ಇಂದು ಸಂಜೆ ಡ್ರಾಮಾ ಜೂನಿಯರ್ ಫಿನಾಲೆ

ಜೀ ವಾಹಿನಿಯಲ್ಲಿ ಪ್ರಸಾರ

Team Udayavani, Mar 24, 2019, 11:17 AM IST

Zee-Kannada

ಕಿರುತೆರೆ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಈಗಾಗಲೇ ಹಲವು ಧಾರಾವಾಹಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದೆ. ಈಗಾಗಲೇ “ಡ್ರಾಮಾ ಜೂನಿಯರ್’ ಸಾಕಷ್ಟು ಗಮನಸೆಳೆದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಾರಿ “ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ನಡೆದದ್ದು ತಿಪಟೂರಿನಲ್ಲಿ. ಗ್ರ್ಯಾಂಡ್‌ ಫಿನಾಲೆ ತಿಪಟೂರಿನಲ್ಲಿ ನಡೆಯಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿನ ಜನರು, ಪ್ರೀತಿಯಿಂದಲೇ ಪುಟಾಣಿಗಳನ್ನು ಸ್ವಾಗತಿಸಿದ ಖುಷಿ ಹೇಳತೀರದು.

ತಿಪಟೂರಿನ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಜನರ ನಡುವೆ “ಡ್ರಾಮಾ ಜೂನಿಯರ್ ಸೀಸನ್‌ 3′ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇಷ್ಟು ದಿನಗಳ ಕಾಲ ವಾಹಿನಿ ಆಯೋಜಿಸಿದ್ದ “ಡ್ರಾಮಾ ಜೂನಿಯರ್’ ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಮಕ್ಕಳು, ಗ್ರ್ಯಾಂಡ್‌ ಫಿನಾಲೆಯಲ್ಲಿ ಮತ್ತಷ್ಟು ಮನರಂಜನೆ ನೀಡಿದ್ದು ವಿಶೇಷ.

ಇನ್ನು, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಮಹಾದೇವಿ’, “ಕಮಲಿ’, “ಪಾರು’ ಧಾರಾವಾಹಿಗಳ ನಾಯಕ, ನಾಯಕಿಯರಾದ ಕಮಲಿ, ರಿಷಿ, ಪಾರು, ಆದಿತ್ಯ, ಹಿರಣ್ಮಯಿ ಹಾಗೂ ಸೂರ್ಯ ಅವರು ಆ ವೇದಿಕೆಯಲ್ಲಿ ಸ್ಟೆಪ್‌ ಹಾಕುವ ಮೂಲಕ ಮತ್ತಷ್ಟು ಮೆರುಗು ನೀಡಿದರು.

ಇದರೊಂದಿಗೆ “ಸರಿಗಮಪ ಸೀಸನ್‌15ರ ವಿಜೇತರಾದ ಕೀರ್ತನ್‌ ಹೊಳ್ಳ, ಹನುಮಂತ ಅವರು ಡ್ರಾಮಾ ಜೂನಿಯರ್ ಗ್ರ್ಯಾಂಡ್‌ ಫಿನಾಲೆ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ನಿರೂಪಕ ಮಾಸ್ಟರ್‌ ಆನಂದ್‌ ಮತ್ತು ತೀರ್ಪುಗಾರರಾದ ವಿಜಯ ರಾಘವೇಂದ್ರ, ಜೂಲಿ ಲಕ್ಷ್ಮೀ ಹಾಗು ಮುಖ್ಯಮಂತ್ರಿ ಚಂದ್ರು ಅವರು ವೇದಿಕೆಗೆ ಬಂದು ಮಕ್ಕಳಿಗೆ ಶುಭ ಕೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡದರು.

ಗ್ರ್ಯಾಂಡ್‌ ಫಿನಾಲೆಯಲ್ಲಿ ಗ್ರೂಪ್‌ ಆ್ಯಕ್ಟ್, ಜುಗಲ್ ಬಂಧಿ ಹಾಗು ಸೋಲೋ ರೌಂಡ್‌ ಹೀಗೆ 3 ಹಂತದಲ್ಲಿ ಕಾರ್ಯಕ್ರಮ ನಡೆಯಿತು. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿನಯವಿತ್ತು. ಅದನ್ನು ಕಂಡ ತಿಪಟೂರು ಮಂದಿ ಮೊಗದಲ್ಲಿ ಮತ್ತಷ್ಟು ಖುಷಿ. ಆದರೆ, ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರದರ್ಶನ ಕೊಟ್ಟರೂ, ಆ ಪೈಕಿ ಯಾರು ವಿಜೇತರು ಎಂಬುದು ಕೆಲ ಕಾಲ ಗೊಂದಲವಿತ್ತು.

ಕೊನೆಗೂ ತೀರ್ಪುಗಾರರು ಮತ್ತು ವಿನ್ನರ್ ಪ್ರಾಯೋಜಕರಾದ ಕಾನ್ಫಿಡೆಂಟ್ ಗ್ರೂಪ್‌ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಜೆ ರಾಯ್ ಅವರು “ಡ್ರಾಮಾ ಜೂನಿಯರ್ ಸೀಸನ್‌ 3′ ವಿನ್ನರ್‌ ಯಾರೆಂಬುದನ್ನು ಘೋಷಣೆ ಮಾಡಿದರು. ಆ ವಿಜೇತರು ಯಾರೆಂಬುದನ್ನು ಮಾ.24 ರ ಭಾನುವಾರ (ಇಂದು) ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ಶೋ ವೀಕ್ಷಿಸಬಹುದಾಗಿದೆ.

ಟಾಪ್ ನ್ಯೂಸ್

Ananya Jamwal

ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದ್ದ ವಿದ್ಯಾರ್ಥಿನಿಗೆ ಜೀವ ಬೆದರಿಕೆ

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

MUST WATCH

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

ಹೊಸ ಸೇರ್ಪಡೆ

high court

ಅನಧಿಕೃತ ಕಟ್ಟಡ ಮುಲಾಜಿಲ್ಲದೆ ಕೆಡವಿ..!

7nep

ಎನ್‌ಇಪಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ದೀಪಾವಳಿ psd

ಪೂರ್ವಿಕಾ ದೀಪಾವಳಿ ಮೆಗಾ ಡೀಲ್‌

6karnataka

ಇತಿಹಾಸದಿಂದ ಪಾಠ ಕಲಿಯೋಣ: ಡಾ| ರೆಡ್ಡಿ ವಿಷಾದ

Ananya Jamwal

ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದ್ದ ವಿದ್ಯಾರ್ಥಿನಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.