ಇಂದು ಅಂಬರೀಶ್‌ ಮೊದಲ ವರ್ಷದ ಪುಣ್ಯತಿಥಿ

Team Udayavani, Nov 14, 2019, 6:00 AM IST

ಅಂಬರೀಶ್‌ ಇಲ್ಲದೇ ಒಂದು ವರ್ಷ ಗತಿಸುತ್ತಿದೆ. ನ.24, 2018 ರಂದು ಅಗಲಿದ್ದರೂ, ಅಂಬರೀಶ್‌ ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಕಾರಣ, ಅವರ ಚಿತ್ರಗಳ ಮೂಲಕ, ಅವರ ಖಡಕ್‌ ಮಾತುಗಳ ಮೂಲಕ, ತಮಾಷೆ, ಪ್ರೀತಿಯ ಗದರಿಕೆಯ ಮೂಲಕ ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು ಇಂದಿಗೂ ಜೀವಂತ. ಅವರ ಕುಟುಂಬ ವರ್ಗ ನ.14 (ಇಂದು) ಅವರ ಮೊದಲ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಿದೆ.

ಹೌದು, ಸ್ನೇಹಜೀವಿಯಾಗಿದ್ದ ಅಂಬರೀಶ್‌ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು. ಸ್ನೇಹ ಸಾಗರ ಎಂಬುದನ್ನು ಸಾರಿದ ಅಂಬರೀಶ್‌ ಅವರ ಮೊದಲ ಪುಣ್ಯತಿಥಿಯನ್ನು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿರುವ ವೃಕ್ಷ ಹಾಲ್‌ನಲ್ಲಿ ನಡೆಸಲು ಕುಟುಂಬ ವರ್ಗ ಸಕಲ ಸಿದ್ಧತೆ ಮಾಡಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ