ರಿಯಲ್ ಸ್ಟಾರ್ ಜೊತೆ ಗುರು ದೇಶಪಾಂಡೆ : ಸೆಟ್ಟೇರಲಿದೆ ಮತ್ತೊಂದು ಬಿಗ್ ಮೂವಿ
Team Udayavani, Jun 1, 2021, 1:04 PM IST
ಬೆಂಗಳೂರು: ನಟ ಉಪೇಂದ್ರ ಅವರು ಸದ್ಯ ಪ್ರಜಾಕೀಯ ಹಾಗೂ ಸಿನಿಮಾ ರಂಗದಲ್ಲಿ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೋಷಿಯಲ್ ವರ್ಕ್ ನಲ್ಲಿ ಬ್ಯುಝಿಯಾಗಿರುವ ಬುದ್ಧಿವಂತನ ಹೊಸ ಚಿತ್ರದ ಸಮಾಚಾರವೊಂದು ಗಾಂಧಿ ನಗರದಲ್ಲಿ ಕೇಳಿ ಬಂದಿದೆ.
ಹೌದುಉ, ಉಪೇಂದ್ರ ಅವರ ಮುಂದಿನ ಕಮರ್ಷಿಯಲ್ ಸಿನಿಮಾವನ್ನು ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶಿಸಲಿದ್ದಾರಂತೆ. ಉಪ್ಪಿ ಜೊತೆ ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದ್ದು ಈ ಪ್ರಾಜೆಕ್ಟ್ ನಿರ್ದೇಶಕರ ಜಿ ಸಿನಿಮಾಸ್ ಬ್ಯಾನರ್ ಅಡಿ ತಯಾರಾಗಲಿದೆಯಂತೆ.
ಇನ್ನು ಉಪೇಂದ್ರ ಅವರ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಲಾಕ್ ಡೌನ್ ನಂತರ ನಟ ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಲಿದ್ದಾರೆ, ಇದರ ಜೊತೆಗೆ ಬುದ್ದಿವಂತ-2 ಹಾಗೂ ತ್ರಿಶೂಲಂ ಸಿನಿಮಾ ಕಡೆ ಗಮನ ಹರಿಸಲಿದ್ದಾರೆ. ಈ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.
ಇದೇ ವೇಳೆ ಉಪೇಂದ್ರ ಕೆ.ಮಾದೇಶ ನಿರ್ದೇಶನ ಲಗಾಮ್ ಸಿನಿಮಾದಲ್ಲಿ ಹಾಗೂ ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಈಗಾಗಲೇ ಉಪೇಂದ್ರ ತೆಲುಗಿನ ಘಣಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಮಂಜು ಮಾಂಡವ್ಯ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೆಲ್ಲದರ ನಡುವೆಯೇ ಗುರು ದೇಶಪಾಂಡೆ ಸಿನಿಮಾದಲ್ಲಿಯೂ ಉಪ್ಪಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ