
ಎಕ್ಸ್ ಕ್ಲ್ಯೂಸಿವ್: “ಕಾಂತಾರ -2” ಗೆ ದೈವ ಅನುಮತಿ ಕೊಟ್ಟದ್ದು ನಿಜವೇ?; ಸುದ್ದಿಯ ಸತ್ಯಾಸತ್ಯತೆ ಏನು?
ದೈವಸ್ಥಾನಕ್ಕೆ ಹೋಗಿ ದೈವದ ಬಳಿ ಅನುಮತಿ ಕೇಳಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬುತ್ತಿದೆ.
Team Udayavani, Dec 10, 2022, 1:48 PM IST

ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ʼಕಾಂತಾರʼ ಹವಾ ಜೋರಾಗಿ ಬೀಸಿದ ಮೇಲೆ ಸಿನಿಮಾದ ಎರಡನೇ ಭಾಗ ಬರಬಹುದೇ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಕೆಲವರು ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳೂ ಆರಂಭವಾಗಿದೆ ಎಂದು ಮಾತಾನಾಡಿಕೊಳ್ಳುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ʼಕಾಂತಾರ-2ʼ ಸಿನಿಮಾ ಬರಲಿದೆ ಅದಕ್ಕಾಗಿ ರಿಷಬ್ ಶೆಟ್ಟಿ ಹಾಗೂ ಚಿತ್ರ ತಂಡ ದೈವಸ್ಥಾನಕ್ಕೆ ಹೋಗಿ ದೈವದ ಬಳಿ ಅನುಮತಿ ಕೇಳಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬುತ್ತಿದೆ. ಆದರೆ ಈ ಸುದ್ದಿಯನ್ನು ಚಿತ್ರ ತಂಡ ನಿರಾಕರಿಸಿದೆ.
ಈ ಬಗ್ಗೆ ಉದಯವಾಣಿಗೆ ಚಿತ್ರ ತಂಡದ ಮೂಲಗಳು ಸ್ಪಷ್ಟನೆ ಕೊಟ್ಟಿದ್ದು, ಕಾಂತಾರ ಸಿನಿಮಾ ಮಾಡಲು ತಯಾರಿಯಲ್ಲಿರುವಾಗ ರಿಷಬ್ ಶೆಟ್ಟಿ ಅವರು ಸಿನಿಮಾ ಯಶಸ್ವಿಯಾದರೆ ಕೋಲ ಕೊಡುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು. “ಕಾಂತಾರ” ಸಿನಿಮಾ ಯಶಸ್ವಿಯಾದ ಬಳಿಕ ನಟ- ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರ ತಂಡದೊಂದಿಗೆ ಬಂದು ಮಂಗಳೂರು ಭಾಗದಲ್ಲಿ ಡಿ.8 ರಂದು ಕೋಲ ಸಂದಾಯ ಮಾಡಿದ್ದಾರೆ ಎಂದು ಚಿತ್ರ ಮಾಹಿತಿ ಕೊಟ್ಟಿದೆ.
ಕೋಲದ ವೇಳೆ ದೈವ ಚಿತ್ರ ತಂಡಕ್ಕೆ ಸಂಪ್ರದಾಯ ಬದ್ಧವಾಗಿ ನೀವು ಸಿನಿಮಾವನ್ನು ಮಾಡಿದ್ದೀರಿ, ಎಲ್ಲೂ ಕೂಡ ದೈವಗಳ ಆಚರಣೆಗೆ ಚ್ಯುತಿಬಾರದಂತೆ ನಡೆದುಕೊಂಡಿದ್ದೀರಿ. ಮುಂದೆಯೂ ನಿಮ್ಮ ತಂಡದೊಂದಿಗೆ ನಾನು ಇರುತ್ತೇನೆ ಎಂದು ಅಭಯ ನೀಡಿದೆ.
ಹರಕೆ ಇಟ್ಟುಕೊಂಡತೆಯೇ ಚಿತ್ರ ತಂಡ ದೈವ ಸಾನ್ನಿಧ್ಯಕ್ಕೆ ಬಂದು ಕೋಲ ಸಂದಾಯ ಮಾಡಿದೆ ಎಂದು ಚಿತ್ರ ತಂಡದ ಮೂಲಗಳು ಹೇಳಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಭಾರತ ಇಂದು ನಿರ್ಭೀತ ಮತ್ತು ನಿರ್ಣಾಯಕ, ಸದೃಢ ಸರ್ಕಾರ ಹೊಂದಿದೆ: ರಾಷ್ಟ್ರಪತಿ ಮುರ್ಮು

ಮಂಗಳೂರು: ಮೊಬೈಲ್ ಬಳಸುವಾಗ ತಾಯಿ ಗದರಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 14 ವರ್ಷದ ಬಾಲಕ

ಕಾರು – ಬಸ್ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

ಸಿದ್ದು ಹೆಣವನ್ನು ನಾಯಿನೂ ಮೂಸುವುದಿಲ್ಲ, ಅದನ್ನು ನಾವು ಯಾಕೆ ಮುಟ್ಟಬೇಕು: ಈಶ್ವರಪ್ಪ

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೂ ಭಾರತದ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ; ಪ್ರಧಾನಿ ಮೋದಿ