ಪಿಆರ್‌ಕೆ ಬ್ಯಾನರ್‌ನಲ್ಲಿ ವಿನಯ್‌ರಾಜಕುಮಾರ್‌ ಸಿನಿಮಾ

ರವಿಬಸ್ರೂರು ನಿರ್ದೇಶನ, ನಿರ್ಮಾಣದಲ್ಲಿ ಎನ್‌ಎಸ್‌.ರಾಜಕುಮಾರ್‌ ಸಾಥ್‌

Team Udayavani, Apr 25, 2019, 3:09 AM IST

ನಟ ವಿನಯ್‌ ರಾಜಕುಮಾರ್‌ ಅವರು ಸದ್ಯಕ್ಕೆ “ಗ್ರಾಮಾಯಣ’ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಹೊಸದೊಂದು ಚಿತ್ರಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರವನ್ನು ರವಿಬಸ್ರೂರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಅಶ್ವಿ‌ನಿ ಪುನೀತ್‌ ಅವರ ಜೊತೆ ಎನ್‌.ಎಸ್‌.ರಾಜ್‌ಕುಮಾರ್‌ ಅವರು ಜೊತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯಕ್ಕೆ ಚಿತ್ರದ ಶೀರ್ಷಿಕೆ ಪಕ್ಕಾ ಆಗಿಲ್ಲ. ಮೇ.7 ರಂದು ಸಿನಿಮಾ ಕುರಿತು ಮಾಹಿತಿ ಹೊರಬೀಳಲಿದೆ. ಅಂದು ವಿನಯ್‌ರಾಜಕುಮಾರ್‌ ಅವರ ಹುಟ್ಟುಹಬ್ಬ. ಹಾಗಾಗಿ, ಅಂದೇ ಚಿತ್ರದ ಶೀರ್ಷಿಕೆ ಮತ್ತು ಫ‌ಸ್ಟ್‌ಲುಕ್‌ ಬಿಡುಗಡೆಯಾಗಲಿದೆ. “ಉಗ್ರಂ’ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ರವಿಬಸ್ರೂರು, “ಕೆಜಿಎಫ್’ ಚಿತ್ರದಲ್ಲೂ ಸಾಕಷ್ಟು ಸುದ್ದಿಯಾದರು.

ಇದಕ್ಕೂ ಮೊದಲು “ಕಟಕ’ ಚಿತ್ರ ನಿರ್ದೇಶಿಸಿದ್ದ ಅವರು, ಆ ನಡುವೆಯೂ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ನಡುವೆ ರವಿಬಸ್ರೂರು ಅವರು ವಿನಯ್‌ರಾಜಕುಮಾರ್‌ ಅವರಿಗೆ ಒನ್‌ಲೈನ್‌ ಕಥೆ ಹೇಳಿದ್ದಾರೆ. ಆ ಕಥೆ ವಿನಯ್‌ ಮತ್ತು ಅವರ ಕುಟುಂಬದವರಿಗೂ ಇಷ್ಟವಾಗಿದೆ.

ಅದೊಂದು ಮಾಸ್‌ ಎಂಟರ್‌ಟೈನರ್‌ ಸಿನಿಮಾ ಆಗಿದ್ದು, “ಗ್ರಾಮಾಯಣ’ ಚಿತ್ರದ ಬಳಿಕ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯಕ್ಕೆ “ಕೆಜಿಎಫ್ ಚಾಪ್ಟರ್‌ 2′ ಚಿತ್ರದ ಚಟುವಟಕೆಯಲ್ಲಿ ಬಿಜಿಯಾಗಿರುವ ರವಿಬಸ್ರೂರು, ವಿನಯ್‌ರಾಜಕುಮಾರ್‌ ಅವರಿಗೆ ಹೇಳಿರುವ ಕಥೆ ಮೇಲೆ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇರುವ ಕೆಲಸಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ,

ಸ್ಕ್ರಿಪ್ಟ್ ಕೆಲಸಕ್ಕೆ ಕೈ ಹಾಕುವ ನಿರ್ಧಾರ ಮಾಡಿದ್ದಾರೆ ರವಿಬಸ್ರೂರು. ಈ ಹಿಂದೆ ರವಿಬಸ್ರೂರು ನಿರ್ದೇಶಿಸಿದ್ದ “ಕಟಕ’ ಚಿತ್ರಕ್ಕೂ ರಾಜ್‌ಕುಮಾರ್‌ ಅವರೇ ಹಣ ಹಾಕಿದ್ದರು. ಈಗ ವಿನಯ್‌ರಾಜಕುಮಾರ್‌ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ವಿನಯ್‌ ಅಭಿನಯಿಸಲಿರುವ ಹೊಸ ಚಿತ್ರ ಈ ವರ್ಷ ಶುರುವಾಗಿ, 2020 ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

  • ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌,...

  • ಇತ್ತೀಚೆಗಷ್ಟೇ "99' ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ 'ಗಿಮಿಕ್‌' ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ....

  • ಪ್ರಿಯಾಂಕ ಅಭಿನಯದ "ದೇವಕಿ' ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. "ದೇವಕಿ' ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ....

  • "ಆಗಸ್ಟ್‌ 9'... ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ....

ಹೊಸ ಸೇರ್ಪಡೆ