ಉಪ್ಪಿ-ಚಂದ್ರು ಹೊಸ ಚಿತ್ರ

ಮತ್ತೆ ಒಂದಾದ ಹಿಟ್‌ ಜೋಡಿ- ಏಳು ಭಾಷೆಗಳಲ್ಲಿ ಚಿತ್ರ ಬಿಡುಗಡೆ

Team Udayavani, Sep 11, 2019, 3:05 AM IST

ಈ ವರ್ಷದ ಹಿಟ್‌ ಸಿನಿಮಾಗಳ ಸಾಲಿನಲ್ಲಿ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕೂಡಾ ಸೇರುತ್ತದೆ. ಆರ್‌.ಚಂದ್ರು, ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುವ ಮೂಲಕ ಹಿಟ್‌ಲಿಸ್ಟ್‌ ಸೇರಿತ್ತು. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾದ ಈ ಚಿತ್ರ ಬಿಝಿನೆಸ್‌ ವಿಷಯದಲ್ಲೂ ನಿರ್ಮಾಪಕರಿಗೆ ದೊಡ್ಡ ಲಾಭವನ್ನೇ ತಂದುಕೊಟ್ಟಿದೆ. ದೊಡ್ಡ ಗ್ಯಾಪ್‌ನ ಬಳಿಕ ಬಂದ ಉಪೇಂದ್ರ ಅವರಿಗೂ “ಐ ಲವ್‌ ಯು’ ಯಶಸ್ಸಿನ ಖುಷಿ ಕೊಟ್ಟಿದ್ದು ಸುಳ್ಳಲ್ಲ.

ಈಗ ಈ ಚಿತ್ರ ನೂರರ ಸಂಭ್ರಮದಲ್ಲಿದೆ. ಈಗ ಯಾಕೆ ಈ ವಿಚಾರ ಎಂದು ನೀವು ಕೇಳಬಹುದು. “ಐ ಲವ್‌ ಯು’ ನಂತಹ ಹಿಟ್‌ ಸಿನಿಮಾ ಕೊಟ್ಟ ಆರ್‌.ಚಂದ್ರು ಹಾಗೂ ಉಪೇಂದ್ರ ಈಗ ಮತ್ತೆ ಒಂದಾಗಿದ್ದಾರೆ. ಅದು ಹೊಸ ಸಿನಿಮಾಕ್ಕಾಗಿ. ಹೌದು, ಆರ್‌.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾವೊಂದು ಬರಲಿದೆ. ಈ ಮೂಲಕ ಹಿಟ್‌ ಜೋಡಿ ಮತ್ತೂಮ್ಮೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಚಂದ್ರು ಹಾಗೂ ಉಪೇಂದ್ರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾವಿದು.

ಈ ಹಿಂದೆ “ಬ್ರಹ್ಮ’ ಚಿತ್ರವನ್ನು ಜೊತೆಯಾಗಿ ಮಾಡಿದ್ದರು. “ಐ ಲವ್‌ ಯು’ ಚಿತ್ರದಲ್ಲಿ ಲವ್‌ಸ್ಟೋರಿ ಹೇಳಿದ್ದ ಚಂದ್ರು ಈ ಬಾರಿ ಉಪೇಂದ್ರ ಅವರನ್ನು ಹೊಸ ಅವತಾರದಲ್ಲಿ ತೋರಿಸಲುಯ ಮುಂದಾಗಿದ್ದಾರೆ. ಅದು ಆ್ಯಕ್ಷನ್‌ ಮೂಲಕ. ಚಂದ್ರು, ಉಪೇಂದ್ರ ಅವರನ್ನು ಗಮನದಲ್ಲಿಟ್ಟುಕೊಂಡು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ. ರೆಗ್ಯುಲರ್‌ ಆ್ಯಕ್ಷನ್‌ ಸಿನಿಮಾಗಳಿಗಿಂತ ಭಿನ್ನವಾಗಿರುವ ಕಥೆ ಇದಾಗಿದ್ದು, ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಈ ಹಿಂದೆ “ಐ ಲವ್‌ ಯು’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಷ್ಟೇ ಬಿಡುಗಡೆ ಮಾಡಿದ್ದ ಚಂದ್ರು, ಈ ಬಾರಿ ಬರೋಬ್ಬರಿ ಏಳು ಭಾಷೆಗಳಲ್ಲಿ ತಮ್ಮ ಹೊಸ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ ಚಂದ್ರು ಪ್ಯಾನ್‌ ಇಂಡಿಯಾದತ್ತ ಮುಖ ಮಾಡಿದ್ದಾರೆ. ಎಲ್ಲಾ ಓಕೆ, ಚಂದ್ರು ಹೊಸ ಚಿತ್ರ ಯಾವಾಗ ಲಾಂಚ್‌ ಎಂದು ಕೇಳಬಹುದು.

ಸೆ.14 ರಂದು “ಐ ಲವ್‌ ಯು’ ಚಿತ್ರದ ನೂರನೇ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ದಿನ ತಮ್ಮ ಹೊಸ ಚಿತ್ರದ ಟೈಟಲ್‌ ಲಾಂಚ್‌ ಮಾಡಲಿದ್ದಾರೆ ಚಂದ್ರು. ಈ ಚಿತ್ರವನ್ನೂ ಯಾರು ನಿರ್ಮಿಸುತ್ತಾರೆಂಬುದನ್ನು ಚಂದ್ರು ಗೌಪ್ಯವಾಗಿಯೇ ಇಟ್ಟಿದ್ದಾರೆ. ಚಿತ್ರದ ಇತರ ತಾರಾಬಳಗ ಅಂತಿಮವಾಬೇಕಿದೆ. ಚಿತ್ರಕ್ಕೆ ಪಕ್ಕಾ ಮಾಸ್‌ ಟೈಟಲ್‌ ಇಡಲಾಗಿದ್ದು, ಅದನ್ನು ಲಾಂಚ್‌ ದಿನವೇ ನೋಡಿ ಎಂದು ಸಸ್ಪೆನ್ಸ್‌ ಕಾಯ್ದಿರಿಸುತ್ತಾರೆ ಚಂದ್ರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ