ವೀರಪುತ್ರನ ಗೆಟಪ್ನಲ್ಲಿ ವಿಜಯ್ ಸೂರ್ಯ
ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರತವಾದ ಚಿತ್ರತಂಡ
Team Udayavani, Nov 17, 2020, 3:12 PM IST
“ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಟ ವಿಜಯ್ ಸೂರ್ಯ, ನಂತರ ನಿಧಾನವಾಗಿ ಹಿರಿತೆರೆಯತ್ತ ಮುಖ ಮಾಡಿದ ನಟ. “ಇಷ್ಟಕಾಮ್ಯ’, “ಸ’, “ಕದ್ದುಮುಚ್ಚಿ’ ಚಿತ್ರಗಳ ಮೂಲಕ ಸಿನಿಪ್ರಿಯರ ಮುಂದೆಕಾಣಿಸಿಕೊಂಡಿದ್ದ ವಿಜಯ್ ಸೂರ್ಯ, ಈಗ “ವೀರಪುತ್ರ’ ಚಿತ್ರದ ಮೂಲಕ ಮತ್ತೂಮ್ಮೆ ಬಿಗ್ ಸ್ಕ್ರೀನ್ ಮೇಲೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :ರಿಚ್ಚಿ ಫಸ್ಟ್ ಸಾಂಗ್ ರಿಲೀಸ್
ಹೌದು, ವಿಜಯ್ ಸೂರ್ಯ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ವೀರಪುತ್ರ’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದು, ಹಾಡುಗಳ ಸಂಯೋಜನೆ ಮತ್ತು ಮುದ್ರಣ ಕಾರ್ಯಗಳು ಭರದಿಂದ ಸಾಗಿದೆ.ಕಳೆದ ವರ್ಷ ಬಿಡುಗಡೆಯಾದ “ಸಪ್ಲಿಮೆಂಟರಿ’ ಚಿತ್ರದ ನಿರ್ಮಾಪಕ ಗುರು ಬಂಡಿ ಹಾಗೂ ನಿರ್ದೇಶಕ ಡಾ. ದೇವರಾಜ್ ಅವರ ಕಾಂಬಿನೇಶನ್ನಲ್ಲಿ “ವೀರಪುತ್ರ ‘ ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ “ವೀರಪುತ್ರ’ ಚಿತ್ರದ ಮೊದಲ ಪ್ರೋಮೊ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ಇದೇ ಡಿಸೆಂಬರ್ನಲ್ಲಿ “ವೀರಪುತ್ರ’ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು