ಇವನು ಸಸ್ಯಾಹಾರದಲ್ಲಿಯೇ ಸಿಕ್ಸ್‍ಪ್ಯಾಕ್ ಪಡೆದ ಹುಂಬ ಉಡುಂಬಾ!
Team Udayavani, Aug 22, 2019, 3:29 PM IST
ಸಿಕ್ಸ್ ಪ್ಯಾಕ್ ಅನ್ನೋದು ಈಗಿನ ತಲೆಮಾರಿನ ಪ್ರತೀ ಯುವಕರನ್ನೂ ಆವರಿಸಿಕೊಂಡಿರೋ ಸೆಳೆತ. ಆದರೆ ಅದನ್ನು ಸಾಧ್ಯವಾಗಿಸಿಕೊಳ್ಳೋದು ಮಾತ್ರ ವರ್ಷಾತರಗಳ ಶ್ರಮ ಬೇಡುತ್ತದೆ. ಬರಿಗಣ್ಣಿಗೆ ಹೊಟ್ಟೆ ಮೇಲೆ ಆರು ಮಡಿಕೆ ಮೂಡಿಕೊಂಡಿರೋ ಸಲೀಸಿನ ಸಂಗತಿಯಾಗಿ ಕಾಣೋ ಸಿಕ್ಸ್ ಪ್ಯಾಕ್ ಅದೆಂಥಾ ರಿಸ್ಕೀ ವಿಚಾರ ಅನ್ನೋದು ಕೆಲವೇ ಕೆಲವರಿಗೆ ಮಾತ್ರವೇ ಗೊತ್ತಿರುತ್ತದೆ. ಆದರೆ ಉಡುಂಬಾ ಚಿತ್ರದ ಹೀರೋ ಪವನ್ ಶೌರ್ಯ ಮಾತ್ರ ಇಂಥಾದ್ದೊಂದು ಸವಾಲನ್ನು ಸ್ವೀಕರಿಸಿ ಕೇವಲ ಎರಡೇ ಎರಡು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮೂಡಿಸಿಕೊಂಡು ಮಿಂಚಿದ್ದರು. ಟ್ರೇಲರ್ನಲ್ಲಿ ಅವರ ಕಟ್ಟುಮಸ್ತಾದ ದೇಹವೂ ಎಲ್ಲರನ್ನು ಸೆಳೆದುಕೊಂಡಿರೋದರ ಹಿಂದೆಯೂ ಅಂಥಾದ್ದೇ ಶ್ರಮದ ಕತೆಯಿದೆ.
ನಿರ್ದೇಶಕ ಶಿವರಾಜ್ ಒಂದು ಹಂತದಲ್ಲಿ ಏಕಾಏಕಿ ಸಿಕ್ಸ್ ಪ್ಯಾಕ್ ಬಾಡಿ ಮೇಂಟೇನು ಮಾಡಬೇಕೆಂದು ಸೂಚಿಸಿದ್ದರಂತೆ. ಆದರೆ ಆ ಘಳಿಗೆಯಲ್ಲಿ ಮನೆಯಲ್ಲಿನ ವ್ರತದ ಪರಿಣಾಮವಾಗಿ ಪವನ್ ಪ್ಯೂರ್ ವೆಜ್ ಆಗಿದ್ದರು. ಬರೀ ಸಸ್ಯಾಹಾರದಲ್ಲಿ ಇಂಥಾ ದೇಹ ಪರಿವರ್ತನೆ ಮಾಡಿಕೊಳ್ಳೋದು ಇದ್ದಿದ್ದರಲ್ಲಿಯೂ ಸವಾಲು. ಆದರೆ ಪಾತ್ರಕ್ಕಾಗಿ ಎಂಥಾ ರಿಸ್ಕನ್ನಾದರೂ ಸಲೀಸಾಗಿ ಮೈಮೇಲೆಳೆದುಕೊಳ್ಳೋ ಸ್ವಭಾವದ ಪವನ್ ತಕ್ಷಣವೇ ಸಿಕ್ಸ್ ಪ್ಯಾಕ್ ಯಾಗ ಆರಂಭಿಸಿದ್ದರಂತೆ.
ಆ ನಂತರದಲ್ಲಿ ಪ್ರತೀ ದಿನವೂ ದಿನಕ್ಕೆ ಎರಡು ಹೊತ್ತು ಆರು ಘಂಟೆಗೂ ಹೆಚ್ಚು ಕಾಲ ಬೆವರು ಹರಿಸಿ ಕೇವಲ ಎರಡು ತಿಂಗಳಲ್ಲಿಯೇ ಸಿಕ್ಸ್ ಪ್ಯಾಕ್ನೊಂದಿಗೆ ಚಿತ್ರತಂಡದ ಎದುರು ನಿಂತು ಸರ್ಪ್ರೈಸ್ ಕೊಟ್ಟಿದ್ದರಂತೆ. ತಪಸ್ಸಿನಂಥಾ ಶ್ರದ್ಧೆ ಬೇಕಾಗುತ್ತದೆ. ಪವನ್ ಗೂಳಿಹಟ್ಟಿ ಚಿತ್ರದ ಮೂಲಕ ನಾಯಕನಾಗಿ ಅವತರಿಸಿದ್ದಾಗಲೂ ಗಮನ ಸೆಳೆದಿದ್ದ ಇಂಥಾ ಶ್ರದ್ಧೆಯಿಂದಲೇ. ಉಡುಂಬಾ ಚಿತ್ರಕ್ಕಾಗಿ ಅವರು ಮತ್ತಷ್ಟು ಹೆಚ್ಚು ಆಸ್ಥೆಯಿಂದಲೇ ತಯಾರಾಗಿದ್ದರಂತೆ. ಅದೆಲ್ಲವೂ ಫಲ ಕೊಡುವ ಕ್ಷಣಗಳೀಗ ಹತ್ತಿರಾಗಿವೆ. ಇದೇ 23ರಂದು ಉಡುಂಬಾನ ಅಸಲೀ ಆಂತರ್ಯ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡಕ್ಕೆ ಶುಭ ಕೋರಿದ ನಟ ದರ್ಶನ್
ಸಲಾರ್ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ
ಬಿಝಿ ಫೆಬ್ರವರಿ: ಸ್ಟಾರ್ಸ್ ಮೊದಲು ಹೊಸಬರ ಅಬ್ಬರ
ಕಬ್ಜ ಚಿತ್ರದಲ್ಲಿ ಸುದೀಪ್ ಗೆಟಪ್ಗೆ ಫ್ಯಾನ್ಸ್ ಫಿದಾ
ನಾಲ್ಕು ಭಾಷೆಗಳಲ್ಲಿ ಪ್ರೇಮ್ ಏಕ್ ಲವ್ ಯಾ: ಪ್ರೇಮಿಗಳ ದಿನಕ್ಕೆ ಮೊದಲ ಹಾಡು