ವೀರ್‌ 25ನೇ ಚಿತ್ರ ಮಾಸ್‌ ಲೀಡರ್‌


Team Udayavani, Aug 9, 2017, 10:50 AM IST

Veer-Samarath.jpg

ಒಬ್ಬ ಸಂಗೀತ ನಿರ್ದೇಶಕನ ಸಿನಿ ಪಯಣದಲ್ಲಿ 25 ನೇ ಚಿತ್ರ ಅನ್ನೋದು ಒಂದು ಹಂತದ ಸಾಧನೆಯೇ ಸರಿ. ಅದೀಗ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರ ಪಾಲಿಗೂ ಬಂದಿದೆ. ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌’ ಅವರ 25ನೇ ಚಿತ್ರ. ಈ ವಾರ ತೆರೆಕಾಣುತ್ತಿರುವ ಚಿತ್ರದ ಬಗ್ಗೆ ವೀರ್‌ ಸಮರ್ಥ್ಗೆ ಖುಷಿ ಮತ್ತು ಹೆಮ್ಮೆ ಇದೆ.

ಕಾರಣ, ಅವರ ಈ ಎಂಟು ವರ್ಷಗಳ ಜರ್ನಿಯಲ್ಲಿ ಇದೇ ಮೊದಲ ಸಲ ಸ್ಟಾರ್‌ನಟನ ಸಿನಿಮಾವೊಂದಕ್ಕೆ ಸಂಗೀತ ನೀಡಿದ್ದಾರೆ. ಅಷ್ಟೇ ಅಲ್ಲ, “ಮಾಸ್‌ ಲೀಡರ್‌’ನಲ್ಲಿ ಅವರ ಸಂಗೀತ ಹಾಡುಗಳು ಮೆಚ್ಚುಗೆಗೆ ಪಾತ್ರವಾಗಿರುವುದೂ ಅವರಿಗೆ ಖುಷಿಯ ಸಂಗತಿ.

ವೀರ್‌ ಸಮರ್ಥ್ ಸಂಗೀತ ನಿರ್ದೇಶನದ ಮೊದಲ ಚಿತ್ರ ಮುರಳಿ ಅಭಿನಯದ “ಶಿವಮಣಿ’. ಮೊದಲ ಪ್ರಯತ್ನದಲ್ಲೇ ಅವರು “ಮೊದ ಮೊದಲ ಮಾತು ಚೆಂದ …’ ಎಂಬ ಗುನುಗುವ ಹಾಡು ಕೊಟ್ಟರು. ಅದಾದ ಮೇಲೆ ಸಿಕ್ಕ ಒಂದೊಂದೇ ಚಿತ್ರಗಳಲ್ಲಿ ಒಳ್ಳೆಯ ಹಾಡು ಕೊಟ್ಟರೂ, ಸಿನಿಮಾಗಳು ಜನಮನ್ನಣೆ ಪಡೆಯಲಿಲ್ಲ.

“ಒಲವೇ ವಿಸ್ಮಯ’ದ “ಕೊಂಚ ರೇಷಿಮೆ, ಕೊಂಚ ಹುಣ್ಣಿಮೆ …’, “ಕಾರಂಜಿ’ಯ “ಕುಂಬಾರಕಿ …’, “ಈ ದಿನ ಹೊಸತಾಗಿದೆ …’, “ದ್ಯಾವ್ರೇ’ ಚಿತ್ರದ “ದ್ಯಾವ್ರೇ …’, “ಪರಪಂಚ’ದ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ …’ ಸೇರಿದಂತೆ ಹಲವು ಹಾಡುಗಳು ಹಿಟ್‌ ಆಗಿವೆಯಾದರೂ, ವೀರ್‌ ಸಮರ್ಥ್ ಆ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಅನ್ನೋದು ಸಿನಿಮಾ ಮಂದಿ ಹೊರತಾಗಿ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಆದರೆ, ಈಗ “ಮಾಸ್‌ ಲೀಡರ್‌’ ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಕೇಳುಗರ ಮನಗೆದ್ದಿವೆ ಎನ್ನುವ ವೀರ್‌ ಸಮರ್ಥ್, ಆಡಿಯೋ ಗುಣಮಟ್ಟದ ಜತೆಗೆ ಹಾಡಿನ ವೀಡಿಯೋ ಕೂಡ ಫ್ರೆಶ್‌ ಎನಿಸಿರುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುತ್ತಾರೆ ವೀರ್‌ಸಮರ್ಥ್. 

“ನನ್ನ ಪಾಲಿಗೆ “ಮಾಸ್‌ ಲೀಡರ್‌’ ದೊಡ್ಡ ಬಜೆಟ್‌ನ ಸ್ಟಾರ್‌ ಚಿತ್ರ. ಸದ್ಯಕ್ಕೆ ಈಗ “ರಾಜ ಲವ್ಸ್‌ ರಾಧೆ’, “ಜಾಲಿಬಾರು ಪೋಲಿ ಹುಡುಗರು’, “ಶಿವಗಾಮಿ’, “ಡಬ್ಬಲ್‌ ಇಂಜಿನ್‌’ ಸೇರಿದಂತೆ ಏಳು ಸಿನಿಮಾಗಳು ಕೈಯಲ್ಲಿವೆ. ಇಷ್ಟು ವರ್ಷಗಳ ಪಯಣ ಖುಷಿಕೊಟ್ಟಿದೆ. “ಮಾಸ್‌ ಲೀಡರ್‌’ ಆ ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ’ ಎನ್ನುತ್ತಾರೆ ವೀರ್‌ಸಮರ್ಥ್.

ಟಾಪ್ ನ್ಯೂಸ್

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

26post

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಣ್ಣ

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು – ಶಿವಣ್ಣ

ಮೂವರು ಸ್ಟಾರ್‌ಗಳ ಡ್ಯಾನ್ಸ್‌- ಟ್ರೆಂಡಿಂಗ್‌ ನಲ್ಲಿ ‘ಭಜರಂಗಿ-2’

ಮೂವರು ಸ್ಟಾರ್‌ಗಳ ಡ್ಯಾನ್ಸ್‌- ಟ್ರೆಂಡಿಂಗ್‌ ನಲ್ಲಿ ‘ಭಜರಂಗಿ-2’

ಸ್ನೇಹಿತರ ವಿರುದ್ಧ ವೇ ನಟಿ ಸಂಜನಾ ದೂರು

ಸ್ನೇಹಿತರ ವಿರುದ್ಧವೇ ನಟಿ ಸಂಜನಾ ದೂರು

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

27kannada

ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

arya-khan

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

ಖಾಸಗಿ ಬಸ್ಸು – ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕ ಸೇರಿ ಇಬ್ಬರಿಗೆ ಗಾಯ

syska bolt sw200 smartwatch

ಸಿಸ್ಕಾ ಬೋಲ್ಟ್ ಎಸ್‍ ಡಬ್ಲೂ 200 ವಾಚ್‍: ಅಗ್ಗದ ದರದಲ್ಲಿ ಅಧಿಕ ಪ್ರಯೋಜನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.