ಹಣ್ಣಾಗಿಲ್ಲ ತೋತಾಪುರಿ! : 45 ದಿನಗಳ ಚಿತ್ರೀಕರಣ ಬಾಕಿ

140 ದಿನ ಶೂಟಿಂಗ್‌ ,16 ಕೋಟಿ ಬಜೆಟ್‌ ,45 ದಿನಗಳ ಚಿತ್ರೀಕರಣ ಬಾಕಿ

Team Udayavani, Dec 6, 2020, 1:09 PM IST

ಹಣ್ಣಾಗಿಲ್ಲ ತೋತಾಪುರಿ! : 45 ದಿನಗಳ ಚಿತ್ರೀಕರಣ ಬಾಕಿ

ತೋತಾಪುರಿ ಸಿನಿಮಾ ಎಲ್ಲಿಗೆ ಬಂತು? – ಸಿನಿಮಾ ಪ್ರೇಮಿಗಳಲ್ಲಿ ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆಕಾರಣ ಆ ಸಿನಿಮಾದ ಮೇಲಿದ್ದ ನಿರೀಕ್ಷೆ. “ನೀರ್‌ ದೋಸೆ’ಯಂತಹ ಹಿಟ್‌ ಚಿತ್ರಕೊಟ್ಟ ನಟ ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯ ಪ್ರಸಾದ್‌ ಮತ್ತೆ ಒಂದಾದ ಸಿನಿಮಾ “ತೋತಾಪುರಿ’. “ಶಿವಲಿಂಗ’ದಂತಹ ಹಿಟ್‌ ಸಿನಿಮಾ ನಿರ್ಮಿಸಿರುವ ಕೆ.ಎ.ಸುರೇಶ್‌ ಈ ಸಿನಿಮಾದ ನಿರ್ಮಾಪಕರು. ಸಿನಿಮಾ ಆರಂಭವಾಗಿ ಎರಡು ವರ್ಷ ಕಳೆದರೂ ಸಿನಿಮಾ ಇನ್ನೂ ಪೂರ್ತಿಯಾಗಿಲ್ಲ.

ಆರಂಭದಲ್ಲಿ ಒಂದು ಭಾಗವಾಗಿ ಚಿತ್ರೀಕರಣಕ್ಕೆ ಮುಂದಾಗಿದ್ದ ತಂಡ ಈಗ ಎರಡು ಭಾಗಗಳಲ್ಲಿ ಚಿತ್ರ ತರಲು ಮುಂದಾಗಿದೆ. ಆದರೆ, ಸದ್ಯ ಚಿತ್ರೀಕರಣ ನಿಂತಿದೆ. ನಿರ್ದೇಶಕ ವಿಜಯ ಪ್ರಸಾದ್‌ “ಪೆಟ್ರೋಮ್ಯಾಕ್ಸ್‌’ನಲ್ಲಿ ಬಿಝಿಯಾಗಿದ್ದಾರೆ. ಕೇವಲ 15 ದಿನದಲ್ಲೇ ಮೊದಲ ಹಂತವನ್ನು ಮುಗಿಸಿ, ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್‌ ಅಬ್ಬರಕ್ಕೆ ಶಿವಣ್ಣ ಸಾಥ್‌

“ತೋತಾಪುರಿ’ ಚಿತ್ರದಕುರಿತು ಇತ್ತೀಚೆಗೆ ಮಾಧ್ಯಮದವರು ಜಗ್ಗೇಶ್‌ ಅವರನ್ನುಕೇಳಿದಾಗ ಅವರು ನೇರವಾಗಿ ಉತ್ತರಿಸಿದ್ದಾರೆ. “ಆ ಚಿತ್ರಯಾವಾಗ ಮುಗಿಯುತ್ತದೋ ಗೊತ್ತಿಲ್ಲ.ಕಲಾವಿದನಾಗಿ ನನ್ನಕೆಲಸ ಮಾಡಿ ಮುಗಿಸೋದು ನನ್ನ ಜವಾಬ್ದಾರಿ.ಅದನ್ನು ಮಾಡಿದ್ದೇನೆ. ಇದುವರೆಗೆ140 ದಿನಗಳ ಚಿತ್ರೀಕರಣವಾಗಿದೆ.16ಕೋಟಿ ಖರ್ಚಾಗಿದೆ. ಇನ್ನೂ45 ದಿನಗಳ ಚಿತ್ರೀಕರಣ ಬಾಕಿ ಇದೆ. ಆದರೆ, ನಿರ್ದೇಶಕರು ಅಷ್ಟರಲ್ಲಿ ಇನ್ನೊಂದು ಸಿನಿಮಾದ ಚಿತ್ರೀಕರಣ ಶುರು ಮಾಡಿ, ಮೊದಲ ಹಂತವನ್ನು15 ದಿನದಲ್ಲೇ ಮುಗಿಸಿದ್ದಾರೆ. ಮತ್ತೆ ಯಾವಾಗ ಈ ಸಿನಿಮಾ ಶುರುವಾಗುತ್ತದೋ ಗೊತ್ತಿಲ್ಲ. ಮೊದಲ ಭಾಗ ಸಂಪೂರ್ಣ ಮುಗಿದಿದೆ. ಅದನ್ನಾದರೂ ಬಿಡುಗಡೆ ಮಾಡಿ ಎಂದೆ’ ಎನ್ನುವುದು ಜಗ್ಗೇಶ್‌ ಮಾತು.

ಇತ್ತೀಚೆಗೆ ಡಬ್ಬಿಂಗ್‌ ಮಾಡಿರುವ ಜಗ್ಗೇಶ್‌ಗೆ ಸಿನಿಮಾ ಮೂಡಿಬಂದಿರುವ ರೀತಿ ಬಗ್ಗೆ ಖುಷಿ ಇದೆ. “ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಆದರೆ, ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು, ಅಷ್ಟುದ್ದ ಇದೆ, ಇಷ್ಟುದ್ದ ಇದೆ ಎಂದರೆ ಹೇಗೆ. ಹೊರಗೆ ಬಿಟ್ಟ ಮೇಲಷ್ಟೇ ಗೊತ್ತಾಗೋದು’ ಎಂದು ನೇರವಾಗಿ ಹೇಳುತ್ತಾರೆ.

ಟಾಪ್ ನ್ಯೂಸ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

girls hostel

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

23indian

ಸಂವಿಧಾನ ನಮಗೆಲ್ಲ ದಾರಿದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.