ಫೆ. 23ಕ್ಕೆ “ತ್ರಯಂಬಕಂ’ ಟ್ರೇಲರ್
Team Udayavani, Feb 10, 2019, 5:46 AM IST
“ಪುಟ – 109′ ಚಿತ್ರದ ಬಳಿಕ ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “ತ್ರಯಂಬಕಂ’ ಚಿತ್ರ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ತ್ರಯಂಬಕಂ’ ಚಿತ್ರದ ಟ್ರೇಲರ್ನ್ನು ಇದೇ ಫೆ. 23ರಂದು ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ನಟ ರಾಘವೇಂದ್ರ ರಾಜಕುಮಾರ್ “ತ್ರಯಂಬಕಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಪುನೀತ್ ರಾಜಕುಮಾರ್ “ತ್ರಯಂಬಕಂ’ ಚಿತ್ರದ ಮೊದಲ ಟ್ರೇಲರ್ನ್ನು ಬಿಡುಗಡೆಗೊಳಿಸಲಿದ್ದಾರೆ. ಫ್ಯೂಚರ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ “ತ್ರಯಂಬಕಂ’ ಚಿತ್ರದಲ್ಲಿ
ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ. ರಾಕೇಶ್ ಅವರ ಛಾಯಾಗ್ರಹಣದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ಚಿತ್ರದ ಹಾಡುಗಳಿಗೆ ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಸಾಹಿತ್ಯ ರಚಿಸಿದ್ದಾರೆ. ನವೀನ್ ಕೃಷ್ಣ ಸಂಭಾಷಣೆಯನ್ನು ಬರೆದಿದ್ದಾರೆ.