“ಕೊಡೆ ಮುರುಗ’ದಲ್ಲಿ ಯೋಗಿ ಡ್ಯಾನ್ಸ್
Team Udayavani, Dec 31, 2019, 7:00 AM IST
ನಟ ಯೋಗಿ ಆಗಾಗ ಕೆಲವು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್, ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಈಗ ಹೊಸಬರ ಸಿನಿಮಾವೊಂದರಲ್ಲಿ ಯೋಗಿ ಕಾಣಿಸಿಕೊಂಡಿದ್ದಾರೆ. ಕೆ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಅವರು ನಿರ್ಮಿಸುತ್ತಿರುವ “ಕೊಡೆ ಮುರುಗ’ ಚಿತ್ರದ ಹಾಡಿಗೆ ಲೂಸ್ ಮಾದ ಯೋಗಿ ಹೆಜ್ಜೆ ಹಾಕಿದ್ದಾರೆ.
ಸುಬ್ರಮಣ್ಯ ಪ್ರಸಾದ್ ಅವರು ಬರೆದಿರುವ “ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಎಂಬ ಹಾಡಿನಲ್ಲಿ ಯೋಗಿ ಅಭಿನಯಿಸಿದ್ದಾರೆ. ಲೂಸ್ ಮಾದ ಯೋಗಿ ಹಾಗೂ ಮುನಿಕೃಷ್ಣ ನಟಿಸಿರುವ ಈ ಹಾಡಿಗೆ ಸ್ಟಾರ್ ಗಿರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೈಲಾಶ್ ಖೇರ್ ಈ ಹಾಡನ್ನು ಹಾಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ.