ವಿಜಯ ಪ್ರಕಾಶ್ ಕಂಠಸಿರಿಯಲ್ಲಿ “ಶತಾಯ ಗತಾಯ’
Team Udayavani, Mar 9, 2018, 2:52 PM IST
ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಶತಾಯ ಗತಾಯ’ ಚಿತ್ರಕ್ಕಾಗಿ ಸಂದೀಪ್ ಗೌಡ ಅವರು ಬರೆದಿರುವ “ಹುಡುಗರ ಎದೆ ಮೇಲೆ ಹುಡುಗೀರ ತಿರುಬೋಕಿ ಶೋಕಿ. ಪ್ರೀತಿಪ್ರೇಮ ಎಲ್ಲಾ ಓಳು ಬರೀ ಗೋಳು ಬಿಟ್ಟಾಕಿ…’ ಎಂಬ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಮುಂಬೈನ ತಮ್ಮದೇ ಸ್ಟುಡಿಯೊದಲ್ಲಿ ಹಾಡಿದ್ದಾರೆ.
ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ರಾಜಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಶಬರೀಶ್ ಅವರ ಛಾಯಾಗ್ರಹಣವಿದೆ.
ರಘುನಂದನ್ ಜೈನ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ದಿನೇಶ್ ಜೋಗಿ ಅವರ ನಿರ್ಮಾಣ ಮೇಲ್ವಿಚಾರಣೆ ಹಾಗೂ ಕಲಾ ನಿರ್ದೇಶನವಿದೆ. ರಘುರಾಮಪ್ಪ, ಸೋನುಗೌಡ, ಸಂದೀಪ್ ಗೌಡ, ಎಂ.ಎಸ್.ಉಮೇಶ್, ಗಡ್ಡಪ್ಪ, ಮಂಜುಳಾ ರೆಡ್ಡಿ, ಪ್ರದೀಪ್, ದಿನೇಶ್ ಜೋಗಿ, ಮಾ.ಮಧುಸೂಧನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ