ಗೋಸಿ ಗ್ಯಾಂಗ್ಗೆ ಯು/ಎ
Team Udayavani, Aug 29, 2018, 11:45 AM IST
ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ಕಥೆ ಬರೆದು ನಿರ್ಮಾಣ ಮಾಡುತ್ತಿರುವವರು ಕೆ.ಶಿವಕುಮಾರ್ ಅವರ ‘ಗೋಸಿ ಗ್ಯಾಂಗ್’ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶಕ ರಾಜು ದೇವಸಂದ್ರ. “ಗೋಸಿ ಗ್ಯಾಂಗ್’ ಎಂಬ ಚಿತ್ರ ಡ್ರಗ್ಸ್ ಮಾಫಿಯಾ ಸುತ್ತ ಸುತ್ತುತ್ತದೆ.
ಇಲ್ಲಿ ಯುವಕರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿ ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ. ಅಂಥದ್ದೊಂದು ಮಾಫಿಯಾ ಹೇಗೆ ನಡೆಯುತ್ತೆ, ಯಾರೆಲ್ಲಾ ಇರುತ್ತಾರೆ ಎಂಬುದು ಚಿತ್ರದ ಹೈಲೆಟ್ ಅಂತೆ. ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯತಿರಾಜ್ ಜಗ್ಗೇಶ್ ಹಾಗು ಅಜಯ್ ಕಾರ್ತಿಕ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಅಜಯ್ ಕಾರ್ತಿಕ್ಗೆ ಇದು ಮೊದಲ ಸಿನಿಮಾ.
ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣ ಮಾಡಿದ್ದಾರೆ. ಆರವ್ ಸಂಗೀತವಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಉಳಿದಂತೆ ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕ, ಅನುಷಾ, ಸೋನು ಪಾಟೀಲ್, ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದರ್, ಬ್ಯಾಂಕ್ ಜನಾರ್ದನ್, ಮೈಕೆಲ್ ಮಧು, ಸುಚಿತ್ರ, ಕಾವ್ಯ ಪ್ರಕಾಶ್, ಅನ್ನಪೂರ್ಣ, ಶಿವು ಮುಂತಾದವರಿ¨ªಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು