ಹೊಸಬಂತು ‘ಅನ್‌ಲಾಕ್‌ ರಾಘವ’ ಟೈಟಲ್‌ ಪೋಸ್ಟರ್‌


Team Udayavani, Jul 24, 2022, 12:02 PM IST

ಹೊಸಬಂತು ‘ಅನ್‌ಲಾಕ್‌ ರಾಘವ’ ಟೈಟಲ್‌ ಪೋಸ್ಟರ್‌

“ರಾಮ ರಾಮ ರೇ…’, “ಒಂದಲ್ಲಾ ಎರಡಲ್ಲಾ’ ಮತ್ತು “ಮ್ಯಾನ್‌ ಆಫ್ ದಿ ಮ್ಯಾಚ್‌’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಮತ್ತು ನಿರ್ಮಾಪಕ ಮಂಜುನಾಥ್‌ ಡಿ. ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾಕ್ಕೆ “ಅನ್‌ಲಾಕ್‌ ರಾಘವ’ ಎಂದು ಟೈಟಲ್‌ ಇಡಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ “ಅನ್‌ ಲಾಕ್‌ ರಾಘವ’ ಸಿನಿಮಾದ ಮೊದಲ ಟೈಟಲ್‌ ಪೋಸ್ಟರ್‌ ಅನ್ನು ಶ್ರೀಮತಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಹಿಂದೆ “ವೀಕೆಂಡ್‌’ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಟನಾಗಿ ಪರಿಚಯವಾಗಿದ್ದ ನವನಟ ಮಿಲಿಂದ್‌ “ಅನ್‌ ಲಾಕ್‌ ರಾಘವ’ ಸಿನಿಮಾದಲ್ಲಿ ನಾಯಕನಾಗಿದ್ದು, “ಲವ್‌ ಮಾಕ್ಟೇಲ್‌-2′ ಸನಿಮಾದ ಖ್ಯಾತಿಯ ರೇಚಲ್‌ ಡೇವಿಡ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಸಾಧುಕೋಕಿಲ, ಅವಿನಾಶ್‌, ರಮೇಶ್‌ ಭಟ್‌, ಸುಂದರ್‌ ವೀಣಾ, ಧರ್ಮಣ್ಣ ಕಡೂರು, ಭೂಮಿ ಶೆಟ್ಟಿ ಮೊದಲಾದವರು “ಅನ್‌ಲಾಕ್‌ ರಾಘವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಲವಿತ್‌ ಛಾಯಾಗ್ರಹಣ, ಅಜಯ್‌ ಕುಮಾರ್‌ ಸಂಕಲನವಿದೆ.

ಇದನ್ನೂ ಓದಿ:ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ದೀಪೇಶ್ ಭಾನ್ ನಿಧನ

ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಿಂದೆ “ಭಾಗ್ಯರಾಜ್‌’, “ಕಳ್ಬೆಟ್ಟದ ದರೋಡೆಕೋರರು’, “ರಾಜು ಜೇಮ್ಸ… ಬಾಂಡ್‌’ ಸಿನಿಮಾಗಳನ್ನು ನಿರ್ದೇಶಿಸಿರುವ ದೀಪಕ್‌ ಮಧುವನಹಳ್ಳಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ನಿರ್ಮಾಪಕ ಡಿ. ಸತ್ಯಪ್ರಕಾಶ್‌, “ಇಂಡಸ್ಟ್ರಿಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎಂಬ ಆಸೆ ಇತ್ತು. ಆ ಕನಸು ಈಗ ಒಂದೊಂದೆ ಸಿನಿಮಾದ ಮೂಲಕ ನನಸಾಗುತ್ತಿದೆ. ಇದೊಂದು ಕಂಪ್ಲೀಟ್‌ ರೋಮ್ಯಾಂಟಿಕ್‌ ಕಾಮಿಡಿ ಶೈಲಿಯ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ತುಂಬ ಹೊಸ ನಿರೂಪಣೆ ಸಿನಿಮಾದಲ್ಲಿದೆ. ಮೂರು ರೀತಿ ಕಾಮಿಡಿ ಸಿನಿಮಾದಲ್ಲಿರುತ್ತದೆ. ಶೀಘ್ರದಲ್ಲಿಯೇ ಶೂಟಿಂಗ್‌ ಶುರುವಾಗಲಿದ್ದು, ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ’ ಎಂದರು.

“ಸತ್ಯ ಮಯೂರ ಪಿಕ್ಚರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಡಿ. ಸತ್ಯಪ್ರಕಾಶ್‌ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿದೆ. ನಿರ್ಮಾಪಕ ಮಂಜುನಾಥ್‌, ನಿರ್ದೇಶಕ ದೀಪಕ್‌, ನಾಯಕ ಮಿಲಿಂದ್‌, ನಾಯಕಿ ರೇಚಲ್‌, ನಟ ಧರ್ಮಣ್ಣ ಕಡೂರ್‌, ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಅನ್‌ಲಾಕ್‌ ರಾಘವ’ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿ, ಮಾಹಿತಿ ಹಂಚಿಕೊಂಡರು.

ಟಾಪ್ ನ್ಯೂಸ್

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

police crime

ಮುಂಬೈ: ವೀಸಾ ಇಲ್ಲದೆ ಚಿತ್ರರಂಗದಲ್ಲಿ ಕೆಲಸ; ಮಹಿಳೆಯರು ಸೇರಿ 17 ವಿದೇಶಿಯರ ಮೇಲೆ ಕೇಸ್

1—dsadsadsad

ವರುಣ್ ಧವನ್ ಅಭಿನಯದ ‘ಭೇಡಿಯಾ’ ಮೊದಲ ದಿನ ಗಳಿಸಿದ್ದೆಷ್ಟು?

13

ಪಣಜಿ: ಪ್ರವಾಸೋದ್ಯಮ ಇಲಾಖೆ ಘೋಷಿಸಿದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

not-out

ಅಜಯ್ ಪೃಥ್ವಿ ನಟನೆಯ ‘ನಾಟ್ಔಟ್’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್

1-wassadsd

ಕಾಂತಾರದ ‘ವರಾಹ ರೂಪಂ’ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್

trailer of Vidhi 370 released

ಟ್ರೇಲರ್‌ನಲ್ಲಿ ‘ವಿಧಿ 370’:  ಡಿಸೆಂಬರ್‌ನಲ್ಲಿ ತೆರೆಗೆ

aditi prabhudeva

ವರ್ಷಪೂರ್ತಿ ‘ಅದಿತಿ’ ಮಿಂಚು: ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ಮದುಮಗಳು

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

tdy-16

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ಪ್ರತಿಭಟನೆ

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.