ಸಿಹಿಸುದ್ದಿ ಕೊಟ್ಟ ಯಶ್‌ ದಂಪತಿ

Team Udayavani, Jul 26, 2018, 11:16 AM IST

ಇತ್ತೀಚೆಗೆ ಯಶ್‌ ಖಾಸಗಿ ವಾಹಿನಿಯೊಂದರ ಶೋನಲ್ಲಿ ಭಾಗವಹಿಸಿದ್ದ ವೇಳೆ ಫೋನ್‌ ಲೈವ್‌ಗೆ ಬಂದ ಅವರ ತಾಯಿ ನೇರವಾಗಿ ಒಂದು ಪ್ರಶ್ನೆ ಕೇಳಿದ್ದರು. “ನಾನು ಅಜ್ಜಿ ಆಗೋದು ಯಾವಾಗ’ ಎಂಬ ಪ್ರಶ್ನೆಯನ್ನು ಯಶ್‌ ಮುಂದಿಟ್ಟಿದ್ದಾರೆ. ದಿಢೀರನೇ ಎದುರಾದ ಈ ಪ್ರಶ್ನೆಯಿಂದ ಯಶ್‌ ಒಂದಷ್ಟು ಗಲಿಬಿಲಿಗೊಂಡಿದ್ದರು. ಈಗ ಯಶ್‌ ತಮ್ಮ ತಾಯಿಗೆ ಹಾಗೂ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

ಅದು ತಾವು ತಂದೆಯಾಗುತ್ತಿರುವ ಬಗ್ಗೆ. ಹೌದು, ಯಶ್‌ ಮದುವೆಯಾಗಿ ಎರಡು ವರ್ಷ ಆಗಿದೆ. ಹೋದಲ್ಲಿ ಬಂದಲ್ಲಿ “ಮತ್ತೇನು ವಿಶೇಷ’ ಎಂದು ಯಶ್‌ ದಂಪತಿಯನ್ನು ಅದೆಷ್ಟು ಮಂದಿ ಕೇಳಿದ್ದರೋ ಲೆಕ್ಕವಿಲ್ಲ. ಹಾಗಾಗಿಯೇ ಏನಾದರೂ ವಿಶೇಷವಿದ್ದರೂ ಖಂಡಿತಾ ಅಭಿಮಾನಿಗಳಿಗೆ ತಿಳಿಸುತ್ತೇವೆ ಎಂದು ಹೇಳಿತ್ತು ಈ ಜೋಡಿ. ಆದರಂತೆ ಈಗ ಯಶ್‌ ದಂಪತಿ ತಾವು ತಂದೆ-ತಾಯಿಯಾಗುತ್ತಿರುವ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

ಯಶ್‌ ಅವರ ಫೇಸ್‌ಬುಕ್‌ ಪೇಜ್‌ನಲ್ಲಿ 35 ಸೆಕೆಂಡ್‌ನ‌ ವಿಡಿಯೋವೊಂದನ್ನು ಹಾಕಿ, ಆ ಮೂಲಕ ತಂದೆಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ್ದಾರೆ. “ವೈಜಿಎಫ್’ ಎನ್ನುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಎಲ್ಲಾ ಓಕೆ “ವೈಜಿಎಫ್’ ಎಂದರೆ ಏನು ಎಂದು ನೀವು ಕೇಳಬಹುದು.

“ಯಶ್‌ ಗೋಯಿಂಗ್‌ ಟು ಬಿ ಫಾದರ್‌’ ಎಂಬ ಹೇಳಲಾದ ಈ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ. ಇತ್ತ ಕಡೆ ರಾಧಿಕಾ ಕೂಡಾ ತಮ್ಮ ಟ್ವೀಟರ್‌ನಲ್ಲಿ “ನಾವೀಗ ಮೂವರು’ ಎಂಬರ್ಥದಲ್ಲಿ ಟ್ವೀಟ್‌ ಮಾಡಿದ್ದಾರೆ. ಈ ಸುದ್ದಿ ಕೇಳಿ ಯಶ್‌-ರಾಧಿಕಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಚಿತ್ರರಂಗದಿಂದಲೂ ಶುಭಹಾರೈಕೆಗಳು ಬರುತ್ತಿವೆ. ಇನ್ನು ಯಶ್‌ ತಂಗಿ ಕೂಡಾ ಅತ್ತೆಯಾಗುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ