ವಿನೋದ್ ಅಕೌಂಟ್ಗೆ ಹೊಸ ಸಿನಿಮಾ
Team Udayavani, Dec 3, 2018, 11:14 AM IST
ವಿನೋದ್ಪ್ರಭಾಕರ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಚಿತ್ರಕ್ಕೆ ಉದಯ ಪ್ರಕಾಶ್ ನಿರ್ದೇಶಕರು. ಇದು ಬಿಟ್ಟರೆ, ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ. ನಾಯಕಿ ಯಾರು, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇದ್ದಾರೆ. ಚಿತ್ರೀಕರಣ ಯಾವಾಗ, ಕಥೆಯ ಗುಟ್ಟೇನು, ಎಲ್ಲೆಲ್ಲಿ ಚಿತ್ರೀಕರಣ ನಡೆಯುತ್ತೆ. ಚಿತ್ರ ಶುರುವಾಗುವುದು ಯಾವಾಗ? ಇದ್ಯಾವುದಕ್ಕೂ ಈಗ ಮಾಹಿತಿ ಇಲ್ಲ.
ಈ ಚಿತ್ರದಲ್ಲಿ ಸಂಕಲನಕಾರ ಜೋ.ನಿ.ಹರ್ಷ, ಛಾಯಾಗ್ರಾಹಕ ಜೈ ಆನಂದ್ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಆರ್.ವಿ.ಸುನೀತ, ವಿ.ಸೂರಜ್, ತ್ರಿಶೂಲ್ ಇತರರು ಚಿತ್ರದ ಹಿಂದೆ ಇದ್ದಾರೆ. ಸದ್ಯ ವಿನೋದ್ ಪ್ರಭಾಕರ್ ಅವರ “ಫೈಟರ್’, “ಶಾಡೋ’ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೂಂದು ಹೊಸ ಸಿನಿಮಾ ಅವರ ಅಕೌಂಟ್ಗೆ ಸೇರಿಕೊಂಡಿದೆ.
ಅಂದಹಾಗೆ, ಇಂದು ವಿನೋದ್ ಅವರ ಹುಟ್ಟುಹಬ್ಬ. ಆದರೆ, ವಿನೋದ್ ಪ್ರಭಾಕರ್ ಮಾತ್ರ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ, ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರ ಅಗಲಿಕೆ. ಈ ಕಾರಣದಿಂದಾಗಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.
ಈ ಕುರಿತು, ವಿನೋದ್ಪ್ರಭಾಕರ್ ಅವರು ಭಾನುವಾರ ತಮ್ಮ ಫೇಸ್ಬುಕ್ ಮೂಲಕ ಅಭಿಮಾನಿಗಳಿಗೆ ವಿಡಿಯೋ ಸಂದೇಶ ರವಾನಿಸಿದ್ದು, ತನಗೆ ಹುಟ್ಟುಹಬ್ಬ ಆಚರಿಸುವ ಮನಸ್ಥಿತಿಯೂ ಇಲ್ಲ. ಹಾಗಾಗಿ, ಯಾರೂ ಮನೆಯ ಬಳಿ ಕೇಕ್, ಹಾರ, ಪಟಾಕಿಯೊಂದಿಗೆ ಬರಬಾರದು. ಪ್ರೀತಿಯಿಂದ ಬಂದು ಶುಭಾಶಯ ಹೇಳಿದರೆ ಸಾಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ