ಶೀಘ್ರದಲ್ಲೇ ರೊಮ್ಯಾಂಟಿಕ್ ಥ್ರಿಲ್ಲರ್ ‘ವಿಂಡೋ ಸೀಟ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್
Team Udayavani, Jun 23, 2020, 5:22 PM IST
ಶೀತಲ್ ಶೆಟ್ಟಿ ಈಗಾಗಲೇ ನಿರ್ದೇಶನದಲ್ಲಿ ಗೆದ್ದಿದ್ದಾರೆ.
ಇದೀಗ ಅವರ ಕೈಚಳಕದಲ್ಲೇ ‘ವಿಂಡೋಸೀಟ್’ ಸಿನಿಮಾ ಮೂಡಿಬರುತ್ತಿದ್ದು, ಅಭಿಮಾನಿಗಳಲ್ಲಿ ಒಂಥರ ಥ್ರಿಲ್ ಮೂಡಿಸಿದೆ.
ಸಿನಿಮಾದ ಟೈಟಲ್ ಇಷ್ಟೊಂದು ವಿಭಿನ್ನವಾಗಿರುವಾಗ ಇನ್ನು ಸಿನಿಮಾ ಹೇಗಿರಬೇಡ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಆ ಕುತೂಹಲ ತಣಿಸಲು ಸಿನಿಮಾ ತಂಡ ರೆಡಿಯಾಗಿದ್ದು, ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ.
ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ನಿರೂಪ್ ಭಂಡಾರಿ ಸಿನಿಮಾದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯರ್ ನಾಯಕಿಯಾಗಿದ್ದಾರೆ. ಸಿನಿಮಾ ಹೆಸರೇ ವಿಭಿನ್ನವಾಗಿದೆ, ಜೊತೆಗೆ ಇಬ್ಬರು ನಾಯಕಿಯರು, ಹೀಗಾಗಿ ‘ವಿಂಡೋಸೀಟ್’ ಹಿಡಿಯುವವರು ಯಾರು ಎಂಬ ಪ್ರಶ್ನೆ ಅಭಿಮಾನಿಗಳದ್ದು. ಇಂತ ಪ್ರಶ್ನೆಗಳಿಗೂ ಹಂತ ಹಂತವಾಗಿ ಸಿನಿಮಾ ಅಪ್ ಡೇಟ್ ಕೊಡುವ ಮೂಲಕ ಶೀತಲ್ ಶೆಟ್ಟಿ ಉತ್ತರಿಸಲಿದ್ದಾರೆ.
ಸದ್ಯ ಫಸ್ಟ್ ಲುಕ್ ರಿಲೀಸ್ Coming soon ಅಂತ ಒಂದು ಪೋಸ್ಟರ್ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಿಸುವಂತೆ ಮಾಡಿದೆ. ಹೆಸರಿಗೆ ತಕ್ಕಂತೆ ಟ್ರೈನ್ ಒಂದು ವಿಂಡೋಸೀಟ್ ಫೋಟೋ ಜೊತೆಗೆ ತನಿಖೆಯ ವಿಚಾರಗಳು ಕಣ್ಣ ಮುಂದೆ ಬರುತ್ತಿವೆ. ಒಟ್ಟಾರೆ ಸಿನಿಮಾದ ಮತ್ತಷ್ಟು ಅಪ್ಡೇಟ್ ನಿಂದಾಗಿ ಸಿನಿಮಾ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಶೀತಲ್ ಶೆಟ್ಟಿ ನಿರ್ದೇಶನದ ಈ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಯೋಗರಾಜ್ ಭಟ್, ಕವಿ ರಾಜ್ ಸಾಹಿತ್ಯಕ್ಕೆ ಅದ್ಬುತ ಸಂಗೀತ ನೀಡಲು ಅರ್ಜುನ್ ಜನ್ಯಾ ರೆಡಿಯಾಗಿದ್ದಾರೆ.