ಅಭಿಮಾನಿಗಳಿಗೆ ಯುವರಾಜ್‌ ಕುಮಾರ್‌ ಥ್ಯಾಂಕ್ಸ್‌

ಫ‌ಸ್ಟ್‌ ಲುಕ್‌ಗೆ ಮೆಚ್ಚುಗೆ ಹಿನ್ನೆಲೆ

Team Udayavani, Apr 29, 2020, 11:52 AM IST

ಅಭಿಮಾನಿಗಳಿಗೆ ಯುವರಾಜ್‌ ಕುಮಾರ್‌ ಥ್ಯಾಂಕ್ಸ್‌

ಕನ್ನಡ ಚಿತ್ರರಂಗದ ಮೇರು ನಟ ದಿವಂಗತ ಡಾ.ರಾಜ್‌ ಕುಟುಂಬದ ಇನ್ನೊಂದು ಕುಡಿ ಸ್ಯಾಂಡಲ್‌ವುಡ್‌ ಗೆ ಎಂಟ್ರಿ ಕೊಡೋದಕ್ಕೆ ಸಿದ್ಧವಾಗುತ್ತಿದೆ. ರಾಘವೇಂದ್ರ ರಾಜ್‌ ಕುಮಾರ್‌ ಅವರ ದ್ವಿತೀಯ ಪುತ್ರ ಯುವರಾಜ್‌ ಕುಮಾರ್‌ ಯುವ-01 ಚಿತ್ರದ ಮೂಲ ಚಂದನವನಕ್ಕೆ ಬಲಗಾಲಿಟ್ಟು ಬರುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಫ‌ಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ನಟ ಯುವರಾಜ್‌ ಕುಮಾರ್‌ ಖಡಕ್‌ ಲುಕ್‌ಗೆ ಸಖತ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಯುವರಾಜ್‌ ಕುಮಾರ್‌ ಲುಕ್‌ಗೆ ಫಿದಾ ಆಗಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಯುವ-01 ಪ್ರೊಡಕ್ಷನ್‌ ಹೆಸರಿಟ್ಟಿದ್ದು, ಇತ್ತೀಚೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.  ಕೋವಿಡ್ 19 ಭೀತಿ ಹಿನ್ನೆಲೆ ಚಿತ್ರೀಕರಣ ಆರಂಭವಾಗಿಲ್ಲ. ಕೇವಲ ಪೋಸ್ಟರ್‌ ಮಾತ್ರ ರಿಲೀಸ್‌ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಯುವರಾಜ್‌ ಪೋಸ್ಟರ್‌ ಭಾರೀ ವೈರಲ್‌ ಆಗಿದೆ. ಮೊದಲ ಬಾರಿಗೆ ಯುವರಾಜ್‌ ಕುಮಾರ್‌ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ಪುನೀತ್‌ ರುದ್ರಾಕರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಯುವರಾಜ್‌ ಕುಮಾರ್‌ ಲುಕ್‌ ಮತ್ತು ಕಥೆಗಾಗಿ ಸಾಥ್‌ ನೀಡಿದ್ದಾರೆ. ಅನೇಕರು ಯುವರಾಜ್‌ ಅವರು ಕೆಲವು ಆಂಗಲ್‌ಗ‌ಳಲ್ಲಿ ಅಣ್ಣಾವ್ರ ರೀತಿಯೇ ಕಾಣುತ್ತೀರಿ ಎಂದಿದ್ದಾರೆ. ಜೊತೆಗೆ ಚಿತ್ರರಂಗದಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಸುದೀಪ್‌ ಸೇರಿದಂತೆ ಅನೇಕರು ಮೆಚ್ಚುಗೆಯ ಮಾತುಗಳನ್ನಾಡಿ ಶುಭಕೋರಿದ್ದಾರೆ. ಇನ್ನು ತಮ್ಮ ಮೊದಲ ಚಿತ್ರದ ಫ‌ಸ್ಟ್‌ ಲುಕ್‌ಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಕಂಡು ಯುವರಾಜ್‌ ಕುಮಾರ್‌ ಭಾವುಕರಾಗಿದ್ದಾರೆ. ಜೊತೆಗೆ ತಮ್ಮ ಧನ್ಯವಾದ ಕೂಡಾ ಹೇಳಿದ್ದಾರೆ.

ನೀವು ನನ್ನ ಮೇಲೆ ಸುರಿಸಿದ ಪ್ರೀತಿ ಆಶೀರ್ವಾದಗಳ ಸುರಿಮಳೆಗೆ, ಧನ್ಯವಾದಗಳು ಸಾಕಾಗುವುದಿಲ್ಲ, ಜೀವನದುದ್ದಕ್ಕೂ ನುಡಿಯ ಸೇವಕನಾಗಿ ನಿಮ್ಮ ಹೃದಯದಲ್ಲಿ ಬದುಕಲು ಶ್ರಮಿಸುತ್ತೇನೆ ಎಂದಿದ್ದಾರೆ. ಮಗನ ಮೊದಲ ಚಿತ್ರದ ಪೋಸ್ಟರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ರಾಘವೇಂದ್ರ ರಾಜ್‌ಕುಮಾರ್‌ ಅವರಿಗೂ ಖುಷಿ ನೀಡಿದೆ. ಅವರು ಕೂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಚಿಕ್ಕ ಮಗನ ಫ‌ಸ್ಟ್‌ ಲುಕ್‌ ಪೋಸ್ಟರ್‌ ನಿಮ್ಮ ಮಡಿಲಿಗೆ ಹಾಕಿದ್ದೆವು. ಅದಕ್ಕೆ ನೀವೆಲ್ಲ ಪ್ರತಿಕ್ರಿಯೆ ಕಳಿಸಿ ಅನಿಸಿಕೆ ಹಂಚಿಕೊಂಡಿರಿ. ರಿವ್ಯೂಸ್‌ ಹಂಚಿಕೊಂಡಿರಿ. ನಾವು ಎಲ್ಲವನ್ನೂ ಓದಿದ್ದೇವೆ. ಖುಷಿಯಾಯ್ತು ಎಂದಿದ್ದಾರೆ. ಕೋವಿಡ್ 19 ಮುಗಿದ ಬಳಿಕ ಚಿತ್ರೀಕರಣ ಆರಂಭವಾಗಲಿದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.