Udayavni Special

2021 ರಲ್ಲಿ ರಾಜ್‌ ಫ್ಯಾಮಿಲಿಯಿಂದ 12+ ಚಿತ್ರ

ರಾಜ್‌ ಮಕ್ಕಳ, ಮೊಮ್ಮಕ್ಕಳ ಚಿತ್ರಗಳು ತೆರೆಗೆ ಸಿದ್ಧ

Team Udayavani, Nov 27, 2020, 12:13 PM IST

2021 ರಲ್ಲಿ ರಾಜ್‌ಫ್ಯಾಮಿಲಿಯಿಂದ 12+ ಚಿತ್ರ

‌ಕನ್ನಡದ ವರನಟ ಡಾ.ರಾಜ್‌ಕುಮಾರ್‌ ತಮ್ಮ ಚಿತ್ರಗಳ ಮೂಲಕ ಚಿತ್ರರಂಗವನ್ನು ಸಂಪನ್ನವಾಗಿಸಿದವರು. ಇವತ್ತಿಗೂ ಅವರ ಸಿನಿಮಾಗಳು ಆದರ್ಶಮಯವಾಗಿವೆ. ಎಲ್ಲಾ ಬಗೆಯ ಚಿತ್ರಗಳಲ್ಲಿ ಕಾಣಿಸಿಕೊಂಡ ಖ್ಯಾತಿ ಕೂಡಾ ಡಾ.ರಾಜ್‌ ಅವರದ್ದು. ರಾಜ್‌ ನಂತರ ಅವರ ಪುತ್ರರು ನಟರಾಗಿ ತಮ್ಮದೇ ಆದಅಭಿಮಾನಿ ವರ್ಗವನ್ನು ಹೊಂದಿದ್ದಾರೆ.

ಈಗ ಅವರ ಮೊಮ್ಮಕ್ಕಳುಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊಮ್ಮಕ್ಕಳಾದ ವಿನಯ್‌, ಯುವ ರಾಜ್‌ಕುಮಾರ್‌, ಧೀರನ್‌ ಹಾಗೂ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೊಸ ವರ್ಷದ ವಿಶೇಷವೆಂದರೆ ವರ್ಷಪೂರ್ತಿ ರಾಜ್‌ಕುಟುಂಬದ ಒಂದಲ್ಲ, ಒಂದು ಸಿನಿಮಾಗಳು ತೆರೆಕಾಣುತ್ತಲೇ ಇರುತ್ತವೆ. ಸುಮಾರು 12ಕ್ಕೂ ಹೆಚ್ಚು ಚಿತ್ರಗಳು ರಾಜ್‌ ಕುಟುಂಬಂದಿಂದ ಬಿಡುಗಡೆಯಾಗಲಿವೆ.

ಈ ಮೂಲಕ ರಾಜ್‌ ಅಭಿಮಾನಿಗಳಿಗೆ ಅವರ ಕುಟುಂಬ ಸದಸ್ಯರ ವಿಭಿನ್ನ ಚಿತ್ರಗಳನ್ನು ನೋಡುವ ಅವಕಾಶ ಸಿಗಲಿದೆ. ಶಿವರಾಜ್ ‌ಕುಮಾರ್‌,ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ವಿನಯ್‌, ಧೀರನ್‌,ಯುವ, ಧನ್ಯಾ ನಟಿಸಿರುವ ಚಿತ್ರಗಳು ಹೊಸ ವರ್ಷದಲ್ಲಿ ತೆರೆಕಾಣುತ್ತಿವೆ. ಆ ಚಿತ್ರಗಳ ಬಗ್ಗೆ ಒಂದು ರೌಂಡಪ್‌ ಇಲ್ಲಿದೆ.

ಇದನ್ನೂ ಓದಿ :ಪ್ರೇಮಿಗಳಿಗಾಗಿ ಪ್ರೇಮಂ ಪೂಜ್ಯಂ

ಹೊಸ ವರ್ಷಕ್ಕೆ ಶಿವಣ್ಣನಿಂದ ಎರಡು ಚಿತ್ರ :  ಹೊಸ ವರ್ಷಕ್ಕೆ ಅಂದರೆ 2021ಕ್ಕೆ ಶಿವರಾಜ್‌ ಕುಮಾರ್‌ ನಟನೆಯ ಎರಡು ಸಿನಿಮಾವಂತೂ ರಿಲೀಸ್‌ ಆಗಲಿದೆ. “ಭಜರಂಗಿ-2′ ಹಾಗೂ ಇತ್ತೀಚೆಗಷ್ಟೇ ಸೆಟ್ಟೇರಿರುವ “ಶಿವಪ್ಪ’ ಚಿತ್ರಗಳು 2021ಕ್ಕೆ ತೆರೆಕಾಣಲಿದೆ. ಈಗಾಗಲೇ “ಭಜರಂಗಿ-2′ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಬಿಡುಗಡೆಯಾಗಿರುವ ಟೀಸರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಶಿವರಾಜ್‌ ಕುಮಾರ್‌ ಅವರ ಗೆಟಪ್‌ ಕೂಡಾ ಭಿನ್ನವಾಗಿದೆ. ಈಗಾಗಲೇನಿರ್ದೇಶಕ ಹರ್ಷ ಜೊತೆ ಶಿವರಾಜ್‌ಕುಮಾರ್‌ “ಭಜರಂಗಿ’ ಹಾಗೂ “ವಜ್ರಕಾಯ’ ಚಿತ್ರಗಳನ್ನು ಮಾಡಿದ್ದಾರೆ. ಈಗ “ಭಜರಂಗಿ-2′ ಬರುತ್ತಿದ್ದು, ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ. ಇನ್ನು, ಈಗಾಗಲೇ ಚಿತ್ರೀಕರಣ ಆರಂಭಿಸಿರುವ “ಶಿವಪ್ಪ’ ಚಿತ್ರ ಕೂಡಾ ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾರ್ಚ್‌, ಏಪ್ರಿಲ್‌ ವೇಳೆಗೆ ತೆರೆಗೆ ಬರಲಿದೆ.

ಯುವರತ್ನ, ಜೇಮ್ಸ್‌ ಮೂಲಕ ಪುನೀತ್‌ ಎಂಟ್ರಿ :  ಪುನೀತ್‌ ರಾಜ್‌ ಕುಮಾರ್‌ ಅವರಎರಡು ಚಿತ್ರಗಳು ಹೊಸ ವರ್ಷಕ್ಕೆ ತೆರೆಕಾಣಲಿವೆ. ಈಗಾಗಲೇಚಿತ್ರೀಕರಣ ಮುಗಿಸಿರುವ “ಯುವರತ್ನ’ ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬಂದರೆ, ಸದ್ಯ ಚಿತ್ರೀಕರಣದಲ್ಲಿರುವ “ಜೇಮ್ಸ್‌’ಕೂಡಾ 2021 ಕ್ಕೆ ತೆರೆಗೆ ಬರಲಿದೆ. ಇದರ ಜೊತೆಗೆ ಪುನೀತ್‌ ನಿರ್ಮಾಣದ ಚಿತ್ರವೂ ಹೊಸ ವರ್ಷದಲ್ಲೇ ಬಿಡುಗಡೆಯಾಗಲಿದೆ.

ರಾಘಣ್ಣ ಕೈಯಲ್ಲಿ ರಾಜತಂತ್ರ, ಆಡಿಸಿದಾತ :  ಹೊಸ ವರ್ಷಕ್ಕೆ ರಾಘವೇಂದ್ರ ರಾಜ್‌ ಕುಮಾರ್‌ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಯಾಗಲಿವೆ. “ರಾಜತಂತ್ರ’ ಹಾಗೂ “ಆಡಿಸಿದಾತ’ ಚಿತ್ರಗಳಲ್ಲಿ ರಾಘವೇಂದ್ರರಾಜ್‌ಕುಮಾರ್‌ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಈ ಚಿತ್ರಗಳು ಕೂಡಾ ಹೊಸ ವರ್ಷಕ್ಕೆ ತೆರೆಗೆ ಬರಲಿವೆ. “ಅಮ್ಮನ ಮನೆ’ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿರುವ ರಾಘಣ್ಣ, ಈಗ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ.

ವಿನಯ್‌ ಕೈಯಲ್ಲಿ ಟೆನ್‌, ಗ್ರಾಮಾಯಣ :  ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ವಿನಯ್‌ ಈಗಾಗಲೇ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿಕೊಟ್ಟಿರೋದು ನಿಮಗೆ ಗೊತ್ತೇ ಇದೆ. ಹೊಸ ವರ್ಷದಲ್ಲಿ ವಿನಯ್‌ ನಟಿಸಿರುವ ಎರಡುಚಿತ್ರಗಳು ತೆರೆಗೆ ಬರಲಿವೆ. ಅದರಲ್ಲಿ “ಟೆನ್‌’ ಹಾಗೂ “ಗ್ರಾಮಾಯಣ’ ಚಿತ್ರಗಳು ಸೇರಿವೆ. ಈಗಾಗಲೇ ಈ ಎರಡೂ ಚಿತ್ರಗಳ ಚಿತ್ರೀಕರಣ ಸಂಪೂರ್ಣಗೊಂಡಿದೆ. ಪುಷ್ಕರ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರವನ್ನುಕರಮ್‌ ಚಾವ್ಲಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿನಯ್‌ ಬಾಕ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಯುವ ರಣಧೀರ ಕಂಠೀರವ ಮೂಲಕಯುವ ತೆರೆಗೆ :  ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು “ಯುವ ರಣಧೀರ ಕಂಠೀರವ’ ಚಿತ್ರದ ಮೂಲಕ. ಇತ್ತೀಚೆಗ ಚಿತ್ರದ ಟೈಟಲ್‌ ಲಾಂಚ್‌ ಆಗಿದ್ದು, ಪರಭಾಷಾ ಸ್ಟಾರ್ಸ್ ಕೂಡ ಟೀಸರ್‌ಗೆ ಮೆಚ್ಚುಗ ವ್ಯಕ್ತಪಡಿಸಿದ್ದಾರೆ. ಈ ಚಿತ ಕೂಡಾ ಹೊಸ ವರ್ಷದಲ್ಲಿ ತೆರೆಕಾಣಲಿದೆ.

ಶಿವ 143 ಮೇಲೆ ಧೀರೇನ್‌ ಕನಸು :  ರಾಜ್‌ಕುಟುಂಬದ ಮತ್ತೂಂದು ಧೀರೇನ್‌ ಕೂಡಾ ಹೊಸ ವರ್ಷದಲ್ಲಿ ತೆರೆಮೇಲೆ ರಾರಾಜಿಸಲಿದ್ದಾರೆ. ಡಾ.ರಾಜ್‌ ಪುತ್ರಿ ಪೂರ್ಣಿಮಾ ರಾಮ್‌ ಕುಮಾರ್‌ ಪುತ್ರನಾಗಿರುವ ಧೀರೇನ್‌ “ಶಿವ 143′ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದಾರೆ. ಅನಿಲ್‌ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಧೀರೇನ್‌ ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕಿಯಾಗಿ ಧನ್ಯಾ ಎಂಟ್ರಿ : ಡಾ.ರಾಜ್‌ಕುಟುಂಬದಿಂದ ಸಾಕಷ್ಟು ಮಂದಿ ಹೀರೋಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಈಗ ನಾಯಕಿಯ ಎಂಟ್ರಿಯಾಗುತ್ತಿದೆ. ಅವರು ಧನ್ಯಾ ರಾಮ್‌ ಕುಮಾರ್‌. “ನಿನ್ನ ಸನಿಹಕೆ’ ಎಂಬ ಚಿತ್ರದಲ್ಲಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕೂಡಾ ಹೊಸ ವರ್ಷದಲ್ಲಿ ತೆರೆಗೆ ಬರಲಿದೆ.

 

-ರವಿಪ್ರಕಾಶ್‌ ರೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷ- ಬೃಹತ್ ಮೊತ್ತ ವಂಚೆನೆ- ಇಬ್ಬರು ಟೆಕ್ಕಿಗಳ ಬಂಧನ

Untitled-1

ಕ್ರಿಕೆಟ್ :‌ ದೀಪಕ್‌ ಹೂಡಾ ಒಂದು ವರ್ಷ ಅಮಾನತು

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ನನ್ನ ಸೋಲಿನ ಹಿಂದೆ ಕುತಂತ್ರ ಇತ್ತು: ನಿಖಿಲ್ ‌ಕುಮಾರಸ್ವಾಮಿ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಫೋಟೋಶೂಟ್ ಮಾಡುತ್ತಿದ್ದಾಗ ಜೇನು ನೊಣ ದಾಳಿ ; ಮೂವರು ಮಲಪ್ರಭಾ ಕಾಲುವೆಯಲ್ಲಿ ನಾಪತ್ತೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

ಮೂಡುಬಿದಿರೆ ಮಾರೂರುನಲ್ಲಿ  ಸರಕಾರಿ ಮದ್ಯದಂಗಡಿ: ಕಾಂಗ್ರೆಸ್‌ ಪ್ರತಿಭಟನೆ

Deepika Padukone says Ranveer Singh keeps on asking why she manages home herself, even orders groceries

ಮನೆಗೆಲಸ ಮಾಡುವುದರಲ್ಲಿ ನನಗೆ ಹೆಮ್ಮೆ ಇದೆ: ದೀಪಿಕಾ ಪಡುಕೋಣೆ

beeper

ಒಂದೇ ಆ್ಯಪ್ ನೊಳಗೆ 13 ಅಪ್ಲಿಕೇಶನ್ ಗಳ ಬಳಕೆ: ಇಲ್ಲಿದೆ ವಿವರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

‘ಇನ್ಸ್‌ಪೆಕ್ಟರ್‌ ವಿಕ್ರಂ’ ರೆಡಿ ಟು ರಿಪೋರ್ಟಿಂಗ್‌ …

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಇಂದು ತೆರೆಗೆ ಐದು ಚಿತ್ರಗಳು

ಇಂದು ತೆರೆಗೆ ಐದು ಚಿತ್ರಗಳು

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

Untitled-1

ಹದಗೆಟ್ಟ ಸಬ್ಲಾಡಿ ರಸ್ತೆ ಅಭಿವೃದ್ಧಿಗೆ ಕೂಡಿ ಬಾರದ ಕಾಲ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ಗಣರಾಜ್ಯೋತ್ಸವ: ಉಡುಪಿಯಲ್ಲಿ ಸಚಿವ ಅಂಗಾರ ಧ್ವಜಾರೋಹಣ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

ತಿಂಗಳಿಗೆ 2 ಬಾರಿ ಸಪ್ತಪದಿ: ಸಚಿವ ಕೋಟ

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌  ಗಾರ್ಡ್‌ ಸದಾ ಸಿದ್ಧ’

“7,600 ಕಿ.ಮೀ. ತಟ ರಕ್ಷಣೆಗೆ ಕೋಸ್ಟ್‌ ಗಾರ್ಡ್‌ ಸದಾ ಸಿದ್ಧ’

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್‌ ಇರಾದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.