“ಪುಟ 109’ರಲ್ಲಿ ಏನಿದೆ ಗೊತ್ತಾ?: Watch

Team Udayavani, Sep 11, 2018, 4:05 PM IST

ನಿರ್ದೇಶಕ ದಯಾಳ್‌ ಪದ್ಮನಾಭ್‌ “ಕರಾಳ ರಾತ್ರಿ’ ಚಿತ್ರದ ನಂತರ ಆ್ಯಕ್ಷನ್ ಕಟ್‌ ಹೇಳಿರೋ “ಪುಟ 109′ ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಸಿನಿಮಾದ ಟ್ರೈಲರ್ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಅಲ್ಲದೇ ನಿಧಾನವಾಗಿ ನೋಡುಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಚಿತ್ರದ ಹೆಸರೇ ಹೇಳೋ ಹಾಗೆ ಫೋರೆನ್ಸಿಕ್ ಅನ್ನೋ ಪುಸ್ತಕದಲ್ಲಿ ಕಾಣೆಯಾದ 109ನೇ ಪುಟದ ಸುತ್ತ ಕಥೆ ತಿರುಗುತ್ತೆ.

ನಿಗೂಢ ಕೊಲೆಯೊಂದರ ಹಿಂದೆ ಬಿದ್ದ ಸ್ಮಾರ್ಟ್ ಅಂಡ್ ಇಂಟೆಲಿಜೆಂಟ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (ಜೆ.ಕೆ) ಕಾಣಿಸಿಕೊಂಡರೆ, ನೆಗೆಟಿವ್ ಶೇಡ್ ಇರೋ ಬರಹಗಾರನ ಪಾತ್ರದಲ್ಲಿ ನವೀನ್‌ ಕೃಷ್ಣ ಕ್ಯೂರಿಯಾಸಿಟಿ ಹೆಚ್ಚಿಸುತ್ತಾರೆ. ನವೀನ್ ಕೃಷ್ಣ ಪತ್ನಿಯಾಗಿ ವೈಷ್ಣವಿ ಚಂದ್ರನ್ ನಟಿಸಿದ್ದಾರೆ. ಇನ್ನು ಈ ಚಿತ್ರ ಒಂದು ಕ್ರೈಮ್‌ ಥ್ರಿಲ್ಲರ್‌ ಕಥಹಂದಾರವನ್ನೊಳಗೊಂಡಿದ್ದು, ಅರವಿಂದ್‌ ಅವರ ಕಥೆ, ದಯಾಳ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ನಿರ್ಮಾಣವೂ ಇವರದೇ. ಇವರ ಜೊತೆಗೆ ಅವಿನಾಶ್‌ ಯು ಶೆಟ್ಟಿ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. “ಪುಟ 109′ ಚಿತ್ರದಲ್ಲಿ ವೈಷ್ಣವಿ, ಶ್ರೀ, ವಿಕ್ಟರಿ ವಾಸು ಇತರರು ನಟಿಸಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಹಣ, ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜನೆ, ನವೀನ್ ಕೃಷ್ಣ ನಟನೆ ಜೊತೆಗೆ ಸಿನಿಮಾಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ