ಇಫಿ 50 : ವಿದ್ಯುನ್ಮಾನ ಪ್ರದರ್ಶನವೆಂಬ ಹೊಸ ಜಗತ್ತು

Team Udayavani, Nov 25, 2019, 2:08 PM IST

iffi

ಪಣಜಿ: ಈ ಬಾರಿಯ ಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ [ಇಫಿ] ಪ್ರೇಕ್ಷಕರನ್ನು ಮತ್ತು ಕುತೂಹಲಿಗರನ್ನು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವುದು ಇಫಿ ಸುವರ್ಣ ವರ್ಷ ಕುರಿತಾದ ಇಂಟರ್ಯಾಕ್ಟಿವ್‌ ಪ್ರದರ್ಶನ.

ಕಲಾ ಅಕಾಡೆಮಿ ಆವರಣದಲ್ಲಿ ರೂಪಿಸಲಾದ ಈ ಪ್ರದರ್ಶನ ಮಳಿಗೆಯಲ್ಲಿ ಒಳಹೊಕ್ಕರೆ ಇಫಿ 50 ವರ್ಷಗಳಲ್ಲಿ ನಡೆದು ಬಂದ ದಾರಿ ತಿಳಿಯಬಲ್ಲದು.
ಈ ಪ್ರದರ್ಶನದಲ್ಲಿ ವಿಶೇಷವೆಂದರೆ ವಿದ್ಯುನ್ಮಾನ ತಂತ್ರಜ್ಣಾನವನ್ನು ಬಳಸಿಕೊಂಡು ರೂಪಿಸಿರುವುದು. ಇಫಿಯ 50 ವರ್ಷದ ಸಂಗತಿಗಳನ್ನು ನಿಮಗಿದು ಗೊತ್ತೇ ಎಂಬ ಮಾದರಿ ಮೂಲಕ ಹೇಳುತ್ತಾ ಹೋದರೆ, ಹೆಬ್ಬಾಗಿಲು ತುಂಬಾ ಇಫಿಯಲ್ಲಿ ಪ್ರದರ್ಶಿತವಾದ ಪ್ರಮುಖ ಚಿತ್ರಗಳ ವಿದ್ಯುನ್ಮಾನ ಪೋಸ್ಟರ್‌ಗಳು ಸ್ವಾಗತಿಸುತ್ತವೆ. ಅದರಲ್ಲಿ ಕನ್ನಡದ ಸ್ಕೂಲ್‌ ಮಾಸ್ಟರ್‌ ಸಹ ವಿಜೃಂಭಿಸುತ್ತಿದೆ.

ಬಳಿಕ ನಿಮಗೆ ಸಿಗುವುದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಬಗ್ಗೆ. ಅಲ್ಲಿ ಕನ್ನಡದ ಮೇರು ನಟ ಡಾ. ರಾಜಕುಮಾರ್‌ ಬಗ್ಗೆಯೂ ಇದೆ. ಅದಾಗಿ ಇಫಿಯ ಮನೆಯೊಳಗೆ ಹೊಕ್ಕರೆ ವಿವಿಧ ರೀತಿಯಲ್ಲಿ ಪ್ರೇಕ್ಷಕರಿಗೆ ಇಫಿಯ ೫೦ ವರ್ಷದ ಹಾದಿಯನ್ನು ವಿವರಿಸಲಾಗುತ್ತದೆ.

ಭಿತ್ತಿಚಿತ್ರಗಳಲ್ಲಿ ಇಫಿ, ಸುದ್ದಿಗಳಲ್ಲಿ ಇಫಿ, ಛಾಯಾಚಿತ್ರಗಳಲ್ಲಿ ಇಫಿ ಹೀಗೆ ವಿವಿಧ ವಿಭಾಗಗಳಿವೆ. ಇವೆಲ್ಲವೂ ವಿದ್ಯುನ್ಮಾನವಾಗಿರುವುದರಿಂದ ಟಚ್‌ ಸ್ಕ್ರೀನ್‌ ಮೂಲಕ ನಿಮಗೆ ಬೇಕಾದದ್ದನ್ನು ನೋಡಬಹುದು. ಹಾಗೆಯೇ 23 ನಿಮಿಷಗಳ ಸಣ್ಣದೊಂದು ಸಾಕ್ಷ್ಯಚಿತ್ರವೂ ಪ್ರದರ್ಶಿತವಾಗುತ್ತಿದೆ. ಇದಲ್ಲದೇ, ಈಗಿನ ಟೆಕ್ನಾಲಜಿಯನ್ನು ಹೇಳುವ ಸಲುವಾಗಿ ವಿಆರ್‌ ಮತ್ತು ಎಆರ್‌ ಘವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್‌ ರಿಯಾಲಿಟಿ] ಟೆಕ್ನಾಲಜಿಯ ಅನುಭವಕ್ಕೂ ವೇದಿಕೆ ಕಲ್ಪಿಸಲಾಗಿದೆ.

ಇಷ್ಟೇ ಅಲ್ಲ ; ಅಲ್ಲಿಗೆ ಹೋಗಿ ಕ್ವಿಜ್‌ ನ್ನೂ ಆಡಬಹುದು. ತಮಗೆ ಇಷ್ಟ ಬಂದ ನಟ/ನಟಿಯರನ್ನೂ ಟಚ್‌ ಸ್ಕ್ರೀನ್‌ ನಲ್ಲಿ ಸೃಷ್ಟಿಸಿ ಅವರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವುದೊಂದು ಇದ್ದಿದ್ದರೆ ಇಫಿ ಫೆಸ್ಟಿವಲ್‌ ಗಿಂತ ಹೆಚ್ಚು ಜನ ಅಲ್ಲೇ ಇರುತ್ತಿದ್ದರೇನೋ?

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.