ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್


Team Udayavani, Oct 20, 2021, 12:50 PM IST

ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್

ಕೋವಿಡ್‌ ಎರಡನೇ ಆತಂಕ ದೂರವಾಗುತ್ತಿದ್ದಂತೆ, ಸ್ಯಾಂಡಲ್‌ವುಡ್‌ನ‌ಲ್ಲಿ ಸಿನಿಮಾ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು ಹೊಸ ಹುರುಪಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ಸೆಟ್ಟೇರುತ್ತಿವೆ. ನಟ, ನಟಿಯರು ಕೂಡ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಶೂಟಿಂಗ್‌ನತ್ತ ಮುಖ ಮಾಡುತ್ತಿದ್ದಾರೆ. ಅಂತೆಯೇ ನಟಿ ಸೋನು ಗೌಡ ಕೂಡ ಈಗ ಸದ್ದಿಲ್ಲದೆ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ, ಆ ಸಿನಿಮಾದ ಹೆಸರು “ವೆಡ್ಡಿಂಗ್‌ ಗಿಫ್ಟ್’. ಇಲ್ಲಿಯವರೆಗೆ ಹೆಚ್ಚಾಗಿ ಹೋಮ್ಲಿ ಲುಕ್‌ನಲ್ಲಿ, ಸಾದಾಸೀದಾ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸೋನು ಗೌಡ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಕಾರ್ಪೋರೆಟ್‌ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ತಮ್ಮ ಹೊಸ ಚಿತ್ರ ಮತ್ತು ಪಾತ್ರದ ಬಗ್ಗೆ ಮಾತನಾಡುವ ಸೋನು ಗೌಡ, “”ಇವತ್ತಿನ ಜನರೇಶನ್‌ನ ಟ್ರೆಂಡ್‌ ಸ್ಟೋರಿ ಈ ಸಿನಿಮಾದಲ್ಲಿದೆ. ನಾನು ಇಲ್ಲಿಯವರೆಗೆ ಮಾಡಿರುವ ಕ್ಯಾರೆಕ್ಟರ್‌ಗಳಿಗಿಂತ ಹೊಸಥರದ ಕ್ಯಾರೆಕ್ಟರ್‌ “ವೆಡ್ಡಿಂಗ್‌ ಗಿಫ್ಟ್’ನಲ್ಲಿದೆ.

ಇದರಲ್ಲಿ ನಾನು ಔಟ್‌ ಆ್ಯಂಡ್‌ ಔಟ್‌ ಕಾರ್ಪೋರೆಟ್‌ ಲೈಫ್ ಸ್ಟೈಲ್‌ ನಡೆಸುವ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಎಲ್ಲವನ್ನೂ ಕಾರ್ಪೋರೆಟ್‌ ದೃಷ್ಟಿಯಲ್ಲೇ ನೋಡುವ ಹುಡುಗಿಯೊಬ್ಬಳ ಲೈಫ್ನಲ್ಲಿ ಮದುವೆಯ ನಂತರ ಏನೆಲ್ಲ ಬದಲಾವಣೆ ಆಗುತ್ತದೆ ಅನ್ನೋದರ ಸುತ್ತ ಸಿನಿಮಾ ನಡೆಯುತ್ತದೆ. ಕಾರ್ಪೋರೆಟ್‌ ಲೈಫ್ ಬಯಸುವ, ಇಂಡಿಪೆಂಡೆಂಟ್‌ ಆಗಿರುವಂಥ, ನಾನೇ ಎಲ್ಲವೂ ಎನ್ನುವಂಥ “ಇಗೋ’ ಇರುವಂಥ ಕ್ಯಾರೆಕ್ಟರ್‌ ನನ್ನದು.

ಇದನ್ನೂ ಓದಿ;- ಚಿಂತಾಮಣಿ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಭೇಟಿ

ಸ್ಕ್ರಿಪ್ಟ್ನಲ್ಲಿ ನನ್ನ ಪಾತ್ರ ಇಷ್ಟವಾಯ್ತು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಸೋನು ಗೌಡ. “ಸಿನಿಮಾಕ್ಕಾಗಿ ಈಗಾಗಲೇ ಒಂದಷ್ಟು ವರ್ಕ್‌ಶಾಪ್‌, ರಿಹರ್ಸಲ್‌ ಮಾಡಿದ್ದೇವೆ. ಸ್ಕ್ರೀನ್‌ ಮೇಲೆ ನನ್ನ ಕ್ಯಾರೆಕ್ಟರ್‌ ಹೊಸಥರದಲ್ಲಿ ಬರುತ್ತದೆ. ಆಡಿಯನ್ಸ್‌ಗೂ ಈ ಸಿನಿಮಾ ಇಷ್ಟವಾಗುತ್ತದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಸೋನು.

ಇನ್ನು “ವೆಡ್ಡಿಂಗ್‌ ಗಿಫ್ಟ್’ ಚಿತ್ರದಲ್ಲಿ ಸೋನು ಗೌಡ ಅವರಿಗೆ ನವ ನಾಯಕ ನಿಶಾನ್‌ ನಾಣಯ್ಯ ಜೋಡಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಿಂದಿ, ತಮಿಳು, ಮಲೆಯಾಂ, ಬೆಂಗಾಳಿ ಸೇರಿದಂತೆ ಸುಮಾರು 25ಕ್ಕೂ ಸಿನಿಮಾಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿರುವ ನಿಶಾನ್‌ ನಾಣಯ್ಯ “ವೆಡ್ಡಿಂಗ್‌ ಗಿಫ್ಟ್’ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‌ ವುಡ್‌ನ‌ಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. “ವಿಕ್ರಂ ಪ್ರಭು μಲಂಸ್‌’ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ನವ ನಿರ್ದೇಶಕ ವಿಕ್ರಂ ಪ್ರಭು “ವೆಡ್ಡಿಂಗ್‌ ಗಿಫ್ಟ್’ಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕ ಜಿಗಿತ;17,000 ಅಂಕ ದಾಟಿದ ನಿಫ್ಟಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

4rambhat

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jghjkgjkhhgf

ಮದಗಜನತ್ತ ಫ್ಯಾಮಿಲಿ ಆಡಿಯನ್ಸ್‌

1-aaaaAaS

ಕಣ್ಣುಗಳಲ್ಲಿನ ಮಿಂಚು: ಅಪ್ಪು ‘ಗಂಧದಗುಡಿ’ ಟೀಸರ್ ಬಗ್ಗೆ ಯಶ್

ಡಿಸೆಂಬರ್ 10ರಂದು ತೆರೆಗೆ;ಗಾಂಧಿನಗರದ ಗಮನ ಸೆಳೆಯಲಿದೆ ‘ಕ್ಯಾನ್ಸೀಲಿಯಂ’ ಚಿತ್ರ…

ಡಿಸೆಂಬರ್ 10ರಂದು ತೆರೆಗೆ;ಗಾಂಧಿನಗರದ ಗಮನ ಸೆಳೆಯಲಿದೆ ‘ಕ್ಯಾನ್ಸೀಲಿಯಂ’ ಚಿತ್ರ…

puneetಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

ಡಿಸೆಂಬರ್‌ 31ರ ಮೇಲೆ ಸಿನಿಮಂದಿ ಕಣ್ಣು: ಒಂದೇ ದಿನ 4 ಸಿನಿಮಾ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

ಹೊಸ ಸೇರ್ಪಡೆ

vaccination pending

ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!

10false

ಸುಳ್ಳು ಆಶ್ವಾಸನೆಗೆ ಬಲಿಯಾಗಬೇಡಿ: ಅಜಯಸಿಂಗ್

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.