ಹೊಸ ಕಲಾವಿದರ ಹುಡುಕಾಟದಲ್ಲಿ ಉಪ್ಪಿ
Team Udayavani, Feb 9, 2022, 11:50 AM IST
ನಟ ಉಪೇಂದ್ರ ಮತ್ತೂಮ್ಮೆ ವಿಭಿನ್ನ ಟೈಟಲ್ನೊಂದಿಗೆ ಸಿನಿಮಾನಿರ್ದೇಶನ ಮಾಡಲು ಅಣಿಯಾಗಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಕೆಲಸಗಳು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದ್ದು, ಮೊದಲ ಹಂತವಾಗಿಕಲಾವಿದರ ಆಯ್ಕೆಗೆ ಉಪೇಂದ್ರ ಮುಂದಾಗಿದ್ದಾರೆ.
ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಇರುವ 14 ರಿಂದ 60ವರ್ಷ ವಯಸ್ಸಿನ ನಟ, ನಟಿಯರ ತಲಾಶ್ನಲ್ಲಿ ಉಪ್ಪಿ ತೊಡಗಿದ್ದಾರೆ. ಆಸಕ್ತರು ತಾವು ನಟಿಸಿರುವ 2ನಿಮಿಷದ ವಿಡಿಯೋ ತುಣುಕನ್ನು ಚಿತ್ರ ತಂಡಕ್ಕೆ ಕಳುಹಿಸಿ ಅವಕಾಶಪಡೆಯಬಹುದು. ಇನ್ನು, ಉಪೇಂದ್ರ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ ಅವರ ಪ್ಯಾನ್ ಇಂಡಿಯಾ “ಕಬ್ಜ’ ಚಿತ್ರೀಕರಣ ನಡೆಯುತ್ತಿದೆ. ಅದರಾಚೆ “ಹೋಂ ಮಿನಿಸ್ಟರ್’ ಹಾಗೂ “ಬುದ್ಧಿವಂತ-2′ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆಯೇ ಇನ್ನೂ ಒಂದಷ್ಟು ಸಿನಿಮಾಗಳು ಉಪ್ಪಿ ಪಟ್ಟಿಯಲ್ಲಿವೆ.