ಶ್ರುತಿ ಬೆಂಬಲಕ್ಕೆ ಕಿರಿಯರು – ಅರ್ಜುನ್‌ ಬೆನ್ನಿಗೆ ಹಿರಿಯರು


Team Udayavani, Oct 23, 2018, 11:49 AM IST

shriti.jpg

ನಟ ಅರ್ಜುನ್‌ ಸರ್ಜಾ ಅವರ ಮೇಲೆ ಶ್ರುತಿಹರಿಹರನ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಒಂದಷ್ಟು ಬೆಳವಣಿಗೆಗಳು ನಡೆದವು. ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಅರ್ಜುನ್‌ ಸರ್ಜಾ ಪರ ಮಾತನಾಡಿದ್ದಾರೆ. ಇನ್ನು ಕೆಲವು ನಟಿಯರು ಶ್ರುತಿಹರಿಹರನ್‌ ಅವರನ್ನು ಬೆಂಬಲಿಸಿದ್ದಾರೆ.

ಅರ್ಜುನ್‌ ಸರ್ಜಾ ಅವರ ಮಾವ ರಾಜೇಶ್‌ ಅವರು ದೂರು ನೀಡಿದರೆ, ಅವರ ತಾಯಿ ಲಕ್ಷ್ಮೀದೇವಮ್ಮ ಶ್ರುತಿ ಕ್ಷಮೆಗೆ ಆಗ್ರಹಿಸಿದ್ದಾರೆ. ಅತ್ತ ಬಿ.ಸರೋಜಾದೇವಿ, ಸುಧಾರಾಣಿ, ತಾರಾ, ಮುನಿರತ್ನ ಅವರೆಲ್ಲರೂ ಸರ್ಜಾ ಅವರ ಬೆನ್ನಿಗೆ ನಿಂತಿದ್ದಾರೆ. ನಟಿ ನೀತು, ಸಂಯುಕ್ತಾ ಹೆಗಡೆ, ಮೇಘನಾ ಗಾಂವ್ಕರ್‌, ಸೋನು, ಶ್ರದ್ಧಾ ಶ್ರೀನಾಥ್‌ ಸೇರಿದಂತೆ ಇತರರು ಶ್ರುತಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆ ಕುರಿತು ಯಾರ್ಯಾರು ಏನೆಲ್ಲಾ ಹೇಳಿದರೆಂಬುದರ ಕುರಿತು ಒಂದು ರೌಂಡಪ್‌…

ಅಣ್ಣಾವ್ರಿಗಿದ್ದ ಸಂಯಮ ಈಗಿನವರಿಗಿಲ್ಲ
ಕನ್ನಡ ಚಿತ್ರರಂಗದ ಮೇರುನಟರಾಗಿದ್ದ ಡಾ.ರಾಜಕುಮಾರ್‌ ಅವರೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಗೌರವಿಸುತ್ತಿದ್ದರು. ಆದರೆ, ಇಂದಿನ ನಟ,ನಟಿಯರಿಗೆ ಆ ಸಂಯಮವೇ ಇಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯಗಳೇನೇ ಇದ್ದರೂ, ಅದು ಮಂಡಳಿಯಲ್ಲಿ ಚರ್ಚೆಯಾಗಬೇಕು, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು, ಬೇರೆ ವೇದಿಕೆಯಲ್ಲಿ ಚರ್ಚಿಸಿದರೆ, ಅಂತಹವರನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ.
-ಎಸ್‌.ಎ.ಚಿನ್ನೇಗೌಡ, ಅಧ್ಯಕ್ಷರು, ಫಿಲ್ಮ್ ಚೇಂಬರ್‌

ಸತ್ಯ ಸಾಬೀತಾಗಲಿ, ಇಲ್ಲವೇ ಕಾಲಿಗೆ ಬಿದ್ದು ಕ್ಷಮೆ ಕೇಳಲಿ
“ಸಿನಿಮಾ ಮುಗಿದ ಮೇಲೂ ಒಂದು ದಿನ ಶೃತಿ ನಮ್ಮ ಮನೆಗೆ ಬಂದಿದ್ದರು. ಅಷ್ಟೆಲ್ಲಾ ಆಗಿದ್ದರೆ, ನಮ್ಮ ಮನೆಗೆ ಬಂದಿದ್ದು ಯಾಕೆ..? ಎರಡು ವರ್ಷದಿಂದ ಏನೋ ಪ್ಲಾನ್‌ ಮಾಡಿದ್ದರು, ಅದು ಆಗದಿದ್ದಾಗ ಈಗ ನನ್ನ ಮಗನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ. ತೇಜೋವಧೆ ಮಾಡುವ ಇಂಥ ಸುಳ್ಳಗಳಿಂದ ಆಕೆಯನ್ನು ಯಾರು ಬಿಟ್ಟರೂ, ನಾನು ಮಾತ್ರ ಬಿಡುವುದಿಲ್ಲ. ಸತ್ಯ ಸಾಬೀತಾಗಬೇಕು ಇಲ್ಲವೇ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು’
-ಲಕ್ಷ್ಮೀ ದೇವಮ್ಮ, ಅರ್ಜುನ್‌ ಸರ್ಜಾ ತಾಯಿ.  

ಸರ್ಜಾ ಅವರದ್ದು ಸುಸಂಸ್ಕೃತ ಕುಟುಂಬ
“ಸುಮಾರು 30  ವರ್ಷಗಳಿಂದ ಸರ್ಜಾ ಕುಟುಂಬವನ್ನು ನೋಡುತ್ತಿದ್ದೇನೆ. ಅವರದ್ದು ಅತ್ಯಂತ ಸುಸಂಸ್ಕೃತ ಕುಟುಂಬ. ನಮ್ಮ ಕುಟುಂಬಕ್ಕೂ ಅವರು ತುಂಬ ಆತ್ಮೀಯರು. ಇನ್ನೂ ಅರ್ಜುನ್‌ ಸರ್ಜಾ ಅವರ ಸ್ವಭಾವವನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟೊಂದು ಗೌರವ ಕೊಡುತ್ತಾರೆ ಎನ್ನುವುದು ನನಗೆ ಗೊತ್ತು. ಇಂಥಹ ವ್ಯಕ್ತಿ ಬಗ್ಗೆ ಈ ರೀತಿ ಮಾತಾಡುವುದು ತಪ್ಪು’
-ಬಿ. ಸರೋಜಾ ದೇವಿ, ಹಿರಿಯ ನಟಿ

ಆರೋಪ ಎಷ್ಟು ನಿಜವೆಂಬುದು ಗೊತ್ತಿಲ್ಲ. 
“ನಾನು ಅರ್ಜುನ್‌ ಸರ್ಜಾ ಅವರನ್ನು ಹತ್ತಿರದಿಂದ ಬಲ್ಲೆ. ಅವರೊಂದಿಗೆ ಅಭಿನಯಿಸಿದ್ದೇನೆ. ನನಗೆಂದೂ ಅವರಿಂದ ಯಾವುದೇ ಕೆಟ್ಟ ಅನುಭವವಾಗಿಲ್ಲ. ನನಗೆ ಗೊತ್ತಿರುವಂತೆ ಅವರೊಬ್ಬ ಸಜ್ಜನ ವ್ಯಕ್ತಿ. ಇದೇ ಮೊದಲ ಬಾರಿಗೆ ಅವರ ಮೇಲೆ ಇಂಥದ್ದೊಂದು ಆರೋಪ ಬಂದಿದೆ. ಇದನ್ನ ನೋಡಿಕೊಳ್ಳೋಕೆ ಚಿತ್ರರಂಗದಲ್ಲಿ ಹಿರಿಯರಿದ್ದಾರೆ. ಅವರು ಇಂಥಹ ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ’
-ಸುಧಾರಾಣಿ, ನಟಿ

ಮಿಟೂ ದುರುಪಯೋಗವಾಗಬಾರದು
“ಅರ್ಜುನ್‌ ಸರ್ಜಾ ಅವರ ಜೊತೆ ನಾನು “ಪ್ರೇಮಾಗ್ನಿ’ ಚಿತ್ರದಲ್ಲಿ ನಟಿಸಿದ್ದೆ. ಅವರು ಸಭ್ಯ, ಶಿಸ್ತಿನ ಮನುಷ್ಯ. ಅವರು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು.  ವೈಯಕ್ತಿಕವಾಗಿ ನನಗೆ ಯಾರ ಕಡೆಯಿಂದಲೂ ಕೆಟ್ಟ ಅನುಭವವಾಗಿಲ್ಲ. ಆದರೆ ಈಗ ಇಂಥ ಆರೋಪಗಳು ಹೆಚ್ಚಾಗುತ್ತಿರುವುದು ಚಿತ್ರರಂಗದ ದುರಂತ. ಶೃತಿ ಹರಿಹರನ್‌ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ನಾನು ಅವರೊಂದಿಗೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಮಿಟೂ ಅಭಿಯಾನ ಒಳ್ಳೆಯದು, ಅದು ದುರುಪಯೋಗವಾಗಬಾರದು’
-ತಾರಾ ಅನುರಾಧ, ನಟಿ 

ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ
“ಅರ್ಜುನ್‌ ಸರ್ಜಾ ವಿರುದ್ದ ಮಾಡಿರುವ ಆರೋಪವನ್ನು ನಿರ್ಮಾಪಕರ ಸಂಘ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಏಳು ದಿನಗಳ ಒಳಗೆ ಸೂಕ್ತ, ಸಾಕ್ಷ್ಯಾಧಾರಗಳು, ದಾಖಲೆಗಳ ಜೊತೆಗೆ ಸ್ಪಷ್ಟವಾಗಿ ಲಿಖೀತ ರೂಪದಲ್ಲಿ ಉತ್ತರಿಸುವಂತೆ ಶೃತಿ ಹರಿಹರನ್‌ ಅವರಿಗೆ ಪತ್ರ ಬರೆಯಲಾಗಿದೆ. ಅವರ ಆರೋಪ ನಿಜವಾಗಿದ್ದಲ್ಲಿ ಸ್ಪಷ್ಟವಾಗಿ ಉತ್ತರಿಸುತ್ತಾರೆ. ಒಂದು ವೇಳೆ ಅವರಿಂದ ಉತ್ತರ ಬರದಿದ್ದಲ್ಲಿ, ಆರೋಪ ಸುಳ್ಳು ಎಂದು ಭಾವಿಸಿ, ಮುಂದಿನ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ’
-ಮುನಿರತ್ನ, ನಿರ್ಮಾಪಕರ ಸಂಘದ ಅಧ್ಯಕ್ಷ

ಸರ್ಜಾ ಬಳಿ ಹಣ, ಅಧಿಕಾರವಿದೆ
“ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಹೆದರುವ ಸಂದರ್ಭದಲ್ಲಿ ಶೃತಿ ಹರಿಹರನ್‌ ಧೈರ್ಯವಾಗಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಾವು ನಟಿಯರಾದ ಕಾರಣ ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್‌ ಮಾಡುತ್ತಾರೆ. ಸರ್ಜಾ ಕುಟುಂಬಕ್ಕೆ ಒಂದು ಇತಿಹಾಸವಿದೆ. ಅವರ ಬಳಿ ಹಣ, ಅಧಿಕಾರ, ಚಿತ್ರರಂಗದ ಬೆಂಬಲವಿದೆ. ಹಾಗಾಗಿ ಎಲ್ಲರೂ ಶೃತಿ ಹರಿಹರನ್‌ ಮೇಲೆ ಸಿಟ್ಟಾಗಿದ್ದಾರೆ. ಇಂಥ ಸಮಯದಲ್ಲಿ ನಾವೆಲ್ಲರೂ ಅವರಿಗೆ ಬೆಂಬಲವಾಗಿ ನೀಡಬೇಕು’
-ಸಂಯುಕ್ತ ಹೆಗಡೆ

ನಾನೂ ಇಂತಹ ಸಮಸ್ಯೆ ಎದುರಿಸಿದ್ದೇನೆ
“ಮಿಟೂ ಚಳುವಳಿ ಕನ್ನಡ ಚಿತ್ರರಂಗದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನು ಸಂಗೀತ ಭಟ್‌, ಶೃತಿ ಹರಿಹರನ್‌ ತಮಗಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ನನ್ನ 13 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ ನಾನು ಕೂಡ ಇಂಥ ಸಂದರ್ಭಗಳನ್ನು ಎದುರಿಸಿದ್ದೇನೆ. ಇಷ್ಟವಾಗದೆ ಇದ್ದರೂ, ಕೆಲವು ಸೀನ್‌ಗಳನ್ನು ನನ್ನಿಂದ ಮಾಡಿಸಿದ್ದಾರೆ. ಇದು ವೃತ್ತಿಪರತೆ ಅಲ್ಲ’
-ನೀತು ಶೆಟ್ಟಿ, ನಟಿ

ಈಗಾದರೂ ಧ್ವನಿ ಎತ್ತಬೇಕು
“ಈಗಲಾದರೂ ನಾವು ಇಂಥಹ ಕ್ರೌರ್ಯದ ವಿರುದ್ದ ಧ್ವನಿ ಎತ್ತಬೇಕು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವವರಿಗೆ ಇಂಥ ಅನುಭವಗಳು ಆಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರು ವೃತ್ತಿಪರತೆಯಿಂದ, ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಹೆಣ್ಣಿನ ಶೋಷಣೆಯ ಬಗ್ಗೆ ಮಾತನಾಡುವವರು ಈಗ ಇದರ ಬಗ್ಗೆ ಮಾತನಾಡಬೇಕು. ಮಿ ಟೂ ಗೆ ಅಭಿಯಾನಕ್ಕೆ ಬೆಂಬಲವಾಗಿ ನಿಲ್ಲಬೇಕು’
-ಶ್ರದ್ಧಾ ಶ್ರೀನಾಥ್‌, ನಟಿ 

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.