ಇದು ಕನ್ನಡದ ಪ್ರೇಮಂ!

Team Udayavani, Nov 29, 2017, 11:00 PM IST

“ಪ್ರೇಮಂ’ ಎಂಬ ಹೆಸರಿಡುತ್ತಿದ್ದಂತೆಯೇ ಇದು ಮಲಯಾಳಂ ಚಿತ್ರದ ರೀಮೇಕಾ ಎಂದು ಹಲವರು ಕೇಳಿದರಂತೆ. ಆದರೆ, ಹೆಸರಷ್ಟೇ ರೀಮೇಕು, ಮಿಕ್ಕಿದ್ದೆಲ್ಲಾ ಸ್ವಮೇಕು ಎಂಬುದು ನಿರ್ದೇಶಕ ಹರೀಶ್‌ ಮಾಂಡವ್ಯ ಅವರ ಅಭಿಪ್ರಾಯ. ಸಂಪೂರ್ಣ ಹೊಸಬರ ತಂಡವೊಂದನ್ನು ಕಟ್ಟಿರುವ ಅವರು, “ಪ್ರೇಮಂ’ ಎಂಬ ಪ್ರೇಮಮಯ ಚಿತ್ರವೊಂದನ್ನು ಮಾಡುವುದಕ್ಕೆ ಹೊರಟಿದ್ದಾರೆ.

ಅಂದಹಾಗೆ, “ಪ್ರೇಮಂ’ ಚಿತ್ರದ ಮುಹೂರ್ತ ಬುಧವಾರ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಮುಖ್ಯ ಅತಿಥಿಯಾಗಿ ಹಿರಿಯ ನಟಿ ತಾರಾ ಭಾಗವಹಿಸಿದ್ದಾರೆ. ಈ ತಂಡದಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮಾತ್ರ ಹಳಬರು. ಮಿಕ್ಕಂತೆ ಕಥೆ ಬರೆದಿರುವ ಅನೀಶ್‌ ಆಗಲೀ, ನಿರ್ದೇಶಕ ಹರೀಶ್‌ ಮಾಂಡವ್ಯ ಆಗಲೀ, ಛಾಯಾಗ್ರಹಣ ಮಾಡುತ್ತಿರುವ ಪುಷ್ಪರಾಜ್‌ ಸಂತೋಷ್‌ ಆಗಲೀ ಎಲ್ಲರೂ ಹೊಸಬರೇ.

ಇನ್ನು ಚಿತ್ರದ ನಾಯಕ ಧನು ಗೌಡ ಮತ್ತು ನಾಯಕಿ ಮೋಕ್ಷ ಸಹ ಹೊಸಬರೇ. ಧನುಗಾದರೂ “ಹೊಂಬಣ್ಣ’ ಎನ್ನುವ ಚಿತ್ರದಲ್ಲಿ ನಟಿಸಿದ ಅನುಭವ ಇದೆ. ಆದರೆ, ಮೋಕ್ಷ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಹರೀಶ್‌ ಈ ಚಿತ್ರ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ, ಇದು ನೈಜತೆಗೆ ಹತ್ತಿರವಿರುವ ಕಥೆ ಎಂಬ ಕಾರಣಕ್ಕೆ.

“ಅದೊಂದು ದಿನ ಅನೀಶ್‌ ಬಂದು ಕಥೆ ಹೇಳಿದರು. ನೈಜತೆಗೆ ಹತ್ತಿರವಾದ ಕಥೆ ಇದು. ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ತಮ್ಮಲ್ಲಿ ನಾಯಕ ಅಶೋಕ್‌ನ ಪಾತ್ರವನ್ನು ನೋಡಿಕೊಳ್ಳುತ್ತಾರೆ. ಇಲ್ಲಿ ಬರೀ ಹುಡುಗ-ಹುಡುಗಿಯ ಪ್ರೀತಿಯಷ್ಟೇ ಅಲ್ಲ, ತಂದೆ-ಮಕ್ಕಳ ನಡುವಿನ ಪ್ರೀತಿಯೂ ಇದೆ’ ಎನ್ನುತ್ತಾರೆ ಹರೀಶ್‌.

ಈ ಚಿತ್ರದಲ್ಲಿ ಅವರು ಐಟಿ ಕ್ಷೇತ್ರದ ಜನರ ಬದುಕು ಮತ್ತು ಬವಣೆಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಈ ಚಿತ್ರವನ್ನು ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕನಕಪುರ ಮುಂತಾದ ಕಡೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತದಂತೆ. ಈ ಚಿತ್ರವನ್ನು ಸಿ.ಎಂ.ಎಚ್‌ ಎಂಟರ್‌ಟೈನ್‌ಮೆಂಟ್ಸ್‌ನಡಿ ಶ್ವೇತಾ ಎನ್ನುವವರು ನಿರ್ಮಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

  • ಕನ್ನಡ ಚಿತ್ರರಂಗಕ್ಕೂ ಮುಂಬೈಗೂ ಒಂದು ನಂಟಿದೆ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ ಮುಂಬೈನಿಂದ ಕನ್ನಡ ಚಿತ್ರಗಳಿಗೆ ನಾಯಕಿಯರಾಗಿ ಸಾಕಷ್ಟು ನಟಿಯರು ಬಂದಿದ್ದಾರೆ....

  • "ಟಾಮ್‌ ಆ್ಯಂಡ್‌ ಜೆರ್ರಿ' ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಟಿ.ವಿ ಯಲ್ಲಿ ಅತ್ಯಂತ ಜನಪ್ರಿಯವಾಗಿರುವ, ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಿನ ಶೋ ಎಂದೇ ಜನಪ್ರಿಯವಾಗಿರುವ...

  • ಕನ್ನಡದಲ್ಲಿ ಸುಮಾರು 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ನೆಗೆಟಿವ್‌ ಶೇಡ್‌ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ವರ್ಧನ್‌, "ಹಫ್ತಾ' ಮೂಲಕ ನಾಯಕರಾಗಿ ಎಂಟ್ರಿ ಯಾ ಗಿದ್ದರು....

  • ನಟ ದುನಿಯಾ ವಿಜಯ್‌ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. "ಸಲಗ' ಎಂದು ಬರೆದಿದ್ದ ಕೇಕ್‌ ಕತ್ತರಿಸುತ್ತಿದ್ದಂತೆ...

ಹೊಸ ಸೇರ್ಪಡೆ