ವಿಷ್ಣು ಪ್ರಿಯ ಫಸ್ಟ್ ಲುಕ್ ರಿಲೀಸ್
Team Udayavani, Apr 7, 2020, 12:16 PM IST
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಪಡ್ಡೆಹುಲಿ ಸಿನಿಮಾ ಮೂಲಕ ಲಾಂಚ್ ಆಗಿರೋದು ನಿಮಗೆ ಗೊತ್ತೇ ಇದೆ. ಈಗ ಶ್ರೇಯಸ್ ಎರಡನೇ ವಿಷ್ಣು ಪ್ರಿಯ ಮಾಡಿದ್ದು, ಚಿತ್ರೀಕರಣ ಕೂಡಾ ಮುಗಿದಿದೆ.
ಭಾನುವಾರ ನಟ ಶ್ರೇಯಸ್ ಅವರ ಹುಟ್ಟುಹಬ್ಬ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದ್ಧೂರಿ ಕಾರ್ಯಕ್ರಮ ಮಾಡಿ, ಆ ಮೂಲಕ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿತ್ತು. ಆದರೆ, ಕೋವಿಡ್ 19 ಎಫೆಕ್ಟ್ನಿಂದಾಗಿ ಕನ್ನಡ ಚಿತ್ರರಂಗ ಸ್ತಬ್ಧವಾಗಿದೆ. ಹಾಗಾಗಿ, ಚಿತ್ರತಂಡ ಸರಳವಾಗಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ವಿಷ್ಣು ಪ್ರಿಯ ಚಿತ್ರ ಪಕ್ಕಾ ಸ್ವಮೇಕ್ ಸಿನಿಮಾವಾಗಿದ್ದು, ನೈಜ ಘಟನೆಯನ್ನು ಆದರಿಸಿದೆ. ಚಿತ್ರದ ಬಹುಭಾಗ ಕಾಡಿನಲ್ಲಿ ಚಿತ್ರೀಕರಣವಾಗಿದೆ.
ವಿ.ಕೆ.ಪ್ರಕಾಶ್ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ಶ್ರೇಯಸ್, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಮಾಡಿರುವ ಸಿನಿಮಾ. ಇವತ್ತು ಆ ತರಹದ ಸಿನಿಮಾಗಳನ್ನೇ ಜನ ಹೆಚ್ಚು ಇಷ್ಟಪಡತ್ತಿದ್ದಾರೆ. ವಿಷ್ಣು ಪ್ರಿಯಾ ಕೂಡಾ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ. ಹುಟ್ಟುಹಬ್ಬ ಆಚರಣೆ ಬದಲು ಆ ಹಣವನ್ನ ಬಡವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ