ವಿಷ್ಣು ಸರ್ಕಲ್‌ನಲ್ಲಿ ಜಗ್ಗೇಶ್‌ ಪುತ್ರ


Team Udayavani, Sep 4, 2017, 5:51 PM IST

Vishnu.jpg

ಇತ್ತೀಚೆಗಷ್ಟೇ ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌’ ಚಿತ್ರದಲ್ಲಿ ನಟಿಸಿದ್ದ ಜಗ್ಗೇಶ್‌ ಪುತ್ರ ಗುರುರಾಜ್‌ ಜಗ್ಗೇಶ್‌, ಈಗ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ವಿಷ್ಣು ಸರ್ಕಲ್‌’ ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ’ ಎಂಬ ಅಡಿಬರಹವೂ ಇದೆ.

ಇನ್ನು, ಈ ಚಿತ್ರಕ್ಕೆ ಲಕ್ಷ್ಮೀ ದಿನೇಶ್‌ ನಿರ್ದೇಶಕರು. ಈ ಹಿಂದೆ ನಿರ್ದೇಶಕ ಲಕ್ಷ್ಮೀ ದಿನೇಶ್‌, “ಹಾಫ್ ಮೆಂಟಲ್‌’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ಹೊಸ ಚಿತ್ರವನ್ನು ಆರ್‌.ಬಿ. ನಿರ್ಮಾಣ ಮಾಡುತ್ತಿದ್ದಾರೆ.

ಅಂದಹಾಗೆ, ಇಲ್ಲಿ ಶೀರ್ಷಿಕೆ ಮತ್ತು ಅದರ ಅಡಿಬರಹ ನೋಡಿದ ಮೇಲೆ ಇದೊಂದು ವಿಷ್ಣುವರ್ಧನ್‌ ಅಭಿಮಾನಿ ಕುರಿತ ಸಿನಿಮಾನಾ? ಎಂಬ ಪ್ರಶ್ನೆ ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ, ಇಲ್ಲಿ ಅವರ ಕುರಿತ ಶೀರ್ಷಿಕೆ ಇದೆ ಅಂದಮೇಲೆ, ಅದಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತೆ ಅಂದುಕೊಂಡರೂ, ಅದನ್ನು ಪಕ್ಕಾ ಮಾಡಿಕೊಳ್ಳಲು ಸಿನಿಮಾ ಬರೋವರೆಗೂ ಕಾಯಲೇಬೇಕು. ಗುರುರಾಜ್‌ ಜಗ್ಗೇಶ್‌ ಈ ಸಿನಿಮಾ ಮೂಲಕ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಯೂತ್ಸ್ ಕುರಿತಾದ ಕಥೆಯಾಗಿದ್ದು, ಈಗಿನ ಟ್ರೆಂಡ್‌ಗೆ ತಕ್ಕ ಸಿನಿಮಾ ಮಾಡಲು ಹೊರಟಿದೆ ಲಕ್ಷ್ಮೀ ದಿನೇಶ್‌ ತಂಡ.

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ “ವಿಷ್ಣು ಸರ್ಕಲ್‌’ ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಆದರೆ, ಗುರುರಾಜ್‌ ಅವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ ಹಿನ್ನೆಲೆಯಲ್ಲಿ, ಗುರುರಾಜ್‌ ಜಗ್ಗೇಶ್‌ ಅವರು, ವಿಶ್ರಾಂತಿ ಪಡೆದ ಬಳಿಕ ಸಿನಿಮಾಗೆ ಚಾಲನೆ ಕೊಡೋಣ ಎಂದು ಹೇಳಿದ್ದರು. ಹಾಗಾಗಿ, ನಿರ್ದೇಶಕರು, ಗುರುರಾಜ್‌ ಜಗ್ಗೇಶ್‌ ಅವರು, ಸಂಪೂರ್ಣ ಚೇತರಿಸಿಕೊಂಡ ನಂತರವೇ ಚಿತ್ರಕ್ಕೆ ಮುಹೂರ್ತ ನಡೆಸಿ, ಚಿತ್ರೀಕರಿಸುವ ನಿರ್ಧಾರ ಮಾಡಿದ್ದರು. ಅದರಂತೆ, ಈಗ ಚಿತ್ರಕ್ಕೆ ಚಾಲನೆ ಸಿಗುತ್ತಿದೆ. ಇನ್ನು, ಪಿ.ಎಲ್‌.ರವೀ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಶ್ರೀವತ್ಸ ಅವರು ಸಂಗೀತ ನೀಡುತ್ತಿದ್ದಾರೆ.

ಉಳಿದಂತೆ ಹೈಟ್‌ ಮಂಜು ಚಿತ್ರಕ್ಕೆ ನೃತ್ಯ ನಿರ್ದೇಶಕರು. ಮಾಸ್‌ಮಾದ ಅವರು ಇಲ್ಲಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ನಾಗೇಂದ್ರಪ್ರಸಾದ್‌ ಮತ್ತಿತರರು ಹಾಡುಗಳನ್ನು ಬರೆಯಲಿದ್ದಾರೆ. ಸೆ.4 ರಂದು (ಇಂದು) ಮುಹೂರ್ತ ನೆರವೇರಲಿದೆ.

ಟಾಪ್ ನ್ಯೂಸ್

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರು

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

fghjjjjjjjjjjjjjjjjjjjjjjjj

ಒಮಿಕ್ರಾನ್‌ : ಭಾರತೀಯರು ಸುರಕ್ಷಿತ, ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ.ಜಮೀಲ್‌

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.