Zebra Movie: ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್
Team Udayavani, Oct 3, 2024, 7:05 PM IST
ಡಾಲಿ ಧನಂಜಯ್ ನಟನೆಯ “ಜೀಬ್ರಾ’ ಚಿತ್ರ ಅಕ್ಟೋಬರ್ 31ಕ್ಕೆ ತೆರೆಕಾಣುತ್ತಿದೆ. ತೆಲುಗು ನಟ ಸತ್ಯದೇವ್ ಜೊತೆಗೂಡಿ ಜೀಬ್ರಾ ಕಥೆ ಹೇಳಲು ಧನಂಜಯ್ ರೆಡಿಯಾಗಿದ್ದು, ಈಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ನಟ ಶಿವರಾಜ್ ಕುಮಾರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಜೀಬ್ರಾ ಮಲ್ಟಿಸ್ಟಾರ್ ಸಿನಿಮಾ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಇದು ಧನಂಜಯ್ ಅಭಿನಯದ 26ನೇ ಸಿನಿಮಾ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಜೀಬ್ರಾ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡಾಲಿ ವೈಟ್ ಹಾರ್ಸ್, ಸತ್ಯದೇವ್ ಬ್ಲಾಕ್ ಹಾರ್ಸ್ ಎಂದು ಪರಿಚಯ ಮಾಡಿಕೊಡಲಾಗಿದೆ. ಎಸ್. ಎನ್. ರೆಡ್ಡಿ, ಎಸ್. ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಜೀಬ್ರಾ ಸಿನಿಮಾಗೆ ಈಶ್ವರ್ ಕಾರ್ತಿಕ್ ನಿರ್ದೇಶನ ವಿದೆ. ಧನಂಜಯ್ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic: ʼಟಾಕ್ಸಿಕ್ʼ ಶೂಟ್‌ನಲ್ಲಿ ಯಶ್; ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್
Ashwini Chandrashekar; ರಿಪ್ಪನ್ ಸ್ವಾಮಿಗೆ ಜೋಡಿಯಾದ ಕನ್ನಡದ ಬಹು ಭಾಷಾ ನಟಿ ಅಶ್ವಿನಿ
Toxic: ಯಶ್ ಚಿತ್ರಕ್ಕೆ ಬಂದ ಹಾಲಿವುಡ್ ನ ಜೆ.ಜೆ.ಪೆರ್ರಿ
Sangeetha Santhosha Movie: ಸಂತೋಷ ಕೂಟದಲ್ಲಿ ಸಂಗೀತದ ಔತಣ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
SP ಗಲಭೆಕೋರರು, ಅಪರಾಧಿಗಳ ನಿರ್ಮಾಣ ಸಂಸ್ಥೆ,ಅಖಿಲೇಶ್ ಸಿಇಒ: ಯೋಗಿ ಕಿಡಿ
Toxic: ʼಟಾಕ್ಸಿಕ್ʼ ಶೂಟ್‌ನಲ್ಲಿ ಯಶ್; ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್
Mangaluru; ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹ*ತ್ಯೆ ಯತ್ನ: ಸ್ಥಳೀಯರಿಂದ ರಕ್ಷಣೆ!
Udupi; ಗೀತಾರ್ಥ ಚಿಂತನೆ 89: ಮಾನಸಿಕ ನಪುಂಸಕತನದ ಪತ್ತೆ
Mangaluru: ನಗರದ ಪೆಟ್ರೋಲ್ ಪಂಪ್ ಬಳಿಯೇ ಹೊತ್ತಿ ಉರಿದ ಕಾರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.