ಲಕ್ಷ್ಮೀಸ್ ಎನ್ಟಿಆರ್ನಲ್ಲಿ ಯಜ್ಞಾ ಶೆಟ್ಟಿ ಲಕ್ಷ್ಮೀ ಪಾರ್ವತಿ
Team Udayavani, Jan 13, 2019, 6:27 AM IST
ತೆಲುಗಿನಲ್ಲಿ ಇತ್ತೀಚೆಗಷ್ಟೇ ಎನ್ಟಿಆರ್ ಜೀವನಾಧಾರಿತ ಚಿತ್ರ “ಕಥಾನಾಯಕುಡು’ ಬಿಡುಗಡೆಯಾಗಿ ತೆರೆಮೇಲೆ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಎನ್ಟಿಆರ್ ಪಾತಕ್ಕೆ ಪುತ್ರ ನಂದಮುರಿ ಬಾಲಕೃಷ್ಣ ಜೀವ ತುಂಬಿದ್ದು, ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ.
ಇದರ ನಡುವೆ ಎನ್ಟಿಆರ್ ಜೀವನದ ಮತ್ತೂಂದು ಆಯಾಮದ ಕಥೆ ಚಿತ್ರವಾಗುವ ಸುದ್ದಿ ಈಗ ಖಚಿತವಾಗಿದೆ. ಈ ಚಿತ್ರಕ್ಕೆ “ಲಕ್ಷ್ಮೀಸ್ ಎನ್ಟಿಆರ್’ ಎಂದು ಹೆಸರಿಡಲಾಗಿದ್ದು, ಎನ್ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ದೃಷ್ಟಿಯಲ್ಲಿ ಎನ್ಟಿಆರ್ ಜೀವನವನ್ನು ಈ ಚಿತ್ರದಲ್ಲಿ ತೆರೆಮೇಲೆ ತರಲಾಗುತ್ತಿದೆ.
ಈ ಚಿತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಎನ್ಟಿಆರ್ ಅವರ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಪಾತ್ರದಲ್ಲಿ ಕನ್ನಡದ ನಟಿ ಯಜ್ಞಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರಾಮ್ ಗೋಪಾಲ್ ವರ್ಮಾ ಆರ್ಜಿವಿ ನಿರ್ದೇಶನದ “ಲಕ್ಷ್ಮೀಸ್ ಎನ್ಟಿಆರ್’ಚಿತ್ರಕ್ಕೆ ಯಜ್ಞಾ ಶೆಟ್ಟಿ ಆಯ್ಕೆಯಾಗಿದ್ದು, ಸದ್ಯ ಚಿತ್ರದ ಪ್ರೀ-ಪೊಡಕ್ಷನ್ ನಡೆಯುತ್ತಿದ್ದು, ಮುಂಬರುವ ಫೆಬ್ರವರಿಗೆ ಶೂಟಿಂಗ್ ಆರಂಭವಾಗಲಿದೆ.
ಅಂದಹಾಗೆ, ಯಜ್ಞಾ ಶೆಟ್ಟಿ ಈ ಚಿತ್ರದಲ್ಲಿ 70 ವರ್ಷದ ಪಾರ್ವತಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಕನ್ನಡದಲ್ಲಿ ಗ್ಲಾಮರ್ ಮತ್ತು ಡಿ-ಗ್ಲಾಮರ್ ಎರಡೂ ಥರದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಯಜ್ಞಾ ಈ ಪಾತ್ರದಲ್ಲಿ ಹೇಗೆ ಕಾಣಲಿದ್ದಾರೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ತಿಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ