ಇದು ಪಡ್ಡೆಹುಲಿಯ ಮತ್ತೊಂದು ರಹಸ್ಯ!

Team Udayavani, Apr 14, 2019, 10:39 AM IST

ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ನಿರ್ದೇಶಕ ಗುರುದೇಶಪಾಂಡೆ ಈ ಚಿತ್ರ ತೆರೆಗೆ ಬರುವ ಕಡೇ ಘಳಿಗೆಯವರೆಗೂ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಡುತ್ತಲೇ ಇರುವ ತೀರ್ಮಾನ ಮಾಡಿರುವಂತಿದೆ!

ಈ ಚಿತ್ರದಲ್ಲಿ ಒಂದಷ್ಟು ನಟ ನಟಿಯರು ವಿಸೇಷವಾದ ಪಾತ್ರಗಳಿಗೆ ಜೀವ ತುಂಬಿರೋದು ಗೊತ್ತೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಕೂಡಾ ಇಲ್ಲಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಕೂಡಾ ಕರ್ಣನಾಗಿ ನಟಿಸಿದ್ದಾರೆ. ಆದರೆ ಪಡ್ಡೆ ಹುಲಿಗೆ ಮತ್ತೋರ್ವ ಸ್ಟಾರ್ ನಟ ಕೂಡಾ ಸಾಥ್ ನೀಡಿದ್ದಾರಂತೆ.

ಇದುವರೆಗೂ ಪಡ್ಡೆಹುಲಿ ಚಿತ್ರದಲ್ಲಿ ಈ ಸ್ಟಾರ್ ನಟ ನಟಿಸಿರೋದರ ಬಗ್ಗೆ ಸಣ್ಣ ಸುಳಿವೂ ಬಿಟ್ಟುಕೊಡದಂತೆ ನಿರ್ದೇಶಕರು ಎಚ್ಚರವಹಿಸಿದ್ದರು. ಇದೀಗ ರಹಸ್ಯವನ್ನು ಇದೇ ತಿಂಗಳ ಏಳನೇ ತಾರೀಕಿನಂದು ಜಾಹೀರು ಮಾಡಲು ಅವರು ನಿರ್ಧರಿಸಿದ್ದಾರಂತೆ.

ಅಷ್ಟಕ್ಕೂ ಪಡ್ಡೆಹುಲಿ ಚಿತ್ರದಲ್ಲಿ ನಟಿಸಿರೋ ಆ ಸ್ಟಾರ್ ನಟ ಯಾರು ಅನ್ನೋ ಕುತೂಹಲ ಎಲ್ಲರಲ್ಲಿಯೂ ಇದೆ. ಅವರು ಅಂತಿಂತಾ ಸ್ಟಾರ್ ಅಲ್ಲ. ಪವರ್ ಫುಲ್ ಸ್ಟಾರ್. ಅವರ್ಯಾರೆಂಬುದು ದಿನದೊಪ್ಪತ್ತಿನಲ್ಲಿಯೇ ಗೊತ್ತಾಗಲಿದೆ!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ