ಉಡುಂಬನಿಗೆ ಜೊತೆಯಾದ ಕಡಲೂರ ಹುಡುಗಿ ಚಿರಶ್ರೀ!

Team Udayavani, Aug 22, 2019, 3:33 PM IST

ಹಿಂದೆ ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹುಲಿರಾಯ ಚಿತ್ರದ ಮೂಲಕವೇ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಚಿರಶ್ರೀ ಅಂಚನ್. ಸಿನಿಮಾದಲ್ಲಿ ನಾಯಕಿಯರಲ್ಲೊಬ್ಬರಾಗಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದಾದ ಬಳಿಕ ತನ್ನಿಚ್ಛೆಯಂಥಾದ್ದೇ ಕಥೆ ಮತ್ತು ಪಾತ್ರಕ್ಕಾಗಿ ಕಾದು ಕುಳಿತಿದ್ದ ಚಿರಶ್ರೀ ಪಾಲಿಗೆ ಸರ್ಪ್ರೈಸಿನಂತೆ ಒಲಿದು ಬಂದಿದ್ದ ಚಿತ್ರ ಉಡುಂಬಾ!

ನಿರ್ದೇಶಕ ಶಿವರಾಜ್ ಅಚ್ಚುಕಟ್ಟಾಗಿ ಕಥೆ ರೆಡಿ ಮಾಡಿಕೊಂಡು ಪ್ರತೀ ಪಾತ್ರಗಳಿಗೂ ಅದಕ್ಕೊಪ್ಪುವಂಥಾ ನಟ ನಟಿಯರ ಆಯ್ಕೆಯತ್ತ ಹೆಚ್ಚು ಗಮನ ನೆಟ್ಟಿದ್ದರಂತೆ. ಆದರೆ ತಾರಾಗಣವೆಲ್ಲ ಫೈನಲ್ ಆದರೂ ನಾಯಕಿಯಾಗಿ ಮಾತ್ರ ಯಾರನ್ನೂ ಆಯ್ಕೆ ಮಾಡಿಕೊಳ್ಳಲಾಗಿರಲಿಲ್ಲ. ಉಡುಂಬಾ ಚಿತ್ರದಲ್ಲಿ ನಾಯಕಿಯ ಪಾತ್ರ ಮುಗ್ಧತೆಯೇ ಮೈದಳೆದಂಥಾದ್ದು. ಆದರೆ ತುಸು ಅಂಥಾ ಛಾಯೆ ಇರೋ ಮುಖದ ಹುಡುಕಾಟದಲ್ಲಿದ್ದ ಶಿವರಾಜ್ ಕಣ್ಣಿಗೆ ಬಿದ್ದವರು ಕಡಲೂರಿನ ಚೆಲುವೆ ಚಿರಶ್ರೀ ಅಂಚನ್!

ಚಿರಶ್ರೀ ಕೂಡಾ ತನಗೆ ಪರಿಚಿತವಾಗಿರುವ ವಾತಾವರಣದಲ್ಲಿ ಘಟಿಸುವ ಕಥೆ ಮತ್ತು ತನಗೊಪ್ಪುವಂಥಾ ಸುಂದರವಾದ ಪಾತ್ರವನ್ನು ಮೆಚ್ಚಿಕೊಂಡು ಖುಷಿಯಿಂದಲೇ ಒಪ್ಪಿಕೊಂಡಿದ್ದರಂತೆ. ಬಳಿಕ ನಿರ್ದೇಶಕರ ನಿರೀಕ್ಷೆಗೂ ಮೀರಿದಂತೆ ಅವರ ಸಹಜಾಭಿನಯ ನೀಡಿದ್ದಾರೆ. ಇಲ್ಲಿ ಚಿರಶ್ರೀಯದ್ದು ಮಗ್ಧ ಹುಡುಗಿಯ ಪಾತ್ರ. ಇಂಥಾ ಹುಡುಗಿ ಪ್ರೀತಿಸಿದ ಸಾದಾ ಸೀದಾ ಹುಡುಗ ಘಟನೆಯೊಂದರಿಂದ ಉಡುಂಬನಾಗಿ ಅಬ್ಬರಿಸಿದಾಗ ಏನಾಗುತ್ತದೆ ಅನ್ನೋದರ ಸುತ್ತಲಿನ ರೋಚಕ ಕಥೆ ಚಿತ್ರದಲ್ಲಿದೆ. ಉಡುಂಬಾದಲ್ಲಿ ತಾನು ನಿರ್ವಹಿಸಿರುವ ಪಾತ್ರದ ಬಗ್ಗೆ ಚಿರಶ್ರೀಯವರಿಗೂ ಗಾಢವಾದ ಭರವಸೆಯಿದೆ. ಪಾತ್ರವೇ ತಮ್ಮನ್ನು ಚಿತ್ರರಂಗದಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ ಎಂಬ ವಿಶ್ವಾಸವೂ ಅವರಲ್ಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ