ನಾಳೆ ವಿಲನ್‌ ಟೀಸರ್‌

Team Udayavani, Jun 27, 2018, 10:56 AM IST

villian.jpg

ಶಿವರಾಜಕುಮಾರ್‌ ಹಾಗೂ ಸುದೀಪ್‌ ಅಭಿಮಾನಿಗಳು, ನಿರ್ದೇಶಕ ಪ್ರೇಮ್‌ ಅವರಲ್ಲಿ ಅದೆಷ್ಟು ಬಾರಿ “ಟೀಸರ್‌ ಬಿಡುಗಡೆ ಯಾವಾಗ’ ಎಂದು ಕೇಳಿದ್ದರೋ ಲೆಕ್ಕವಿಲ್ಲ. ಆದರೆ, ಪ್ರೇಮ್‌ “ವೆರಿ ಸೂನ್‌ ಬಾಸ್‌’ ಎನ್ನುತ್ತಲೇ ತಮ್ಮ ಕೆಲಸದಲ್ಲಿ ಬಿಝಿಯಾಗಿದ್ದರು. ಅಂತಿಮವಾಗಿ ಈಗ ಟೀಸರ್‌ ಬಿಡುಗಡೆಯ ದಿನಾಂಕವನ್ನು ಪ್ರೇಮ್‌ ಘೋಷಿಸಿದ್ದು, ಜುಲೈ 28 ರಂದು ಅಂದರೆ ನಾಳೆ “ದಿ ವಿಲನ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ನಗರದ ಜಿಟಿ ವರ್ಲ್ಡ್ ಮಾಲ್‌ನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಲಿದ್ದು, ತಮ್ಮ ನೆಚ್ಚಿನ ನಟರ ಗೆಟಪ್‌ ನೋಡಲು ಅಭಿಮಾನಿಗಳು ಕಾತುರರಾಗಿರುವುದಂತೂ ಸುಳ್ಳಲ್ಲ. “ದಿ ವಿಲನ್‌’ ಚಿತ್ರದ ಟೀಸರ್‌ ಬಿಡುಗಡೆಗೆ ಚಿತ್ರತಂಡ 500 ರೂಪಾಯಿ ಟಿಕೆಟ್‌ ದರ ನಿಗದಿ ಮಾಡಿದೆ. ನೀವು 500 ರೂಪಾಯಿ ಟಿಕೆಟ್‌ ಪಡೆದು ಟೀಸರ್‌ ವೀಕ್ಷಿಸಬಹುದು. ಎಲ್ಲಾ ಓಕೆ ಟೀಸರ್‌ ಬಿಡುಗಡೆಗೆ ಟಿಕೆಟ್‌ ಯಾಕೆ?

ಅದು ಕೂಡಾ 500 ರೂಪಾಯಿ ಎಂದು ನೀವು ಹುಬ್ಬೇರಿಸಬಹುದು. “ದಿ ವಿಲನ್‌’ ತಂಡ ಟೀಸರ್‌ಗೆ 500 ರೂಪಾಯಿ ನಿಗದಿ ಮಾಡಲು ಒಂದು ಕಾರಣವಿದೆ. ಅದು ಆರ್ಥಿಕ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ಸಹಾಯ ಮಾಡುವ ಉದ್ದೇಶ. ಕನ್ನಡ ಚಿತ್ರರಂಗಕ್ಕಾಗಿ ದುಡಿದ ಕೆಲವು ನಿರ್ದೇಶಕರು ಇಂದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೆಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿಯಲ್ಲಿದ್ದಾರೆ.

ಇದನ್ನು ಮನಗಂಡ ಚಿತ್ರತಂಡ ಟೀಸರ್‌ ಬಿಡುಗಡೆಗೆ ದರ ನಿಗದಿ ಮಾಡಿದೆ. ಇದರಿಂದ ಬಂದ ಹಣವನ್ನು ಆಯ್ದ ನಿರ್ದೇಶಕರಿಗೆ ಅಂದೇ ನೀಡುವ ಉದ್ದೇಶವಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಅಂದು ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು, ವಿದೇಶದಲ್ಲಿ ಸುದೀಪ್‌ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಎಲ್ಲಾ ಓಕೆ, ಪ್ರೇಮ್‌ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತಾರೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪ್ರೇಮ್‌ ಹೇಳುವಂತೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಭರದಿಂದ ಸಿನಿಮಾ ಕೆಲಸ ಸಾಗುತ್ತಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಕೂಡಾ ನಡೆಯಲಿದೆ. ಚಿತ್ರವನ್ನು ಸಿ.ಆರ್‌.ಮನೋಹರ್‌ ನಿರ್ಮಿಸುತ್ತಿದ್ದಾರೆ. 

ಟಾಪ್ ನ್ಯೂಸ್

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

12-

Gangolli: ರಿಕ್ಷಾ-ಕಾರು ಢಿಕ್ಕಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.