Udayavni Special

ಡಾ. ರಾಜ್‌ ಮೊಮ್ಮಗಳ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

ನಿನ್ನ ಸನಿಹಕೆ ಚಿತ್ರದಲ್ಲಿ ಧನ್ಯಾ- ಸೂರಜ್‌

Team Udayavani, Jul 18, 2019, 3:05 AM IST

ninna-saniyake

ಡಾ.ರಾಜಕುಮಾರ್‌ ಅವರ ಮೊಮ್ಮಗಳು, ನಟ ರಾಮ್‌ಕುಮಾರ್‌ ಅವರ ಪುತ್ರಿ ಧನ್ಯಾರಾಮ್‌ಕುಮಾರ್‌ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಡುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಈ ಚಿತ್ರಕ್ಕೆ ಸೂರಜ್‌ ಗೌಡ ಕಥೆ ಬರೆದು, ನಾಯಕರಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಕೂಡಾ ನಡೆದಿದೆ. ಎಲ್ಲಾ ಓಕೆ, ಈ ಚಿತ್ರದ ಟೈಟಲ್‌ ಏನು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ.

ಈ ಚಿತ್ರಕ್ಕೆ “ನಿನ್ನ ಸನಿಹಕೆ’ ಎಂದು ಟೈಟಲ್‌ ಇಡಲಾಗಿದೆ. ಆ ಚಿತ್ರವನ್ನು ಸುಮನ್‌ ಜಾದುಗಾರ್‌ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ನಿನ್ನ ಸನಿಹಕೆ’ ಚಿತ್ರಕ್ಕೆ ಆಗಸ್ಟ್‌ನಲ್ಲಿ ಚಾಲನೆ ಸಿಗಲಿದೆ. ಈ ಚಿತ್ರದ ಶುರುವಿಗೆ ಮುನ್ನ ಹೊಸ ಚಿತ್ರ ಒಪ್ಪಿಕೊಂಡ ಬಗ್ಗೆ ಸೂರಜ್‌ಗೌಡ ಹೇಳಿದ್ದಾರೆ. “ಈ ಹಿಂದೆ “ಸಿಲಿಕಾನ್‌ ಸಿಟಿ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಮುರಳಿ ಗುರಪ್ಪ ಅವರೊಂದಿಗೆ ಮತ್ತೂಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ.

ಸದ್ಯಕ್ಕೆ ಆ ಚಿತ್ರದ ಕುರಿತು ಈಗಷ್ಟೇ ತಯಾರಿ ನಡೆಯುತ್ತಿದೆ. ಇನ್ನು, “ಸಿಲಿಕಾನ್‌ ಸಿಟಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕರೇ ಮುರಳಿ ಗುರಪ್ಪ ನಿರ್ದೇಶನದ ಚಿತ್ರವನ್ನು ನಿರ್ಮಾಣ ಮಾಡುವ ಸಾಧ್ಯತೆ ಇದೆ. ಅದೊಂದು ಪಕ್ಕಾ ಸ್ವಮೇಕ್‌ ಕಥೆ ಆಗಿರುತ್ತೆ. ನೈಜ ವಿಷಯವನ್ನು ಇಟ್ಟುಕೊಂಡು ಒಂದು ಕಮರ್ಷಿಯಲ್‌ ಚಿತ್ರದಲ್ಲಿ ಹೇಗೆಲ್ಲಾ ಅದನ್ನು ತೋರಿಸಬಹುದು,

ಎಷ್ಟೆಲ್ಲಾ ಮೇಕಿಂಗ್‌ ಮಾಡಬಹುದು ಎಂಬುದರ ಬಗ್ಗೆ ಪ್ಲಾನ್‌ ನಡೆಯುತ್ತಿದೆ. ಆ ಚಿತ್ರದ ಕುರಿತು ಸದ್ಯಕ್ಕೆ ಇಷ್ಟು ಮಾಹಿತಿ ಇದೆ. ಈಗ ಸುಮನ್‌ ಜಾದುಗಾರ್‌ ನಿರ್ದೇಶನದ ಚಿತ್ರ ಪೂರ್ಣಗೊಳ್ಳುವವರೆಗೂ ಆ ಬಗ್ಗೆ ಹೆಚ್ಚೇನೂ ಸುದ್ದಿಯಿಲ್ಲ. ನಾಯಕಿ ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿಗೆ ಈಗ ಉತ್ತರವಿಲ್ಲ ‘ ಎಂದಷ್ಟೇ ಸ್ಪಷ್ಟಪಡಿಸುತ್ತಾರೆ ಸೂರಜ್‌ಗೌಡ.

ಸದ್ಯಕ್ಕೆ ಸೂರಜ್‌ಗೌಡ ಅವರು ಧನ್ಯಾರಾಮ್‌ಕುಮಾರ್‌ ಜೊತೆ ನಟಿಸುತ್ತಿರುವ ಚಿತ್ರದ ಮೇಲೆ ಫೋಕಸ್‌ ಮಾಡಿದ್ದಾರಂತೆ. ಕಾರಣ, ಆ ಚಿತ್ರಕ್ಕೆ ಅವರೇ ಕಥೆ ಬರೆದಿರುವುದು. ಅಷ್ಟೇ ಅಲ್ಲ, ಆ ಸಿನಿಮಾಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇನ್ನು, ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರಂತೆ. ಹಾಗಾಗಿ, ತುಸು ಜವಾಬ್ದಾರಿ ಜಾಸ್ತಿ ಇರುವುದರಿಂದ, ಈ ಸಿನಿಮಾ ಮುಗಿಸಿದ ಮೇಲೆ ಬೇರೆ ಸಿನಿಮಾದತ್ತ ಗಮನಹರಿಸುವುದಾಗಿ ಹೇಳುತ್ತಾರೆ ಸೂರಜ್‌ಗೌಡ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಶಾಂತಿ ಕ್ರಾಂತಿ’ಯ ಬಾಲನಟ ‘ಪುಟ್ಮಲ್ಲಿ’ಯಲ್ಲಿ ಹಾಸ್ಯ ನಟನಾಗಿ ಎಂಟ್ರಿ ಪಡೆದು ಮಿಂಚಿದ ಕಥೆ

‘ಶಾಂತಿ ಕ್ರಾಂತಿ’ಯ ಬಾಲನಟ ‘ಪುಟ್ಮಲ್ಲಿ’ಯಲ್ಲಿ ಹಾಸ್ಯ ನಟನಾಗಿ ಎಂಟ್ರಿ ಪಡೆದು ಮಿಂಚಿದ ಕಥೆ

ಕೋವಿಡ್ ವೈರಸ್ ಕಾಟ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಹೇಳೋದೇನು.

ಕೋವಿಡ್ ವೈರಸ್ ಕಾಟ: 14 ದಿನ ಹೋಮ್ ಕ್ವಾರಂಟೈನ್ ಬಗ್ಗೆ ಶ್ರದ್ಧಾ ಶ್ರೀನಾಥ್ ಹೇಳೋದೇನು..?

ಕೋವಿಡ್ ಅಟ್ಟಹಾಸ; ಬಡವರಿಗೆ ಉಚಿತ ಆಹಾರ ಪದಾರ್ಥ ಹಂಚಿದ ಸಾಧುಕೋಕಿಲ

ಕೋವಿಡ್ ಅಟ್ಟಹಾಸ; ಬಡವರಿಗೆ ಉಚಿತ ಆಹಾರ ಪದಾರ್ಥ ಹಂಚಿದ ಸಾಧುಕೋಕಿಲ

ಕೋವಿಡ್ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ 10 ಲಕ್ಷ ರೂ. ದೇಣಿಗೆ

ಕೋವಿಡ್ ವೈರಸ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ 10 ಲಕ್ಷ ರೂ. ದೇಣಿಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಿಂದ “ರಾಮನಾಮ” ಜಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಿಂದ “ರಾಮನಾಮ” ಜಪ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX!