿಂಪಲ್‌ ಆಗಿಲ್ಲ. ನೆಗೆಟಿವ್‌ ಅಂಶವಿರುವ ಪಾತ್ರ. ಅದನ್ನು ಪಾಸಿಟಿವ್‌ ಆಗಿ ಪ್ರಸೆಂಟ್‌ ಮಾಡುವ ಸವಾಲಿತ್ತು’ ಎನ್ನುವುದು ಅನಂತ್‌ನಾಗ್‌ ಮಾತು.

ಟಾಪ್ ನ್ಯೂಸ್

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಪ್ರಕರಣ ದಾಖಲು

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ

ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ

ಬರಲಿದೆ ಕ್ಯೂಆರ್‌ ಕೋಡ್‌ ಆಧರಿತ ಕಾಯಿನ್‌ ವೆಂಡಿಂಗ್‌ ಮಷಿನ್‌

ಬರಲಿದೆ ಕ್ಯೂಆರ್‌ ಕೋಡ್‌ ಆಧರಿತ ಕಾಯಿನ್‌ ವೆಂಡಿಂಗ್‌ ಮಷಿನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಠಾಣೆ”ಯಲ್ಲಿ ಶೂಟಿಂಗ್‌ ಕಂಪ್ಲೀಟ್‌!

“ಠಾಣೆ”ಯಲ್ಲಿ ಶೂಟಿಂಗ್‌ ಕಂಪ್ಲೀಟ್‌!

tdy-11

ಬೆಂಗಳೂರು 69 ಫೆ.10ಕ್ಕೆ ರಿಲೀಸ್‌

ಕಡಲ ತೀರದಲ್ಲಿ ಹಾಡು ಹಬ್ಬ

ಕಡಲ ತೀರದಲ್ಲಿ ಹಾಡು ಹಬ್ಬ

ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ

ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

ಫೆ. 17ಕ್ಕೆ ಅಕ್ಷಿತ್‌-ಅದಿತಿ ಜೋಡಿಯ ‘ಖೆಯೊಸ್‌’ ಚಿತ್ರ ಬಿಡುಗಡೆ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಪ್ರಕರಣ ದಾಖಲು

ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.