ಯೂತ್‌ಫ‌ುಲ್‌ ಫಿದಾ!

ಆಲ್ಬಂನಲ್ಲಿ ಹೊಸಬರ ಶ್ರಮ

Team Udayavani, Jun 20, 2019, 3:00 AM IST

ಚಿತ್ರರಂಗದಲ್ಲಿ ಯಾರೇ ಇರಲಿ, ಅವರಿಗೆ ಒಬ್ಬೊಬ್ಬರು ಸ್ಫೂರ್ತಿಯಾಗಿರುತ್ತಾರೆ. ಅವರ ಸ್ಫೂರ್ತಿಯಿಂದಲೇ ಇಂದು ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎನ್ನುತ್ತಲೇ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ. ಇಲ್ಲೀಗ ಸ್ಫೂರ್ತಿ ವಿಷಯ ಬಂದಿದ್ದು ಯಾಕೆಂದರೆ, ಗಾಯಕ ಕಮ್‌ ನಾಯಕ ಪೃಥ್ವಿರಾಜ್‌ ಅವರು ಡಾ.ವಿಷ್ಣುವರ್ಧನ್‌ ಅವರ ಸ್ಫೂರ್ತಿಯಿಂದ ತಾನೊಬ್ಬ ಗಾಯಕ, ನಾಯಕರಾಗಿದ್ದಾರೆ.

ಆ ಬಗ್ಗೆ ಹೇಳಿಕೊಳ್ಳುವ ಪೃಥ್ವಿರಾಜ್‌, “ನಾನು ಚಿಕ್ಕವನಿದ್ದಾಗಿಂದಲೂ ಡಾ.ವಿಷ್ಣುವರ್ಧನ್‌ ಅವರ ಅಭಿಮಾನಿ. ಒಂದೊಮ್ಮೆ ಅವರನ್ನು ಚಿಕ್ಕಂದಿನಲ್ಲಿ ಭೇಟಿಯಾದಾಗ ನೀನು ಗಾಯಕನಾಗು ಎಂದು ಪ್ರೇರಣೆ ನೀಡಿದ್ದರು. ಅದರಿಂದಲೇ ನಾನು ಈಗ “ಫಿದಾ’ ಹೆಸರಿನ ವಿಡಿಯೋ ಆಲ್ಬಂ ಸಾಂಗ್‌ ಮಾಡಿದ್ದೇನೆ. ಆ ಸಾಂಗ್‌ ಹಾಡಿರುವುದಷ್ಟೇ ಅಲ್ಲ, ನಾಯಕನಾಗಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದೇನೆ ‘ ಎಂದು ವಿವರ ಕೊಟ್ಟರು ಪೃಥ್ವಿರಾಜ್‌.

ಇನ್ನು “ಫಿದಾ’ ಎಂಬುದು ಹಿಂದಿ ಭಾಷೆಯಲ್ಲವೇ ಎಂಬ ಪ್ರಶ್ನೆಯೂ ಇದೆ. ಅದು ಹಿಂದಿ ಭಾಷೆಯೂ ಹೌದು. ಆದರೆ, ಈ ಪದ ಕನ್ನಡದಲ್ಲೂ ಇದೆ ಎಂಬುದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ತಿಳಿಹೇಳಿದ್ದಾರೆ ಎಂಬುದು ಪೃಥ್ವಿರಾಜ್‌ ಮಾತು. ಅಂದಹಾಗೆ, “ಫಿದಾ’ ಈಗಿನ ಯೂಥ್ಸ್ಗೆ ಸಂಬಂಧಿಸಿದ ಆಲ್ಬಂ. ಇಲ್ಲಿ ಪ್ರೀತಿಗೊಂದು ವಿಶೇಷ ಅರ್ಥವಿದೆ.

ಈ ಪ್ರೀತಿಯ ಕಥೆಯಲ್ಲಿ ಹುಡುಗ-ಹುಡುಗಿಯ ಮೊದಲ ಭೇಟಿ, ಪರಿಚಯ. ಅವಳು ಪ್ರೀತಿಸುತಿದ್ದಾಳೆಂದು ತಪ್ಪಾಗಿ ತಿಳಿಯುವ ಹುಡುಗ, ನಂತರ ಆ ವಿಷಯವನ್ನು ಆಕೆಗೆ ತಿಳಿಸಲು ಹೋದಾಗ ಆಕೆ ಮದುವೆಗೆ ಆಹ್ವಾನ ನೀಡುವುದು. ಆರತಕ್ಷತೆಯಲ್ಲಿ ಅವನು ಹಾಡುವುದರೊಂದಿಗೆ ಮುಕ್ತಾಯ ಕಾಣುವಂತಹ ಅಂಶಗಳು ಈ ಆಲ್ಬಂ ಸಾಂಗ್‌ನಲ್ಲಿದೆ ಎಂಬುದು ಪೃಥ್ವಿರಾಜ್‌ ಮಾತು.

ಈ “ಫಿದಾ’ ಆಲ್ಬಂಗೆ ಸಾತ್ವಿಕಾ ಅಪ್ಪಯ್ಯ ನಾಯಕಿಯಾಗಿದ್ದಾರೆ. ಶ್ರೀಶ ಭಟ್‌ ನಿರ್ದೇಶನವಿದೆ. ವರುಣ್‌ ರಾಮಚಂದ್ರ-ಪೃಥ್ವಿರಾಜ್‌ ಸಂಗೀತವಿದೆ. ಯಶ್‌ರಾಥಿ ಛಾಯಾಗ್ರಹಣ ಮಾಡಿದರೆ, ಜತಿಂದರ್‌ ಮತ್ತು ಅಕ್ಷಯ್‌ ಆಲ್ಬಂ ಹಿಂದೆ ನಿಂತು ಕೆಲಸ ಮಾಡಿದ್ದಾರೆ. ಇನ್ನು,
“ನಿನ್ನ ಪರಿಚಯ…’ ಹಾಡಿಗೆ ಜಯಂತ್‌ಕಾಯ್ಕಣಿ ಪದ‌ಳನ್ನು ಪೋಣಿಸಿದ್ದಾರೆ. ಬೆಂಗಳೂರು, ಮೈಸೂರು ಇತರೆಡೆ ಚಿತ್ರೀಕರಿಸಲಾಗಿದೆ. ಈ “ಫಿದಾ’ ಆಲ್ಬಂ ಬಿಡುಗಡೆ ಮಾಡಿದ ನಟ, ನಿರ್ದೇಶಕ ಅನಿರುದ್ದ್ ತಂಡದ ಪರಿಶ್ರಮ ಶ್ಲಾಘಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಅಭಿನಯದ "ರಾಬರ್ಟ್‌' ಆರಂಭದಿಂದಲೂ ಜೋರು ಸುದ್ದಿ ಮಾಡುತ್ತಲೇ ಬಂದಿದೆ. ಕಳೆದ ಕ್ರಿಸ್‌ಮಸ್‌ ಹಬ್ಬಕ್ಕೊಂದು ಹೊಸ ಪೋಸ್ಟರ್‌ ಬಿಡುವ ಮೂಲಕ ಸಾಕಷ್ಟು ಕುತೂಹಲ...

  • ಧನ್ವೀರ್‌ ನಾಯಕರಾಗಿರುವ "ಬಂಪರ್‌' ಚಿತ್ರದ ಮುಹೂರ್ತ ಬುಧವಾರ ನಡೆಯಿತು. ನಟ ದರ್ಶನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು....

  • "ನಂಗೆ ಕೇಶವ ಅವ್ರು ಬಟ್ಟೆ, ಬರೆ,ಊಟ ಎಲ್ಲವ್ನು ಕೊಟ್ಟು ಸಂತೋಷದಿಂದ ನೋಡ್ಕೊಂಡಿದ್ದಾರೆ. ಎಲ್ರೂವ ಸಿನ್ಮಾ ನೋಡ್ಬೇಕು...' ಹೀಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದು...

  • "ವಿರಾಟಪರ್ವ' ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಎರಡನೇ ಪೋಸ್ಟರ್‌ ಬಿಡುಗಡೆಯಾಗಿದೆ. ಕಳೆದ ಬಾರಿ ಚಿತ್ರದ ಮೊದಲ ಪೋಸ್ಟರ್‌...

  • ಶ್ರೀಕಿ ಅಭಿನಯದ "ಒಲವೇ ಮಂದಾರ' ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಒಂದು ಅಪರೂಪದ ಪ್ರೀತಿಯ ಕಥಾಹಂದರ ಹೊಂದಿದ್ದ ಸಿನಿಮಾದಲ್ಲಿ ಪ್ರೀತಿಯೇ ಹೈಲೈಟ್‌...

ಹೊಸ ಸೇರ್ಪಡೆ