ಕಾಲ ಬದಲಾಯ್ತು; ಕಾರು ಬದಲಾಗಿಲ್ಲ
Team Udayavani, Sep 4, 2018, 11:34 AM IST
ಸಾಮಾನ್ಯವಾಗಿ ಹೀರೋಗಳು ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಅದನ್ನು ಖರೀದಿಸುತ್ತಿರುತ್ತಾರೆ. ಎಷ್ಟೋ ಜನ ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ. ಆದರೆ, ಹಿರಿಯ ನಟ ರಾಮಕೃಷ್ಣ ಮಾತ್ರ 32 ವರ್ಷಗಳ ಹಿಂದೆ ಖರೀದಿಸಿದ ಮಾರುತಿ ಸುಜುಕಿ ಕಾರಿನಲ್ಲೇ ಓಡಾಡುತ್ತಿರುವುದು ವಿಶೇಷ. ಸೋಮವಾರ “ಬಿಂದಾಸ್ ಗೂಗ್ಲಿ’ ಚಿತ್ರದ ಪತ್ರಿಕಾಗೋಷ್ಠಿಗೆ ಅವರು ಅದೇ ಕಾರಿನಲ್ಲಿ ಬಂದಿದ್ದರು.
ತಮ್ಮ ಮಾರುತಿ 800 ಬಗ್ಗೆ ಮಾತನಾಡುವ ಅವರು, “ಎಷ್ಟೋ ಜನ ಇನ್ನೂ ಈ ಕಾರನ್ನು ಯಾಕೆ ಓಡಿಸುತ್ತೀರಾ ಎಂದು ಕೇಳುತ್ತಾರೆ. ಆದರೆ, ನನಗೆ ಈ ಕಾರು ಬದಲಾಯಿಸುವುದಕ್ಕೆ ಇಷ್ಟವಿಲ್ಲ. ಈ ಕಾರನ್ನು ನಾನು ಕೊಂಡಿದ್ದು 32 ವರ್ಷಗಳ ಹಿಂದೆ. ಕನ್ನಡ ಚಿತ್ರರಂಗದಲ್ಲಿ ಮಾರುತಿ 800 ಕಾರನ್ನು ಮೊದಲು ಖರೀದಿಸಿದ್ದೇ ನಾನು. ಆ ಸಂದರ್ಭದಲ್ಲಿ ನಾನು ಒಂದು ಕಾರು ತೆಗೆದುಕೊಳ್ಳಬೇಕು ಅಂತಿದ್ದೆ.
ಆಗ ಪರಿಚಯಸ್ಥರೊಬ್ಬರು ಈ ಕಾರಿನ ಬಗ್ಗೆ ಹೇಳಿದರು. ಆ ಸಂದರ್ಭದಲ್ಲಿ ಪರಿಸರ ಅಂತ ಓಡಾಡುತ್ತಿದ್ದೆ ನಾನು. ಆಗ ಅವರು, “ಒಂದು ಹಸಿರು ಕಾರಿದೆ, ನಿಮಗೆ ಹೇಳಿ ಮಾಡಿಸಿದಂತಿದೆ’ ಎಂದು ಅವರು ನನಗೆ ಈ ಕಾರನ್ನು ಕೊಡಿಸಿದ್ದರು. ಆಗ ಇದನ್ನು ಕೊಂಡಿದ್ದೆ. ಅಂಬರೀಶ್, ಶಿವರಾಜಕುಮಾರ್, ಶಂಕರ್ ನಾಗ್, ಪ್ರಭಾಕರ್ ಮುಂತಾದವರು ಓಡಾಡಿದ ಕಾರು ಇದು’ ಎಂದು ನೆನಪಿಸಿಕೊಳ್ಳುತ್ತಾರೆ ರಾಮಕೃಷ್ಣ.
32 ವರ್ಷಗಳ ಹಿಂದೆ ಕೊಂಡ ಕಾರಾದರೂ, ಸ್ವಲ್ಪವೂ ಸಮಸ್ಯೆ ಆಗಿಲ್ಲವಂತೆ. “ನಾನು ಈಗಲೂ ಊರಿಗೆ ಹೋದರೆ, ಇದೇ ಕಾರಿನಲ್ಲಿ ಹೋಗುತ್ತೇನೆ. ಸಾವಿರಾರು ಕಿಲೋಮೀಟರ್ ಓಡಿಸಿದ್ದೇನೆ. ಆಗಾಗ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತಿರುತ್ತವೆ ಎಂಬುದನ್ನು ಬಿಟ್ಟರೆ, ಮಿಕ್ಕಂತೆ ದೊಡ್ಡ ಸಮಸ್ಯೆ ಆಗಿಲ್ಲ. ನಾನು ಕಾರು ಕೊಂಡ ಮೇಲೆ ಅದೆಷ್ಟೋ ಜನ, ಅದೆಷ್ಟೋ ಕಾರುಗಳನ್ನು ಕೊಂಡು, ಓಡಿಸಿದ್ದಾರೆ. ಆದರೆ, ನನಗೆ ಮಾತ್ರ ಈ ಕಾರು ಯಾವತ್ತೂ ಪ್ರಿಯ’ ಎನ್ನುತ್ತಾರೆ ರಾಮಕೃಷ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ