ನಟರು ತುಂಬಾ ಇದ್ದಾರೆ, ಆದರೆ, ದರ್ಶನ್ ರಿಯಲ್ ಹೀರೋ : ಟಾಲಿವುಡ್ ನಟ ಜಗಪತಿ ಬಾಬು
ದರ್ಶನ್ ಅವರಿಂದ ನನಗೆ ದೊರೆತ ಗೌರವ ತೆಲುಗು ಚಿತ್ರರಂಗದಲ್ಲಿಯೂ ಇದುವರೆಗೆ ಸಿಕ್ಕಿಲ್ಲ
Team Udayavani, Feb 27, 2021, 1:10 PM IST
ಬೆಂಗಳೂರು: ಕನ್ನಡ,ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿರುವ ‘ರಾಬರ್ಟ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಶುಕ್ರವಾರ (ಫೆ.26) ಮುತ್ತಿನ ನಗರಿ ಹೈದರಾಬಾದಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮುಸ್ಸಂಜೆ ವೇಳೆಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿಅದ್ಧೂರಿಯಾಗಿ ಜರುಗಿದ ಈ ಕಾರ್ಯಕ್ರಮ ವಿಶೇಷತೆಯೊಂದಕ್ಕೆ ಸಾಕ್ಷಿಯಾಯಿತು.
ಹೌದು, ಕರ್ನಾಟಕ, ಕನ್ನಡ ಹಾಗೂ ದರ್ಶನ್ ಅವರ ಬಗ್ಗೆ ಟಾಲಿವುಡ್ ಹಿರಿಯ ನಟ ಜಗಪತಿ ಬಾಬು ಅದ್ಭುತ ನುಡಿಗಳನ್ನಾಡಿದರು. ಮುಖ್ಯವಾಗಿ ‘ಡಿ ಬಾಸ್’ ಬಗ್ಗೆ ಮನದಾಳದ ಮಾತು ಹಂಚಿಕೊಂಡ ಬಾಬು, ದರ್ಶನ್ ಅವರು ನಿಜವಾದ ಹೀರೋ. ನಟರು ತುಂಬಾ ಇರುತ್ತಾರೆ. ತೆರೆಯ ಮೇಲೆ ನಾಯಕನಾಗುವುದು ದೊಡ್ಡ ವಿಷಯವಲ್ಲ. ಆದರೆ, ದರ್ಶನ್ ನಿಜ ಜೀವನದ ರಿಯಲ್ ಹೀರೋ ಎಂದು ಬಾಯ್ತುಂಬ ಹೊಗಳಿದರು.
ಪರೋಪಕಾರಿಯಾಗಿರುವ ದರ್ಶನ್ ಸಹಾಯ ಅರಸಿ ಬಂದವರಿಗೆ ಎಂದಿಗೂ ಇಲ್ಲ ಎನ್ನುವುದಿಲ್ಲ. ಹಿಂದೆ ಮುಂದೆ ಯೋಚಿಸದೆ ಯಾರಿಗೆ ಏನು ಬೇಕೋ ಅದನ್ನ ನೀಡುತ್ತಾರೆ, ಸಹಾಯ ಮಾಡುತ್ತಾರೆ. ದರ್ಶನ್ ಅವರ ದಾನಧರ್ಮದ ಬಗ್ಗೆ ತುಂಬಾ ಕೇಳಿದ್ದೆ ಆದರೆ, ಸ್ವತಃ ನಾನೇ ನೋಡಿದ ಮೇಲೆ ಅವರು ನಿಜವಾದ ಹೀರೋ ಅಂತಾ ನನಗೆ ಅನ್ನಿಸಿತು. ಒಮ್ಮೆ ಮಾತು ನೀಡಿದರೆ ಎಷ್ಟೇ ಕೋಟಿ ಖರ್ಚಾದರೂ ಅದನ್ನು ನೆರವೇರಿಸುತ್ತಾರೆ. ಚಿತ್ರೀಕರಣಕ್ಕೆ ತೆರಳಿದ ನನ್ನನ್ನು ಮನೆಯ ಅತಿಥಿಯಂತೆ ನೋಡಿಕೊಂಡರು.
ಮೈಸೂರಿನಲ್ಲಿ ನಡೆಯುತ್ತಿದ್ದ ಉಮಾಪತಿ ನಿರ್ಮಾಣದ ಬೇರೆ ಚಿತ್ರದ ಚಿತ್ರೀಕರಣಕ್ಕೆ ನಾನು ತೆರಳಿದ್ದೆ. ಈ ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ದರ್ಶನ್, ನನಗಾಗಿ ಎಲ್ಲರನ್ನೂ ಸೇರಿಸಿ ಸುಂದರವಾದ ಗೆಟ್ ಟು ಗೆದರ್ ಮಾಡಿದ್ರು. ಅವರಿಂದ ನನಗೆ ದೊರೆತ ಗೌರವ ತೆಲುಗು ಚಿತ್ರರಂಗದಲ್ಲಿಯೂ ಇದುವರೆಗೆ ಸಿಕ್ಕಿಲ್ಲ ಎಂದು ನುಡಿದರು.
ಇನ್ನು ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಜಗಪತಿ ಬಾಬು ಸಹ ಅಭಿನಯಿಸಿದ್ದಾರೆ. ಉಮಾಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅದ್ಧೂರಿಯಾಗು ಮೂಡಿ ಬರುವಂತೆ ಶ್ರಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಅಣ್ಣಾವ್ರು ಕುಮಾರರಾಮ ಚಿತ್ರ ಮಾಡಬೇಕಿತ್ತು, ಆದ್ರೆ..!
ಚಂದನವನದ ನವದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್’ಗೆ ಕೋವಿಡ್ ಸೋಂಕು ದೃಢ
ಮಾಸ್-ಕ್ಲಾಸ್ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್
ವೀಲ್ಚೇರ್ನಲ್ಲಿ ಒಂದು ವಿಭಿನ್ನ ಪ್ರೇಮಕಥೆ
ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್
MUST WATCH
ಹೊಸ ಸೇರ್ಪಡೆ
ಕಾಪು: ನಾಗಬನದ ಮೇಲೆ ಉರುಳಿ ಬಿದ್ದ ಅಶ್ವಥ ಮರ, ಅಪಾರ ಹಾನಿ
ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!