ಸುದೀಪ್-ಅನೂಪ್ ಚಿತ್ರಕ್ಕೆ ಟೈಟಲ್ ಫಿಕ್ಸ್
Team Udayavani, Dec 20, 2018, 6:43 PM IST
“ರಂಗಿತರಂಗ’, “ರಾಜರಥ’ ಚಿತ್ರಗಳನ್ನು ಕೊಟ್ಟ ಬಳಿಕ ಕೆಲಕಾಲ ಚಿತ್ರರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರದ ನಿರ್ದೇಶಕ ಅನೂಪ್ ಭಂಡಾರಿ, ನಟ ಕಿಚ್ಚ ಸುದೀಪ್ಗಾಗಿ ಹೊಸಚಿತ್ರವೊಂದನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೀಗ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ.
ಹೌದು, ನಟ ಕಿಚ್ಚ ಸುದೀಪ್ ಈ ವಿಷಯವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ “ಬಿಲ್ಲ ರಂಗ ಬಾಷ’ ಎಂದು ಹೆಸರಿಡಲಾಗಿದ್ದು, ಇದೊಂದು ಆ್ಯಕ್ಷನ್- ಆಡ್ವೆಂಚರ್ ಸಿನಿಮಾವಾಗಿದೆ. ಅಲ್ಲದೇ ಸುಮಾರು 18 ವರ್ಷದ ಹಿಂದೆಯೇ ಅನೂಪ್ ಚಿತ್ರದ ಕಥೆ ಬರೆದಿದ್ದರಂತೆ.
ಸದ್ಯ ಸುದೀಪ್-ಅನೂಪ್ ಅವರ ಚೊಚ್ಚಲ ಸಿನಿಮಾವು ಸುದೀಪ್ ನಿರ್ಮಾಣ ಸಂಸ್ಥೆಯಿಂದಲೇ ನಿರ್ಮಾಣವಾಗುತ್ತಿದೆ. ಚಿತ್ರದ ಕಲಾವಿದರು, ತಂತ್ರಜ್ಞರ ಆಯ್ಕೆಗೆ ಚಾಲನೆ ಸಿಕ್ಕಿದ್ದು, ಸಂಕ್ರಾಂತಿಯ ವೇಳೆಗೆ ಸೆಟ್ಟೇರುವ ಸಾಧ್ಯತೆ ಇದೆ.